ಕೋವಿಡ್-19: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯಲ್ಲಿ 'ನೋವಾವಾಕ್ಸ್' ನ ಮಾನವ ಪ್ರಯೋಗ ಆರಂಭ ಸಾಧ್ಯತೆ

ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯು ಕೋವಿಡ್-19 ಲಸಿಕೆ ನೋವಾವಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗಗಳನ್ನು ಆರಂಭಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯು ಕೋವಿಡ್-19 ಲಸಿಕೆ ನೋವಾವಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗಗಳನ್ನು ಆರಂಭಿಸುವ ಸಾಧ್ಯತೆಯಿದೆ.

ಪುಣೆ ಮೂಲದ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಆಸ್ಪತ್ರೆಯನ್ನು ಕೇಳಿದ ಬಳಿಕ ಮಾನವ ಪ್ರಯೋಗಗಳನ್ನು ನಡೆಸಲು ಆಸ್ಪತ್ರೆ ಒಪ್ಪಿಗೆ ನೀಡಿದೆ. ಈ ಮೂಲಕ ಆಸ್ಪತ್ರೆಯ ಖ್ಯಾತಿಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ನೋವಾವಾಕ್ಸ್ ನ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗ ನಡೆಸಲು ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದಿಂದ ಪ್ರಸ್ತಾವನೆ ಬಂದಿದ್ದು, ನಮ್ಮ ಒಪ್ಪಿಗೆಯನ್ನು ನೀಡಲಾಗಿದೆ ಎಂದು ಜೆಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್ ವಿಭಾಗದ ಪ್ರೊ ಚಾನ್ಸಲರ್ ಬಿ. ಸುರೇಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಔಪಚಾರಿಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯಿಂದ ಅನುಮೋದನೆ ದೊರೆತ ಬಳಿಕ ಮಾನವ ಪ್ರಯೋಗವನ್ನು ಆರಂಭಿಸುವುದಾಗಿ ಅವರು ಹೇಳಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವೀಡಿಷ್ ಬಹುರಾಷ್ಟ್ರೀಯ  ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಡಬ್ಲ್ಯುಎಚ್‌ಒ ಅನುಮೋದಿತ ಲಸಿಕೆ ಕೋವಿಶೀಲ್ಡ್  ಕ್ಲಿನಿಕಲ್ ಪ್ರಯೋಗಕ್ಕಾಗಿ ಆಯ್ಕೆಯಾದ ಕರ್ನಾಟಕದ ಏಕೈಕ ಸಂಸ್ಥೆ ಜೆಎಸ್ ಎಸ್ ಆಸ್ಪತ್ರೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com