ಯಕ್ಷಗಾನ
ಯಕ್ಷಗಾನ

ಜಾಹೀರಾತಿನಲ್ಲಿ ಯಕ್ಷಗಾನ ಕಲೆಗೆ ಅವಮಾನ: ಅಭಿಮಾನಿಗಳು, ಕಲಾವಿದರಿಂದ ಫೆವಿಕಾಲ್ ಕಂಪನಿ ಕ್ಷಮೆಯಾಚನೆಗೆ ಪಟ್ಟು

ಕರಾವಳಿ ಪ್ರದೇಶದ ಸಾಂಪ್ರದಾಯಿಕ, ಜನಪ್ರಿಯ ಕಲಾ ಪ್ರಕಾರ ಯಕ್ಷಗಾನವನ್ನು ಒಳಗೊಂಡ ಫೆವಿಕಾಲ್ ಟಿವಿ ಜಾಹೀರಾತು ಸಾಮಾಜಿಕ ಮಾಧ್ಯಮ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಾಕ್ಕೆ ಕಾರಣವಾಗಿದೆ.
Published on

ಮಂಗಳೂರು: ಕರಾವಳಿ ಪ್ರದೇಶದ ಸಾಂಪ್ರದಾಯಿಕ, ಜನಪ್ರಿಯ ಕಲಾ ಪ್ರಕಾರ ಯಕ್ಷಗಾನವನ್ನು ಒಳಗೊಂಡ ಫೆವಿಕಾಲ್ ಟಿವಿ ಜಾಹೀರಾತು ಸಾಮಾಜಿಕ ಮಾಧ್ಯಮ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಾಕ್ಕೆ ಕಾರಣವಾಗಿದೆ. ಕರಾವಳಿಯ ಪರಂಪರೆಯ ಹೆಗ್ಗುರುತಾದ ಯಕ್ಷಗಾನಕ್ಕೆ "ಅಪಚಾರ" ಮಾಡಲಾಗಿದೆ ಸಂಪ್ರದಾಯದ ಬಗ್ಗೆ ಅವಹೇಳನ ನಡೆಸಲಾಗಿದೆಎಂದು ಹೇಳುವ ಮೂಲಕ, ಕಲಾವಿದರು ಹಾಗೂ ಯಕ್ಷಗಾನದ ಅಭಿಮಾನಿಗಳು ಫೆವಿಕಾಲ್ ಕಂಪನಿ ಕ್ಷಮೆಯಾಚಿಸಬೇಕು ಮತ್ತು ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಜಾಹೀರಾತಿನಲ್ಲಿ ಯಕ್ಷಗನ ಕಲಾವಿದರು ಮತ್ತು ಕಥೆಯನ್ನು ನಿರೂಪಿಸುವ ಭಾಗವತರು ಇದ್ದು, ರಾಜ ತನ್ನ ಸಿಂಹಾಸನದ ಮೇಲೆ ಕುಳಿತಾಗ ಸಿಂಹಾಸನ ಕುಸಿದು ಬೀಳುತ್ತದೆ.  ಆಗ ರಾಜನ ವೇಷಧಾರಿ ತನ್ನ ಎದುರಿನ ಇನ್ನೊಬ್ಬ ವೇಷಧಾರಿ ಹಾಗೂ ಭಾಗವತರನ್ನು ಈ ಬಗ್ಗೆ ಗಟ್ಟಿಯಾಗಿ ಅರಚುತ್ತಾ ಪ್ರಶ್ನಿಸುತ್ತಾನೆ. ಅದು ಗಲಾಟೆ ಪ್ರಾರಂಭಕ್ಕೆ ಕಾರಣವಾಗುತ್ತದೆ. ಈ ಮೂಲಕ ಫೆವಿಕಾಲ್ ಕಂಪನಿಯ ಅಂಟಿನ ಉತ್ಪನ್ನಕ್ಕೆ ಬೇರಾವ ಉತ್ಪನ್ನಗಳೂ ಸಾಟಿ ಇಲ್ಲ ಎನ್ನುವುದನ್ನು ತೋರಿಸಲಾಗಿದೆ.

ಜಾಹೀರಾತಿನಲ್ಲಿ ಕೆಲ ವೃತ್ತಿಪರ ಕಲಾವಿದರೂ ಇದ್ದಾರೆಂದು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.

