ಗದಗ: ಕೊರೋನಾ ಗೆದ್ದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕೋಸಾ ಬಂದಗೆ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ, ವೆಂಕೋಸಾ ಬಂದಗೆ ಅವರು ಕೊರೋನಾ ವೈರಸ್ ಗೆದ್ದು ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದ ಮೊದಲ ಹಿರಿಯ ವ್ಯಕ್ತಿಯಾಗಿದ್ದಾರೆ.
ವೆಂಕೋಸಾ ಬಂದಗೆ
ವೆಂಕೋಸಾ ಬಂದಗೆ

ಗದಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ, ವೆಂಕೋಸಾ ಬಂದಗೆ ಅವರು ಕೊರೋನಾ ವೈರಸ್ ಗೆದ್ದು ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದ ಮೊದಲ ಹಿರಿಯ ವ್ಯಕ್ತಿಯಾಗಿದ್ದಾರೆ.

ಕೊರೋನಾ ಗೆದ್ದ ನಂತರ ನಿಜವಾದ ಅರ್ಥದಲ್ಲಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  104 ವರ್ಷದ ಬಂದಗೆ ಅವರು ಗದಗ ಜಿಲ್ಲೆಯ ಗಜೇಂದ್ರ ಗಡದ ನಿವಾಸಿಯಾಗಿದ್ದಾರೆ. ಆಗಸ್ಟ್ 7ರಂದು ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಅದಕ್ಕೂ ಮುನ್ನ ಜುಲೈ ತಿಂಗಳಿನಲ್ಲಿ ಅವರ ಕುಟುಂಬದ 14 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಆದರೆ ಆ ವೇಳೆ ಅವರಿಗೆ ಸೋಂಕು ತಗುಲಿರಲಿಲ್ಲ, ಆದರೆ ಅವರ ವಯಸ್ಸಿನ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಪ್ರತ್ಯೇಕವಾಗಿರಿಸಿದ್ದರು, ಈಗ ಅವರು ಕೊರೋನಾದಿಂದ ಗುಣಮುಖರಾಗಿದ್ದಾರೆ.

ಬಂದಗೆ ಅವರು ಕೊರೋನಾದಿಂದ ಗುಣಮುಖರಾಗಿರುವುದು ಕುಟುಂಬಸ್ಥರಿಗೆ ಮತ್ತು ನೆರೆಹೊರೆಯವರಿಗೆ ಸಂತಸದ ವಿಷಯವಾಗಿದೆ. 

ಕೊರೋನಾ ಬ್ರಿಟಿಷರಷ್ಟು ಕಠಿಣವಾಗಿಲ್ಲ ಎಂದು ನಗುಮುಖದಿಂದ ಬಂದಗೆ ಮನೆಗೆ ಬಂದವರಿಗೆ ಹೇಳಿದ್ದಾರೆ.
ನನ್ನದೇ ಕುಟುಂಬಸ್ಥರಿಂದ ನನಗೆ ಕೊರೋಮಾ ಸೋಂಕು ತಗುಲಿತು.ನನ್ನನ್ನು ಹೋಮ್ ಕ್ವಾರಂಟೈನ್ ನಲ್ಲಿಟ್ಟಿದ್ದರು, ನನಗೆ ಪ್ರತಿದಿನ ಒಂದು ಸೇಬು ಮತ್ತು ಇಂಜೆಕ್ಷನ್ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ಕೊರೋನಾ ಬಂದರು ಜನರು ಹೆದರಬೇಡಿ, ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಗಿಂತ ಅದಕ್ಕೆ ಹೆಚ್ಚಿನ ಸಾಮರ್ಥ್ಯವಿಲ್ಲ,  ವೈದ್ಯರು ಹೇಳಿದ ರೀತಿ ಚಿಕಿತ್ಸೆ ಪಡೆದುಕೊಂಡರೇ
ಗುಣಮುಱರಾಗಬಹುದು ಎಂದು ತಿಳಿಸಿದ್ದಾರೆ, 

ನಮ್ಮ ಆತ್ಮವಿಶ್ವಾಸವನ್ನು ಕೊರೋನ ಕೊಲ್ಲಲಾಗದು ಎಂದು ಹೇಳಿದ್ದಾರೆ. ಗುರುವಾರದ ಮಧ್ಯರಾತ್ರಿವರೆಗೆ ಗದಗದಲ್ಲಿ 169 ಪ್ರಕರಣಗಳು ದಾಖಲಾಗಿವೆ, ಇದುವರೆಗೆ ಒಟ್ಟು 4,795 ಪ್ರಕರಣಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com