ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2020ಕ್ಕೆ ವಿಧಾನಸಭೆ ಒಪ್ಪಿಗೆ

ದೂರಶಿಕ್ಷಣ ಪದ್ಧತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತಗೊಳಿಸುವ, ಬೆಂಗಳೂರು ವಿವಿ ಹೆಸರನ್ನು ಬದಲಾಯಿಸುವುದು ಸೇರಿದಂತೆ ಉನ್ನತ ಶಿಕ್ಷಣದ ಸಮಗ್ರ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2020ಕ್ಕೆ ವಿಧಾನಸಭೆ ಒಪ್ಪಿಗೆ

ಬೆಂಗಳೂರು: ದೂರಶಿಕ್ಷಣ ಪದ್ಧತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತಗೊಳಿಸುವ, ಬೆಂಗಳೂರು ವಿವಿ ಹೆಸರನ್ನು ಬದಲಾಯಿಸುವುದು ಸೇರಿದಂತೆ ಉನ್ನತ ಶಿಕ್ಷಣದ ಸಮಗ್ರ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬುಧವಾರ ಸದನದಲ್ಲಿ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆಗಳುಳ್ಳ ಅಂಶಗಳನ್ನೊಳಗೊಂಡ ʼಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮತ್ತು ಕೆಲವು ಇತರೆ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕ-2020ʼಯನ್ನು ಮಂಡಿಸಿದರು.

ಮೈಸೂರಿನಲ್ಲಿರಿವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮಾತ್ರವೇ ದೂರ ಶಿಕ್ಷಣ ಲಭ್ಯ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬೆಂಗಳೂರಿನಲ್ಲಿರುವ ಸರ್ಕಾರಿ ಸೈನ್ಸ್ ಕಾಲೇಜು ಸಂಸ್ಥೆಯನ್ನು ಏಕಾತ್ಮಕ ಸ್ವರೂಪದ ನೃಪತುಂಗ ವಿವಿಯನ್ನಾಗಿ ಬದಲಾಯಿಸುವುದು, ಬೆಂಗಳೂರು ಕೇಂದ್ರ ವಿವಿಯನ್ನು "ಬೆಂಗಳೂರು ನಗರ ವಿಶ್ವವಿದ್ಯಾನಿಲಯ" ಎಂದು ಮರುನಾಮಕರಣ ಸೇರಿದಂತೆ ಹಲವು ಅಂಶಗಳು ಈ ವಿಧೇಯಕದ ಮುಖ್ಯಾಂಶಗಳಲ್ಲಿ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com