ಈ ಸಂಬಂಧ ಶಾಸಕರಾದ ವೇದವ್ಯಾಸ್ ಕಾಮತ್ ಅವರು #apologize ಟ್ಯಾಗ್ ನೊಂದಿಗೆ ಫೇಸ್‌ಬುಕ್ ಪೋಸ್ಟ್ ಹಾಕುವ ಮೂಲಕ ಜಾಹೀರಾತಿನ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. , “ಯಕ್ಷಗಾನವು ತುಳುನಾಡಿನ ಶತಮಾನಗಳಷ್ಟು ಹಳೆಯ ಸಂಪ್ರದಾಯನಿಮ್ಮ ಕಂಪನಿ ಅದನ್ನು ಅಪಹಾಸ್ಯ ಮಾಡುವುದು ತಪ್ಪು, ಖಂಡನೀಯ. ಇದು ನಮ್ಮ ಸಂಸ್ಕೃತಿ ಮತ್ತು ನಾವು ಅದನ್ನು ಗೌರವಿಸುತ್ತೇವೆ. ನಿಮ್ಮ ಕಂಪನಿಯು ಯಕ್ಷಗಾನಕ್ಕೆ ಅಗೌರವ ಸೂಚಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು. ಅದ್ಭುತ ನೃತ್ಯ ಪ್ರಕಾರವನ್ನು ನಾವು ಹೇಗೆ ಪರಿಗಣಿಸುತ್ತೇವೆ ಎಂಬುದರ ಕುರಿತು ಅಂತರ್ಜಾಲದಲ್ಲಿರುವ ವಿವರಗಳನ್ನು ಪರಿಶೀಲಿಸಿ"" ಅವರು ಹೇಳಿದ್ದಾರೆ.

ಶ್ರೀ ಯಕ್ಷಗಾನ ಮಿತ್ರಕಲಾ ಮಂಡಳಿಯ ಸಂಸ್ಥಾಪಕ ಎಂ. ದೇವಾನಂದ್ ಭಟ್, “ಈ ಜಾಹೀರಾತು ಕಲಾ ಪ್ರಕಾರವನ್ನು ಆರಾಧಿಸುವ ಜನರ ನಂಬಿಕೆ ಮತ್ತು ಭಕ್ತಿಗೆ ವಿರುದ್ಧವಾಗಿದೆ. ಯಕ್ಷಗಾನ ಕೇವಲ ಮನರಂಜನೆಯಲ್ಲ, ಆದೊಂದು ಬಗೆಯ ಧಾರ್ಮಿಕ ಆಚರಣೆಯೂ ಕೂಡ. ಚಂಡೆ ಹಾಗೂ ಮದ್ದಳೆಗಳೊಂದಿಗೆ ವೇದಿಕೆ ತುಂಬೆಲ್ಲಾ ಓಡಾಡುವುದು ಕ್ರಮವಲ್ಲ" ಎಂದರು.

ಚಲನಚಿತ್ರಗಳು, ನವರಾತ್ರಿ ಉತ್ಸವಗಳು ಮತ್ತು ಗಣರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಯಕ್ಷಗಾನ ಪ್ರಸ್ತುತಿ ಸರಿಯಿಲ್ಲ ಎನ್ನುವ ದೇವಾನಂದ್ ಭಟ್ "ಅಂತಹ ಪ್ರದರ್ಶನಗಳಲ್ಲಿ, ಪೂರ್ಣ ಉಡುಪಿನಲ್ಲಿ(ವೇಶದಲ್ಲಿ)ಮತ್ತು ಗೆಜ್ಜೆಕಟ್ಟಿದ ಕಲಾವಿದರು ಪಾದರಕ್ಷೆಗಳನ್ನು ಧರಿಸಿರುವುದು ಕಂಡುಬರುತ್ತದೆ.ಇಂತಹ ಘಟನೆಗಳು ಕಲಾ ಪ್ರಕಾರಕ್ಕೆ ಮಾದರಿಯಲ್ಲ. ಇದು ಜನರಲ್ಲಿ ಯಕ್ಷಗಾನದ ಬಗ್ಗೆ ತಪ್ಪು ಕಲ್ಪನೆ ಮೂಡಲು ಕಾರಣವಾಗಬಹುದು.  ಆದರೆ ಅದೊಂದು ಪವಿತ್ರ ಕಲೆ. ಅದಕ್ಕೆ ಮಾನ್ಯತೆ ಸಿಕ್ಕಬೇಕು" ಅವರು ಕಲೆಗೆ ಅಗೌರವ ತೋರುಉವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com