ಆರ್ಎಸ್ಎಸ್ ಎಂದಿಗೂ ಅಂತರ ಧರ್ಮೀಯ ವಿವಾಹ ವಿರೋಧಿಸುವುದಿಲ್ಲ: ಸಂಘದ ಮಾಧ್ಯಮ ತಂಡ ಸದಸ್ಯ
ಅಂತರ ಧರ್ಮೀಯ ವಿವಾಹಗಳು ವಿಶೇಷ ವಿವಾಹ ಕಾಯ್ದೆಯಡಿ ದಾಖಲಾಗಬೇಕಾಗುತ್ತದೆ, ಈ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸೇರಿದಂತೆ ಸಮಾನ ಹಕ್ಕುಗಳು ದೊರೆಯುತ್ತವೆ ಎಂದು ಆರ್ ಎಸ್ ಎಸ್ ಮಾಧ್ಯಮ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.
Published: 22nd November 2020 12:28 PM | Last Updated: 22nd November 2020 12:32 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಅಂತರ ಧರ್ಮೀಯ ವಿವಾಹಗಳು ವಿಶೇಷ ವಿವಾಹ ಕಾಯ್ದೆಯಡಿ ದಾಖಲಾಗಬೇಕಾಗುತ್ತದೆ, ಈ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸೇರಿದಂತೆ ಸಮಾನ ಹಕ್ಕುಗಳು ದೊರೆಯುತ್ತವೆ ಎಂದು ಆರ್ ಎಸ್ ಎಸ್ ಮಾಧ್ಯಮ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂತರಧರ್ಮೀಯ ವಿವಾಹಕ್ಕೆ ವಿರುದ್ಧವಾಗಿ ಇಲ್ಲ, ಆದರೆ ಮದುವೆ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ವಿರುದ್ಧವಾಗಿದೆ. ಅಂತರಧರ್ಮೀಯ ವಿವಾಹವಾದ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಪತಿಯ ಧರ್ಮಕ್ಕೆ ಮತಾಂತರ ಮಾಡಿಕೊಂಡು ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಆರ್ ಎಸ್ ಎಸ್ ರಾಷ್ಟ್ರೀಯ ಮಾಧ್ಯಮ ತಂಡದ ಸದಸ್ಯ ರತನ್ ಶಾರದಾ ಹೇಳಿದ್ದಾರೆ. ಇವರು ಲವ್ ಜಿಹಾದ್ ಎಂಬ ವಿವಾದಾತ್ಮಕ ವಿಷಯದ ಮೇಲೆ ಆರ್ ಎಸ್ಎಸ್ 360 ಪುಸ್ತಕದ ಲೇಖಕ ಕೂಡ ಆಗಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಅಂತರಧರ್ಮೀಯ ಮದುವೆಯಲ್ಲಿ ಮಹಿಳೆಯರು ಮೋಸ ಹೋದ ಪ್ರಕರಣಗಳು ಸಾಕಷ್ಟಿವೆ. ಹಲವು ಮದುವೆಗಳು ಇಂತವು ಯೋಜಿತ ಧರ್ಮ ಮತಾಂತರಗಳು. ವೈಯಕ್ತಿಕ ಕಾನೂನುಗಳನ್ನು ಹತ್ತಿಕ್ಕುವ ಸಾಮಾನ್ಯ ಕಾನೂನುಗಳು ನಮ್ಮಲ್ಲಿ ಬಲಿಷ್ಠವಾಗಬೇಕು ಎಂದರು.
ಜಾತಿ, ಧರ್ಮವನ್ನು ಬದಿಗೊತ್ತಿ ಅಭಿವೃದ್ಧಿಪರ ಮತ ಹಾಕಿದ್ದಾರೆ ಎಂಬುದನ್ನು ಇತ್ತೀಚಿನ ಬಿಹಾರ ಚುನಾವಣೆ ಸಾಬೀತುಪಡಿಸಿದೆ. ಜಾತ್ಯಾತೀತ ಪಕ್ಷಗಳ ರಾಜಕೀಯವನ್ನು ಜನರು ನೋಡಿ ತೀರ್ಮಾನ ಕೊಟ್ಟಿದ್ದು ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೂಡ ಅದು ಸಾಬೀತಾಗಲಿದೆ ಎಂದರು.