ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ನಲ್ಲಿ ಪಾರ್ಸಲ್ ಬಂದಿದ್ದ ದ್ವಿಚಕ್ರ ವಾಹನ ಕದ್ದಿದ್ದ ವ್ಯಕ್ತಿಯ ಬಂಧನ 

ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ನಲ್ಲಿ ಪಾರ್ಸಲ್ ಬಂದಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 
ಕೆಎಸ್ ಆರ್ ನಿಲ್ದಾಣದ ಪಾರ್ಸಲ್ ಕಚೇರಿ
ಕೆಎಸ್ ಆರ್ ನಿಲ್ದಾಣದ ಪಾರ್ಸಲ್ ಕಚೇರಿ

ಬೆಂಗಳೂರು: ರೈಲ್ವೆ ನಿಲ್ದಾಣದ ಪಾರ್ಸಲ್ ಆಫೀಸ್ ನಲ್ಲಿ ಪಾರ್ಸಲ್ ಬಂದಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಮೈಸೂರಿನಿಂದ ಡಿ.11 ರಂದು ಮೈಸೂರು-ಮೈಲಾಡುತುರೈ ಫೆಸ್ಟಿವಲ್ ಸ್ಪೆಷಲ್ ರೈಲಿನಲ್ಲಿ ನೋಂದಣಿ ಸಂಖ್ಯೆ KA-14 EP-2719 ಯನ್ನು ಹೊಂದಿದ್ದ ಸ್ಕೂಟಿಯನ್ನು ಕಳಿಸಲಾಗಿತ್ತು ಹಾಗೂ ಅದೇ ದಿನ ಸಂಜೆ 6:40 ಕ್ಕೆ ಅದು ಬೆಂಗಳೂರಿನ ಕೆಎಸ್ ಆರ್ ರೈಲ್ವೆ ನಿಲ್ದಾಣ ತಲುಪಿತ್ತು.

ಆದರೆ ಸ್ಕೂಟಿಯ ಮಾಲಿಕರಿಗೆ ಅದು ತಲುಪದ ಕಾರಣ ಡಿ.18 ರಂದು ಅವರು ತಮ್ಮ ಸ್ಕೂಟಿ ರೈಲ್ವೆ ನಿಲ್ದಾಣದಿಂದ ನಾಪತ್ತೆಯಾಗಿರುವುದರ ಬಗ್ಗೆ ಆರ್ ಪಿಎಫ್ ಗೆ ದೂರು ದಾಖಲಿಸಿದ್ದರು. ಸಣ್ಣ ಪುಟ್ಟ ವಸ್ತುಗಳು ಕಣ್ಮರೆಯಾಗುವುದನ್ನು ಗಮನಿಸಿದ್ದ ಆರ್ ಪಿಎಫ್ ಗೆ ಇದು ಅತ್ಯಂತ ಅಚ್ಚರಿ ಹಾಗೂ ಅಘಾತಕಾರಿ ಸಂಗತಿಯಾಗಿತ್ತು.

ರೈಲಿನಲ್ಲಿ ಪಾರ್ಸಲ್ ಬರುವ ವಾಹನಗಳನ್ನು ಅನ್ ಲೋಡ್ ಮಾಡಿದ ಬಳಿಕ ಪ್ಲಾಟ್ ಫಾರ್ಮ್ 1 ರಲ್ಲಿ ಇರಿಸಲಾಗುತ್ತದೆ. ಪಾರ್ಸಲ್ ಕಚೇರಿ ಸಿಬ್ಬಂದಿಗಳಿಗೆ ಇಂಥದ್ದೊಂದು ಸ್ಕೂಟಿ ನಾಪತ್ತೆಯಾಗಿದೆ ಎಂಬುದು ದೂರು ನೀಡಿದ ಬಳಿಕವಷ್ಟೇ ತಿಳಿದುಬಂದಿದೆ.

ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು " ದೂರು ಬಂದ ತಕ್ಷಣವೇ ವಿಶೇಷ ಟಾಸ್ಕ್ ಫೋರ್ಸ್ ನ್ನು ಸ್ಕೂಟಿ ವಶಪಡಿಸಿಕೊಳ್ಳುವುದಕ್ಕೆ ನೇಮಕ ಮಾಡಲಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ, ಅದರಲ್ಲಿ ಪಾರ್ಸಲ್ ವಿಭಾಗದಲ್ಲಿ ಸಹಾಯ ಮಾಡುತ್ತಿದ್ದ, ರೈಲ್ವೆ ಸಿಬ್ಬಂದಿಯ ಮಗ ಸ್ಕೂಟಿಯನ್ನು ಕದ್ದಿರುವುದು ಪತ್ತೆಯಾಯಿತು. ದೂರು ಬಂದ ದಿನ ಸಂಜೆ 5:30 ಕ್ಕೆ ಆರೋಪಿ ಇರುತ್ತಿದ್ದ ಪ್ರದೇಶಗಳನ್ನೆಲ್ಲಾ ಶೋಧಕಾರ್ಯ ನಡೆಸಿದ ಆರ್ ಪಿಎಫ್ ಸ್ಕೂಟಿಯನ್ನು ತಾನೇ ಕದ್ದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ ಪಿಎಫ್ ಬೆಂಗಳೂರಿನ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರಾದ ದೇಬಸ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸ್ಥಳೀಯ ಮಟ್ಟದ ಕಾರ್ಯಾಚರಣೆಯಿಂದಾಗಿ ಈ ಕಳ್ಳತನ ಮಾಡಿದ ವ್ಯಕ್ತಿಯನ್ನು ದೂರು ಬಂದ 3.5 ಗಂಟೆಗಳಲ್ಲಿ ಬಂಧಿಸಲು ಸಾಧ್ಯವಾಗಿದೆ, ಸಿಸಿಟಿವಿಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com