ಇ-ಲೋಕ ಅದಾಲತ್‌ನಲ್ಲಿ 1.15 ಲಕ್ಷ ಮೊತ್ತದ ಪ್ರಕರಣ ಇತ್ಯರ್ಥ

ಶನಿವಾರ ನಡೆದ ಮೆಗಾ ಇ-ಲೋಕ ಅದಾಲತ್ ಸಂದರ್ಭದಲ್ಲಿ ಕರ್ನಾಟಕವು 1.15 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಮತ್ತು ಅನೇಕ ಸಂತ್ರಸ್ತರಿಗೆ ಪರಿಹಾರವನ್ನು ನೀಡುವುದರ ಜೊತೆಗೆ ರಾಜ್ಯ ಸರ್ಕಾರ ಕೋಟಿ ರೂಪಾಯಿಗಳ ಆದಾಯ ಗಳಿಸಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದಾರೆ.
ಇ-ಲೋಕ ಅದಾಲತ್‌ನಲ್ಲಿ 1.15 ಲಕ್ಷ ಮೊತ್ತದ ಪ್ರಕರಣ ಇತ್ಯರ್ಥ

ಬೆಂಗಳೂರು: ಶನಿವಾರ ನಡೆದ ಮೆಗಾ ಇ-ಲೋಕ ಅದಾಲತ್ ಸಂದರ್ಭದಲ್ಲಿ ಕರ್ನಾಟಕವು 1.15 ಲಕ್ಷ ಮೊತ್ತದ ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಮತ್ತು ಅನೇಕ ಸಂತ್ರಸ್ತರಿಗೆ ಪರಿಹಾರವನ್ನು ನೀಡುವುದರ ಜೊತೆಗೆ ರಾಜ್ಯ ಸರ್ಕಾರಕೋಟಿ ರೂಪಾಯಿಗಳ ಆದಾಯ ಗಳಿಸಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದಾರೆ.

1,15,925 ಪ್ರಕರಣಗಳ ಪೈಕಿ  1,07,617 ಬಾಕಿ ಉಳಿದಿವೆ, 7,383 ಪೂರ್ವ ಮೊಕದ್ದಮೆ, ಮತ್ತು 925 ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ ಎಂದು ಅವರು ಹೇಳಿದ್ದಾರೆ. ಒಟ್ಟಾರೆಯಾಗಿ, 2,31,303 ಪ್ರಕರಣಗಳನ್ನು ಗುರುತಿಸಲಾಗಿದೆ ಮತ್ತು ಇ-ಲೋಕ ಅದಾಲತ್ ಗಾಗಿ  875 ಪೀಠಗಳನ್ನು ರಚಿಸಲಾಗಿತ್ತು. 

ಒಟ್ಟೂ ವಸೂಲಾದ ಮೊತ್ತ 357.64 ಕೋಟಿ ರೂ.ಗಳಾಗಿದ್ದು, ಅದರಲ್ಲಿ 27.33 ಕೋಟಿ ರೂ.ಗಳನ್ನು ದಂಡ ರೂಪದಲ್ಲಿ ವಸೂಲು ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಬೊಕ್ಕಸ ಸೇರಲಿದೆ. ಉಳಿದ - 330.3 ಕೋಟಿ ರೂ. - ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಹಕ್ಕುದಾರರಿಗೆ ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ಇತರ ಸಿವಿಲ್ ಪ್ರಕರಣಗಳ ಅಡಿಯಲ್ಲಿ ಪಾವತಿಸಲಾಗಿದೆ.

ಪ್ರಕರಣಗಳ ಇತ್ಯರ್ಥವು ನ್ಯಾಯಾಲಯಗಳಲ್ಲಿನ ಬಾಕಿಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ದಾವೆ ಹೂಡುವವರಿಗೆ ಪ್ರಯೋಜನವಾಗಿದೆ ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು. ಇ-ಲೋಕ್ ಅದಾಲತ್‌ನ ಯಶಸ್ಸಿಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪ್ರಯತ್ನಗಳನ್ನು ಅವರು ಸ್ಮರಿಸಿದ್ದಾರೆ. 

ಉದ್ಯಾನವನಗಳು, ಆಟದ ಮೈದಾನಗಳನ್ನು ರಕ್ಷಿಸಿ

ಬ್ಯಾಂಕ್ ಅಧಿಕಾರಿಗಳು ಮತ್ತು ಅಧಿಕಾರಿಗಳ ಭವನಗಳ  ರಚನೆಗಾಗಿ ರಘುವನಹಳ್ಳಿ, ದೋಡಕಲ್ಲಸಂದ್ರ ಮತ್ತು ತಿಪ್ಪಸಂದ್ರದಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿರುವ ಸ್ಥಳಗಳ ಸಮೀಕ್ಷೆ ಹಾಗೂ ಗುರುತಿಸುವಿಕೆ ನಡೆಸಲು  ಹೈಕೋರ್ಟ್ ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಆದೇಶಿಸಿದೆ.

ಡಾ.ಎನ್.ಆರ್.ಪ್ರಸಾದ್ ಮತ್ತು ದೋಡಕಲ್ಲಸಂದ್ರದ ಇತರ ಮೂವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದಾಗ ವಿಭಾಗೀಯ ಪೀಠವು ರಾಜ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಹೌಸ್ ಬಿಲ್ಡಿಂಗ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.

ಬೀದಿ ಮಕ್ಕಳ ರಕ್ಷಣೆ ಕುರಿತು ಹೇಳಲು ಸೂಚನೆ

ಮಕ್ಕಳು ಬೀದಿಗಳಲ್ಲಿ ಆಟಿಕೆ,  ಪೆನ್ನುಗಳು, ಇಯರ್ ಬಗ್ಸ್ ಮತ್ತು ಹೂವುಗಳನ್ನು ಮಾರಾಟ ಮಾಡುವುದನ್ನು ತಡೆಯಲು ಪಿಐಎಲ್ ಸಲ್ಲಿಕೆಯಾಗಿದ್ದು ಇದರ ವಿಚಾರಣೆ ನಡೆಸಿದ  ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರದ ವಿವಿಧ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಭಿಕ್ಷೆ ಬೇಡುವುದರ ವಿರುದ್ಧ . ಲೆಟ್ಜ್ಕಿಟ್ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವ್ರ ಪೀಠ  ಸಮಾಜ ಕಲ್ಯಾಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ, ಬಿಬಿಎಂಪಿ ಮತ್ತು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಿಗೆ ನೋಟೀಸ್ ಜಾರಿ ಮಾಡಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com