ಆನ್‌ಲೈನ್ ವಂಚನೆ: ಹರಿಯಾಣ ಪೋಲೀಸರಿಂದ ಸಿನಿಮೀಯ ಶೈಲಿಯಲ್ಲಿಗದಗ ಯುವಕನ ಬಂಧನ

ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸಮಯ. ಎಲ್ಲವೂ ಶಾಂತವಾಗಿದ್ದ ಸವದಿ ಗ್ರಾಮದಲ್ಲಿ ಚಲನಚಿತ್ರದಲ್ಲಿ ಇದ್ದಕ್ಕಿದ್ದಂತೆ ಏನೋ ಘಟಿಸಿದಾಗ ನಡೆಯುವಂತೆ ಗ್ರಾಮಸ್ಥರು ಗಾಬರಿಗೊಂಡು ಹೊರಬಂದಿದ್ದರು. ಅದಾಗ . ಕಾರಿನಲ್ಲಿ ಬಂದ ನಾಲ್ಕು ವ್ಯಕ್ತಿಗಳು, ಯುವಕನೊಬ್ಬನನ್ನು ಬಲವಂತವಾಗಿ ಕರೆದೊಯ್ದಿದ್ದರು.  ಗ್ರಾಮಸ್ಥರು ಆ ಯುವಕನನ್ನು ರಕ್ಷಿಸಲು ಮುಂದಾದ ವೇಳೆ  ಕಾರಿನಲ್ಲಿದ್ದವರು ಪಿ
ಆನ್‌ಲೈನ್ ವಂಚನೆ: ಹರಿಯಾಣ ಪೋಲೀಸರಿಂದ ಸಿನಿಮೀಯ ಶೈಲಿಯಲ್ಲಿಗದಗ ಯುವಕನ ಬಂಧನ
Updated on

ಗದಗ: ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸಮಯ. ಎಲ್ಲವೂ ಶಾಂತವಾಗಿದ್ದ ಸವದಿ ಗ್ರಾಮದಲ್ಲಿ ಚಲನಚಿತ್ರದಲ್ಲಿ ಇದ್ದಕ್ಕಿದ್ದಂತೆ ಏನೋ ಘಟಿಸಿದಾಗ ನಡೆಯುವಂತೆ ಗ್ರಾಮಸ್ಥರು ಗಾಬರಿಗೊಂಡು ಹೊರಬಂದಿದ್ದರು. ಅದಾಗ . ಕಾರಿನಲ್ಲಿ ಬಂದ ನಾಲ್ಕು ವ್ಯಕ್ತಿಗಳು, ಯುವಕನೊಬ್ಬನನ್ನು ಬಲವಂತವಾಗಿ ಕರೆದೊಯ್ದಿದ್ದರು.  ಗ್ರಾಮಸ್ಥರು ಆ ಯುವಕನನ್ನು ರಕ್ಷಿಸಲು ಮುಂದಾದ ವೇಳೆ  ಕಾರಿನಲ್ಲಿದ್ದವರು ಪಿಸ್ತೂಲ್  ತೋರಿಸಿ ಅವರನ್ನು ದೂರಕ್ಕೆ ಅಟ್ಟಿದ್ದಾರೆ. ಕಡೆಗೆ ತಿಳಿದುಬಂದ ವಿಚಾರವೆಂದರೆ ಹಾಗೆ ಕಾರಿನಲ್ಲಿ ಬಂದ ವ್ಯಕ್ತಿಗಳು ಪೋಲೀಸರಾಗಿದ್ದರು. 

ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ರಾಜಹುಸ್ಸೇನ್ ಸೊತ್ನಾಲ್ ಎಂಬ ಯುವಕನನ್ನು ಹರಿಯಾಣ ರಾಜ್ಯ ಪೊಲೀಸರು ಕರೆದೊಯ್ದಿದ್ದಾರೆ ಎಂದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಗ್ರಾಮಸ್ಥರು ದಿಗ್ಭ್ರಮೆಗೆ ಒಳಗಾಗಿದ್ದರು.

ರಾಜಹುಸ್ಸೇನ್ ನನ್ನು ಬಂಧಿಸುವ ಮೊದಲು ಚಲನಚಿತ್ರದಲ್ಲಿ ತೋರಿಸುವಂತೆ ಆಕ್ಷನ್ ಡ್ರಾಮಾ ಒಂದು ನಡೆದಿತ್ತು. ಮುಫ್ತಿಯಲ್ಲಿರುವ ಹರಿಯಾಣ ಪೊಲೀಸರು ಶುಕ್ರವಾರ ಮಧ್ಯಾಹ್ನ  ರೋಣಗೆ ಆಗಮಿಸಿ  ರಾಜಹುಸ್ಸೇನ್‌ಗೆ ಕರೆ ಮಾಡಿ ಅವನು ಗೆದ್ದ ಆನ್‌ಲೈನ್ ಬಹುಮಾನದ  ಹಣವನ್ನು ನೀಡಲು ಬಂದಿರುವುದಾಗಿ ತಿಳಿಸಿದರು. ಮತ್ತು ಅವನನ್ನು ಗ್ರಾಮದ ದೇವಾಲಯದ ಬಳಿ ಬರಲು ಹೇಳಿದ್ದಾರೆ. ಆರೋಪಿ ರಾಜಹುಸ್ಸೇನ್  ಅಲ್ಲಿಗೆ ಬಂಡಾಗ ಪೋಲೀಸರು  ಅವನ ವಿವರಗಳನ್ನು ಕೇಳಿದ ನಂತರ ಇದ್ದಕ್ಕಿದ್ದಂತೆ ಅವರನ್ನು ಕಾರಿನೊಳಗೆ ತಳ್ಳಿದರು.

