ಕೈಯಲ್ಲಿ ಮುದ್ರೆ ಇದ್ದು ಬಸ್ ಗಳಲ್ಲಿ ಸಂಚರಿಸುವ, ರೆಸ್ಟೊರೆಂಟ್ ಗಳಲ್ಲಿರುವವರ ಬಗ್ಗೆ ಮಾಹಿತಿ ನೀಡಿ: ಭಾಸ್ಕರ್ ರಾವ್ 

ಕೈಯಲ್ಲಿ ಮುದ್ರೆ ಇದ್ದು, ಬಸ್ ಗಳಲ್ಲಿ ಸಂಚರಿಸುವ, ರೆಸ್ಟೋರೆಂಟ್ ಗಳಲ್ಲಿ ಕುಳಿತುಕೊಳ್ಳುವವರ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು:ಕೊರೋನಾಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ  ಸರ್ಕಾರ ಹೊರದೇಶದಿಂದ  ಬಂದವರ ಕೈ ಮೇಲೆ ಮುದ್ರೆ  ಒತ್ತಲಾಗುತ್ತದೆ. ಅಂಥವರು ಕಡ್ಡಾಯವಾಗಿ 14 ದಿನ ಮನೆಯಲ್ಲೇ, ಸಾರ್ವಜನಿಕ ಸಂಪರ್ಕದಿಂದ ದೂರವಿರಬೇಕು.

ಆದರೆ, ಕೆಲವರು ಬಿಎಂಟಿಎಸ್ ಬಸ್ ಗಳಲ್ಲಿ ಸಂಚರಿಸುತ್ತಿದ್ದು, ರೆಸ್ಟೊರೆಂಟ್ ಗಳಲ್ಲಿ ಕುಳಿತುಕೊಳ್ಳುವ ಮೂಲಕ ಬೇಜವಾಬ್ದಾರಿತನ ಮೆರೆಯುತ್ತಿದ್ದಾರೆ. ಇಂತಹವರ ಬಗ್ಗೆ ದೂರು ಬಂದಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಹಿತ ದೃಷ್ಟಿಯಿಂದ  ಮುದ್ರೆ ಹಾಕುವ ಮೂಲಕ 5 ಸಾವಿರ ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಆದರೆ, ಇದನ್ನು ಮರೆತು ಬಿಎಂಟಿಸಿ ಬಸ್ ಗಳ ಸಂಚರಿಸುವ , ರೆಸ್ಟೋರೆಂಟ್ ಗಳಲ್ಲಿ ಕುಳಿತುಕೊಳ್ಳುವವರ ಬಗ್ಗೆ ದೂ. 100 ರ ಮೂಲಕ ಮಾಹಿತಿ ನೀಡಿದರೆ ಅಂತವರನ್ನು ಬಂಧಿಸಿ, ಸರ್ಕಾರದ ಕ್ವಾರೆಂಟೀನ್ ಗೆ ಕಳುಹಿಸಲಾಗುವುದು ಎಂದು ಭಾಸ್ಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com