ಸಚಿವ ಸುರೇಶ್ ಕುಮಾರ್ ಕಾಳಜಿ: ಐರ್ಲೆಂಡ್ ನಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ ಕ್ಯಾನ್ಸರ್ ಪೀಡಿತೆ!

ಐರ್ಲೆಂಡ್‌ ನ ಎಂಎನ್ ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ 25 ವರ್ಷದ ಕ್ಯಾನ್ಸರ್ ಪೀಡಿತ ಯುವತಿ ವಾಪಸ್ ತವರಿಗೆ ಮರಳಲು ಪರದಾಡುತ್ತಿದ್ದರು. ಆದರೆ ಯುವತಿ ನೆರವಿಗೆ ಧಾವಿಸಿದ ಸಚಿವ  ಸುರೇಶ್ ಕುಮಾರ್ ಅವರು ಲಾಕ್ ಡೌನ್ ನಡುವೆಯೇ ಯುವತಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.

Published: 16th May 2020 03:16 PM  |   Last Updated: 16th May 2020 03:16 PM   |  A+A-


Minister suresh kumar

ಸಚಿವ ಸುರೇಶ್ ಕುಮಾರ್

Posted By : Lingaraj Badiger
Source : The New Indian Express

ಬೆಂಗಳೂರು: ಐರ್ಲೆಂಡ್‌ ನ ಎಂಎನ್ ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ 25 ವರ್ಷದ ಕ್ಯಾನ್ಸರ್ ಪೀಡಿತ ಯುವತಿ ವಾಪಸ್ ತವರಿಗೆ ಮರಳಲು ಪರದಾಡುತ್ತಿದ್ದರು. ಆದರೆ ಯುವತಿ ನೆರವಿಗೆ ಧಾವಿಸಿದ ಸಚಿವ  ಸುರೇಶ್ ಕುಮಾರ್ ಅವರು ಲಾಕ್ ಡೌನ್ ನಡುವೆಯೇ ಯುವತಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.

ಬೆಂಗಳೂರಿನ ಯುವತಿ ತನ್ನ ಎಂ.ಟೆಕ್ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು 2017ರಲ್ಲಿ ಐರ್ಲೆಂಡ್ ಗೆ ಹೋಗಿದ್ದರು.‌  ಉನ್ನತ ಶಿಕ್ಷಣ ಮುಗಿಸಿದ ನಂತರ ಯುವತಿ ಅಲ್ಲಿಯೇ ಒಂದು ಎಂಎನ್ ಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಇತ್ತೀಚಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುವತಿ ಕೊವಿಡ್-19 ತಪಾಸಣೆ ಮಾಡಿಸಿಕೊಂಡಿದ್ದಾರೆ. ಈ ವೇಳೆ ಯುವತಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ಆಘಾತಕಾರಿ ವರದಿ ಬಂದಿದೆ. ಅಲ್ಲದೆ ಒಂದು ವಾರದಲ್ಲಿ ನೀವು ಬೆಂಗಳೂರಿಗೆ ಹೋಗಿ ಮನೆಯವರೊಂದಿಗೆ ಇರಿ ಎಂದು ಯುವತಿಗೆ ಸಲಹೆ ನೀಡಿದ್ದಾರೆ.

ಯುವತಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಬರಬೇಕು. ಆದರೆ ಐರ್ಲೆಂಡ್ ನಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ಇಲ್ಲ. ಹೀಗಾಗಿ ಯುವತಿ ಇಂಗ್ಲೆಂಡ್ ಗೆ ಹೋಗಿ ಭಾರತಕ್ಕೆ. ಬರಬೇಕು. ಇದಕ್ಕೆ ವೀಸಾ ಸಹ ಬೇಕು. ಇದಕ್ಕೆಲ್ಲಾ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಕೊನೆಯ ದಿನಗಳನ್ನು ಎಣಿಸುತ್ತಿರುವ ಯುವತಿಯನ್ನು ಆದಷ್ಟು ಬೇಗ ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡುವಂತೆ ಆಕೆಯ ಪೋಷಕರು ಸಚಿವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಕ್ಯಾನ್ಸರ್ ರೋಗಿಯ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ವಿಭಿನ್ನ ವ್ಯವಸ್ಥೆಗಳೊಂದಿಗೆ ನಡೆಸಿದ ವಾಸ್ತವಿಕ ಯುದ್ಧ ಇದಾಗಿತ್ತು. ವಿಚಾರದಲ್ಲಿ ಸಚಿವ ಸದಾನಂದ ಗೌಡ ವೈಯಕ್ತಿಕವಾಗಿ ಸಹಾಯ ಮಾಡಿದರು ಎಂದು ‌ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಇನ್ನು ಯುವತಿಯನ್ನು ಮರಳಿ ಕರೆತರಲು ಎದುರಿಸಿದ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡ ಕುಟುಂಬ, ಬೆಂಗಳೂರಿಗೆ ಬಂದು ಇಳಿದ ನಂತರವೂ ಸಮಸ್ಯೆಗಳು ಮುಗಿಯಲಿಲ್ಲ. ಅಧಿಕಾರಿಗಳು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಒತ್ತಾಯಿಸಿದರು ಮತ್ತು ಅವಳನ್ನು ಮಾರತ್ತಹಳ್ಳಿಗೆ ತಳ್ಳಲು ಪ್ರಯತ್ನಿಸಿದರು. ಈ ವೇಳೆ ಮತ್ತೆ ಸಚಿವ ಸುರೇಶ್ ಕುಮಾರ್ ಅವರು ನಮ್ಮ ರಕ್ಷಣೆಗೆ ಬಂದರು ಎಂದು ಯುವತಿಯ ಸಹೋದರ ಕುಮಾರ್ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp