ತುಮಕೂರು: ಒಂದೇ ದಿನದಲ್ಲಿ ಅತಿ ಹೆಚ್ಚು ಕೊರೋನಾ ಕೇಸ್ ದಾಖಲು

ಗುರುವಾರ ಒಂದೇ ದಿನ ತುಮಕೂರಿನಲ್ಲಿ 257 ಅತಿ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು,10,203 ಕೇಸ್ ಗಳು ದಾಖಲಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಗುರುವಾರ ಒಂದೇ ದಿನ ತುಮಕೂರಿನಲ್ಲಿ 257 ಅತಿ ಹೆಚ್ಚಿನ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು,10,203 ಕೇಸ್ ಗಳು ದಾಖಲಾಗಿವೆ.

ಪ್ರತಿದಿನ ಸುಮಾರು 1ಸಾವಿರ ಮೇಲೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿದ್ದು, ಅದರಲ್ಲಿ ಶೇ.10ರಷ್ಟು ಪಾಸಿಟಿವ್ ಕಂಡು ಬರುತ್ತಿದೆ. ವಿವಿಧ ಪ್ರಯೋಗಾಲಯಗಳಲ್ಲಿ ಸರಾಸರಿ 1,500 ಟೆಸ್ಟ್ ಮಾಡಲಾಗುತ್ತಿದೆ.

ಸಾವಿನ ಸಂಖ್ಯೆ 204 ರಷ್ಟಿದ್ದರೆ, ಚೇತರಿಕೆಯ ಪ್ರಮಾಣವು ಶೇಕಡಾ 73 ಕ್ಕಿಂತ ಹೆಚ್ಚಾಗಿದೆ. ಆರಂಭದಲ್ಲೇ ಹೆಚ್ಚು ಪರೀಕ್ಷೆ ಮಾಡುತ್ತಿದ್ದು, ಗುಣಮುಖರಾಗುವವರ ಸಂಖ್ಯೆಯೂ ಏರುತ್ತಿದೆ. ಮರಣ ಪ್ರಮಾಣವು ಒಂದು ತಿಂಗಳ ಹಿಂದೆ ದಾಖಲಾಗಿದ್ದಕ್ಕಿಂತ ಶೇಕಡಾ 3 ರಷ್ಟು ಕಡಿಮೆಯಾಗಿದೆ.

ಲಕ್ಷಣ ರಹಿತ ಸೋಂಕಿನ ಹಲವು ಪ್ರಕರಣಗಳಿವೆ, ಆದರೆ ಅವುಗಳಲ್ಲಿ ಹೆಚ್ಚಿನಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂಬಿ ನಾಗೇಂದ್ರಪ್ಪ ತಿಳಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಗಳನ್ನು 21ರಿಂದ 40 ಕ್ಕೇರಿಸುವುದು ಮತ್ತು ಆಮ್ಲಜನಕ ಘಟಕ ಸ್ಥಾಪಿಸುವ ಕೆಲಸ ಹಂತಹಂತವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಿನಕ್ಕೆ 35 ಸಾವಿರ ರು ದರ ವಿಧಿಸುತ್ತಿದ್ದಾರೆ ಎಂದು ಜಿಲ್ಲಾ ಸರ್ಜನ್ ಟಿ ಎ ವಿರಭದ್ರಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com