ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ನಮ್ಮ ಮೆಟ್ರೊ ಕಾಮಗಾರಿ: ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರ ಮೇಲ್ಸೇತುವೆ!

ನಗರದ ಸಂಚಾರದಟ್ಟಣೆ ಮಧ್ಯೆ ಸುಮಾರು ಸಾವಿರ ಮಂದಿ ಕಾರ್ಮಿಕರು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಗಲು ರಾತ್ರಿ ನಮ್ಮ ಮೆಟ್ರೊ ಕಾಮಗಾರಿಯಲ್ಲಿ ನಿರತರಾಗಿದ್ದಾರೆ.
ಕಾಮಗಾರಿಯ ದೃಶ್ಯ
ಕಾಮಗಾರಿಯ ದೃಶ್ಯ

ಬೆಂಗಳೂರು: ನಗರದ ಸಂಚಾರದಟ್ಟಣೆ ಮಧ್ಯೆ ಸುಮಾರು ಸಾವಿರ ಮಂದಿ ಕಾರ್ಮಿಕರು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಗಲು ರಾತ್ರಿ ನಮ್ಮ ಮೆಟ್ರೊ ಕಾಮಗಾರಿಯಲ್ಲಿ ನಿರತರಾಗಿದ್ದಾರೆ.

ಈ ಮೆಟ್ರೊ ಕಾಮಗಾರಿಯ ಪ್ರಮುಖ ಆಕರ್ಷಣೆ ಜಯದೇವ ಇಂಟರ್ ಚೇಂಜ್ ಮೆಟ್ರೊ ಸ್ಟೇಷನ್ ಈ ಮಾರ್ಗವನ್ನು ನಾಗವಾರದಿಂದ ಗೊಟ್ಟಿಗೆರೆ ಮೆಟ್ರೊ ಮಾರ್ಗಕ್ಕೆ ಸಂಪರ್ಕಿಸುತ್ತದೆ.

ಐದು ಲೇಯರ್ಸ್ ನಲ್ಲಿ ಸ್ಟೇಷನ್ ನಿರ್ಮಾಣಗೊಳ್ಳುತ್ತಿದ್ದು 31 ಮೀಟರ್ ಎತ್ತರವನ್ನು ಹೊಂದಿರುತ್ತದೆ. ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರ ರಸ್ತೆ ಮತ್ತು ರೈಲು ಮೇಲ್ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಉಪ ಮುಖ್ಯ ಎಂಜಿನಿಯರ್ ಎನ್ ಸದಾಶಿವ ತಿಳಿಸಿದ್ದಾರೆ. 

ರಸ್ತೆಯ ಮಟ್ಟ, ಕಾನ್ಕೋರ್ಸ್ ಪ್ರದೇಶ, ಆರ್-5 ಮಟ್ಟ, ರೀಚ್-6 ಮಟ್ಟ ಮತ್ತು ಛಾವಣಿಯ ರಚನೆಯು ಇದನ್ನು ಒಂದು ವಿಶಿಷ್ಟವಾದ ನಿರ್ಮಾಣದ ಭಾಗವಾಗಿಸುತ್ತದೆ, ಇವುಗಳ ಕೆಲಸಕ್ಕಾಗಿ ಚೀನಾದಿಂದ 4 ರಿಗ್ ಮೆಶಿನ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ರೀಚ್-5 ಎಲಿವೇಟೆಡ್ ಮಾರ್ಗ 6.3 ಕಿಲೋ ಮೀಟರ್ ಉದ್ದವಿದ್ದು, 239 ಸೇತುಬಂಧ ಹೊಂದಿರುತ್ತದೆ.

ಈ ಮಾರ್ಗದಲ್ಲಿ ಶೇಕಡಾ 65ರಷ್ಟು ಕಾಮಗಾರಿ ಮುಗಿದಿದೆ. ಈ ಮಾರ್ಗದ ಉದ್ದಕ್ಕೂ ಆರ್ ವಿ ರಸ್ತೆ, ರಾಗಿ ಗುಡ್ಡ, ಜಯದೇವ, ಬಿಟಿಎಂ ಲೇ ಔಟ್ ಮತ್ತು ಸಿಲ್ಕ್ ಬೋರ್ಡ್ ಸ್ಟೇಷನ್ ಗಳು ಸಿಗುತ್ತವೆ. ಪೈಲ್ಸ್ ಗಳನ್ನು ಹಾಕುವ ಕೆಲಸ ಮುಗಿದಿದೆ ಎಂದು ಸದಾಶಿವ ತಿಳಿಸಿದರು. ಕಳೆದ ಸೋಮವಾರ ಕಾಮಗಾರಿ ತ್ವರಿತಗತಿಯಲ್ಲಿ ಆರಂಭವಾಗಿದೆ. 

ಮರ ಕಡಿಯುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ: ಈಸ್ಟ್ ಎಂಡ್ ರೋಡ್ ಮತ್ತು ಸಿಎಸ್ಬಿ ಜಂಕ್ಷನ್ ನಡುವಿನ 15 ಮರಗಳನ್ನು ಆರ್‌ವಿ ರಸ್ತೆಯಿಂದ ಎಚ್‌ಎಸ್‌ಆರ್ ಲೇಔಟ್ ವರೆಗೆ ಮಾರೆನಹಳ್ಳಿ ರಸ್ತೆಯ ಮೂಲಕ 2.66 ಕಿ.ಮೀ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್. ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 ರ ಪ್ರಕಾರ ನಾಗರಿಕರು ತಮ್ಮ ಆಕ್ಷೇಪಣೆಯನ್ನು 10 ದಿನಗಳಲ್ಲಿ ಡಿಸಿಎಫ್, ಬಿಬಿಎಂಪಿಗೆ ಸಲ್ಲಿಸಬಹುದು. ಅನೇಕ ನಾಗರಿಕರು ಈಗಾಗಲೇ ಈ ವಿಷಯದ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಎತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com