ಬ್ಯಾಗ್ ನಲ್ಲಿ ಪಿಸ್ತೂಲ್ ಪತ್ತೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬಂಧನ

 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರನ್ನು ಶನಿವಾರ ತಮ್ಮ ಕ್ಯಾಬಿನ್ ಬ್ಯಾಗ್‌ನಲ್ಲಿ ಪಿಸ್ತೂಲ್ ಕೊಂಡೊಯ್ದ ಕಾರಣಕ್ಕಾಗಿ ಬಂಧಿಸಿದ್ದಾರೆ.
ಆನಂದ್ ಅಸ್ನೋಟಿಕರ್
ಆನಂದ್ ಅಸ್ನೋಟಿಕರ್
Updated on

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರನ್ನು ಶನಿವಾರ ತಮ್ಮ ಕ್ಯಾಬಿನ್ ಬ್ಯಾಗ್‌ನಲ್ಲಿ ಪಿಸ್ತೂಲ್ ಕೊಂಡೊಯ್ದ ಕಾರಣಕ್ಕಾಗಿ ಬಂಧಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಸಿಐಎಸ್ಎಫ್ ಭದ್ರತಾ ಪರಿಶೀಲನೆಯ ಸಮಯದಲ್ಲಿ, ಪಿಸ್ತೂಲ್ ಅನ್ನು ಚೀಲದಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. 

ಗೋವಾಕ್ಕೆ ತೆರಳುವ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಸ್ನೋಟಿಕರ್ ಅವರನ್ನು ಸಿಬ್ಬಂದಿಗಳು ಪರಿಶೀಲಿಸಿದಾಗ ಪಿಸ್ತೂಲ್ ಸಿಕ್ಕಿದೆ.

ಘಟನೆಯನಂತರ  ಸಿಐಎಸ್ಎಫ್ ಸಿಬ್ಬಂದಿ ಅಸ್ನೋಟಿಕರ್ ಅವರನ್ನು ವಶಕ್ಕೆ ತೆಗೆದುಕೊಂಡರು ಮತ್ತು ತನಿಖೆ ಕೈಗೊಂಡಿದ್ದಾರೆ.

ಮಾಜಿ ಸಚಿವ ಅಸ್ನೋಟಿಕರ್  ಭದ್ರತಾ ಸಿಬ್ಬಂದಿಗೆ ತಮ್ಮಬಳಿ ಪಿಸ್ತೂಲಿನ ಪರವಾನಗಿ ಇರುವುದಾಗಿ ತಿಳಿಸಿದ್ದಾರೆ. ತಾನೊಬ್ಬ ಉದ್ಯಮಿಯಾಗಿದ್ದು ಆತ್ಮರಕ್ಷಣೆಗಾಗಿ ಪಿಸ್ತೂಲನ್ನು ಇರಿಸಿಕೊಂಡಿದ್ದಾಗಿ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com