ಆ ವೇಳೆ ಗ್ರಾಮಸ್ಥರು ಪೋಲೀಸರ ವಾಹನವನ್ನು ಅವರು ಪೋಲೀಸರೆನ್ನುವ ಅರಿವಿಲ್ಲದೆ ಮುತ್ತಿಗೆ ಹಾಕಿದ್ದರು. ಆದರೆ ಪೋಲೀಸರು ಪೋಲೀಸರು ಗ್ರಾಮಸ್ಥರ ಕಡೆ ಪಿಸ್ತೂಲ್ ತೋರಿಸಿ ಅವರನ್ನು ಚದುರುಸುದ್ದಾರೆ. ರಾಜಹುಸ್ಸೇನ್ ಅಪರಾಧ ಎಸಗಿದ್ದಾನೆಂದು ಗ್ರಾಮಸ್ಥರಿಗೆ ತಿಳಿದಿರಲಿಲ್ಲ, ಅದು ಪೊಲೀಸರನ್ನು ದೂರದ ರಾಜ್ಯದಿಂದ ಕರೆತಂದಿತ್ತು. ಆತ ಸೈಬರ್ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ."ಯುವಕರು ಅಪರಿಚಿತ ಮೂಲಗಳಿಂಡ ಹಣ ಗಳಿಸುತ್ತಿದ್ದರು." 28 ವರ್ಷದ ರಾಜಹುಸ್ಸೇನ್ ರೋಣ ತಾಲ್ಲೂಕಿನ ಸವದಿ ಗ್ರಾಮದ ಬಿಎಸ್ಸಿ ಪದವೀಧರ. ಅವನು ಕಳೆದ ಒಂದು ವರ್ಷದಿಂದ ಅಪರಿಚಿತ ವ್ಯಕ್ತಿಗಳಿಂದ ಹಣವನ್ನು ಪಡೆಯುತ್ತಿದ್ದ. ಮತ್ತು ಅವನು  ಅದನ್ನು ಹೇಗೆ ಮತ್ತು ಏಕೆ ಸ್ವೀಕರಿಸುತ್ತಿದ್ದಾರೆಂದು ತಿಳಿದಿಲ್ಲ. ರಾಜಹುಸ್ಸೇನ್  ಕುಟುಂಬ ಮೂಲಗಳ ಪ್ರಕಾರ, ಅವನು ಅಪರಿಚಿತ ಮೂಲದಿಂದ ಹಣವನ್ನು ಪಡೆಯುತ್ತಿದ್ದ.  ಅವನಿಗೆ ಕರೆ ಬಂದಾಗಲೆಲ್ಲಾ ಒಟಿಪಿ ಸಂಖ್ಯೆಯನ್ನು ಹಂಚಿಕೊಳ್ಳಲು ಕೇಳಿಕೊಳ್ಳುತ್ತಿದ್ದ. 

ಶುಕ್ರವಾರ ಸಂಜೆ ಹರಿಯಾಣ ಪೊಲೀಸರು ಗದಗ  ಪಟ್ಟಣ ಪೊಲೀಸ್ ಠಾಣೆಗೆ ಹೆಚ್ಚಿನ ತನಿಖೆಗಾಗಿ ಅವನನ್ನು  ತಮ್ಮ ಕಾರಿನಲ್ಲಿ ಕರೆದೊಯ್ದರು. ಆದರೆ, ಗದಗ  ಪೊಲೀಸರು ಮೌನವಹಿಸಿದ್ದರು. ರಾಜಹುಸ್ಸೇನ್ ನನ್ನು ಎಲ್ಲಿಗೆ ಗೆ ಕರೆದೊಯ್ಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿದುಕೊಳ್ಳಲು ಬಯಸಿದಾಗ, ಪೊಲೀಸರು  ತನಿಖೆ ಮುಗಿದ ನಂತರವೇ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

“ಅಪರಿಚಿತ ವ್ಯಕ್ತಿಗಳು ನನ್ನ ಸಹೋದರನ ಹೆಸರಿನಲ್ಲಿ ಖಾತೆಯನ್ನು ಹೊಂದಿದ್ದಾರೆ ಮತ್ತು ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ ಎಂದು ನನಗೆ ಅನುಮಾನವಿದೆ. ಈಗ, ನನ್ನ ಸಹೋದರನನ್ನು ಹಿಡಿಯಲಾಗಿದೆ ಮತ್ತು ವಂಚಕರು ಬಚಾವ್ ಆಗಿದ್ದಾರೆ" ರಾಜಹುಸ್ಸೇನ್ ಸೋದರ ಹೇಳಿದ್ದಾರೆ. 

“ಹರಿಯಾಣ ಪೊಲೀಸರು ಸವದಿ ಪೊಲೀಸ್ ಠಾಣೆಗೆ ಬಂದಾಗ, ನಾವೆಲ್ಲರೂ ಅಲ್ಲಿಗೆ ಹೋದೆವು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ರಾಜಹುಸ್ಸೇನ್  ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ನಮಗೆ ಅರ್ಥವಾಯಿತು ಮತ್ತು ಹರಿಯಾಣ ಪೊಲೀಸರು ಅವನ ಮೊಬೈಲ್ ಟ್ರ್ಯಾಕ್ ಮಾಡಿದ ನಂತರ ಇಲ್ಲಿಗೆ ಬಂದರು. ಅದು ಏನೆಂದು ತಿಳಿಯಲು ನಮಗೆ ಕುತೂಹಲವಿದೆ. ” ಗ್ರಾಮಸ್ಥರಾದ ರಾಜು ಪಾಟೀಲ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com