ಎಸಿಬಿ ಇನ್ಸ್​​ಪೆಕ್ಟರ್​​ಗೆ ಬೆತ್ತಲೆ ಮೈ ಪ್ರದರ್ಶಿಸಿ ಬ್ಲ್ಯಾಕ್​ಮೇಲ್: ದೂರು ದಾಖಲು

ಯುವತಿಯೊಬ್ಬಳು ಬೆತ್ತಲೆ ಮೈ ಪ್ರದರ್ಶಿಸಿ ವಿಡಿಯೋ ಕಾಲ್ ಸ್ಕ್ರೀನ್ ಶಾಟ್ ಕಳಿಸಿ ಎಸಿಬಿ ಇನ್ಸ್​​ಪೆಕ್ಟರ್​​ ಬ್ಲ್ಯಾಕ್​ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಸಿಬಿ ಇನ್ಸ್​​ಪೆಕ್ಟರ್​​ಗೆ ಬೆತ್ತಲೆ ಮೈ ಪ್ರದರ್ಶಿಸಿ ಬ್ಲ್ಯಾಕ್​ಮೇಲ್: ದೂರು ದಾಖಲು
Updated on

ಬೆಂಗಳೂರು: ಯುವತಿಯೊಬ್ಬಳು ಬೆತ್ತಲೆ ಮೈ ಪ್ರದರ್ಶಿಸಿ ವಿಡಿಯೋ ಕಾಲ್ ಸ್ಕ್ರೀನ್ ಶಾಟ್ ಕಳಿಸಿ ಎಸಿಬಿ ಇನ್ಸ್​​ಪೆಕ್ಟರ್​​ ಬ್ಲ್ಯಾಕ್​ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

 ಎಸಿಬಿ ಇನ್ಸ್​​ಪೆಕ್ಟರ್ ಸಿ. ದಯಾನಂದ್ ಎನ್ನುವವರಿಗೆ ಡಿಸೆಂಬರ್ 8ರಂದು ಯುವತಿ ಅಶ್ಲೀಲ ವಿಡಿಯೋ ಕರೆ ಮಾಡಿದ್ದಾಳೆ.

ಅದೊಂದು ಅಶ್ಲೀಲ ಕರೆ ಎಂದು ತಿಳಿದ ಇನ್ಸ್​​ಪೆಕ್ಟರ್ ತಕ್ಷಣ ಕರೆ ನಿಷ್ಕ್ರಿಯಗೊಳಿಸಿದ್ದಾರೆ. ಆದರೆ ಯುವತಿ ಅದೇ ವಿಡಿಯೋ ಕಾಲ್ ನ ಸ್ಕ್ರೀನ್ ಶಾಟ್ ಕಳಿಸಿ ತನ್ನ ಬೆತ್ತಲೆ ಮೈ ಪ್ರದರ್ಶನ ಮಾಡಿಕೊಂಡದ್ದಲ್ಲದೆ 11 ಸಾವಿರ ರೂ, ನೀಡಬೇಕು, ಇಲ್ಲವಾದಲ್ಲಿ ದೂರು ನೀಡುವೆನೆಂದು ಬೆದರಿಸಿದ್ದಾಳೆ.

ಇದೀಗ ಈ ಕುರಿತಂತೆ ಇನ್ಸ್​​ಪೆಕ್ಟರ್ ದಯಾನಂದ್ ಸೆಂಟ್ರಲ್ ಸಿಇಎನ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com