ನಮ್ಮ ಮೆಟ್ರೋ: ಬೈಯಪ್ಪನಹಳ್ಳಿ ಮೂರನೇ ಟರ್ಮಿನಲ್ ಜನವರಿಗೆ ತೆರೆಯುವ ನಿರೀಕ್ಷೆ

ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನಗರದ ಮೂರನೇ ಕೋಚಿಂಗ್ ಟರ್ಮಿನಲ್ ಮುಂದಿನ ವರ್ಷ ಜನವರಿಯಲ್ಲಿ ಸಿದ್ಧವಾಗುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನಗರದ ಮೂರನೇ ಕೋಚಿಂಗ್ ಟರ್ಮಿನಲ್ ಮುಂದಿನ ವರ್ಷ ಜನವರಿಯಲ್ಲಿ ಸಿದ್ಧವಾಗುವ ಸಾಧ್ಯತೆ ಇದೆ. ಮುಂದಿನ ವರ್ಷದ ಆರಂಭದ ವೇಳೆಗೆ ಕಾಮಗಾರಿ ಸಂಪೂರ್ಣವಾಗುವುದಿಲ್ಲ ಆದರೂ ಒಂದು ಅಥವಾ ಮೂರು ಪ್ಲಾಟ್‌ಫಾರ್ಮ್‌ಗಳೊಂದಿಗೆ ತೆರೆಯಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸೌತ್ ವೆಸ್ಟರ್ನ್ ರೈಲ್ವೆಯ ಜನರಲ್ ಮ್ಯಾನೇಜರ್ ಎ ಕೆ ಸಿಂಗ್ ಅವರು ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

“ಸಾಂಕ್ರಾಮಿಕ ರೋಗವು ಕೆಲಸ ವಿಳಂಬವಾಗುವಂತೆ ಮಾಡಿತು.ಇದು ಈಗಿರುವ ಕಾರ್ಮಿಕ ಬಲದೊಂದಿಗೆ ಚುರುಕಾದ ವೇಗದಲ್ಲಿ ನಡೆಯುತ್ತಿದೆ, ಆದರೆ ನಾವು ಯೋಜಿಸಿದಂತೆ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣವಾಗುವುದಿಲ್ಲ.ಜನವರಿ ಅಂತ್ಯದ ವೇಳೆಗೆ ಅದನ್ನು ಒಂದು ಪ್ಲಾಟ್‌ಫಾರ್ಮ್ ಅಥವಾ ಗರಿಷ್ಠ ಮೂರು ಪ್ಲಾಟ್‌ಫಾರ್ಮ್‌ಗಳೊಂದಿಗೆ ತೆರೆಯಲು ನಾವು ಆಶಿಸುತ್ತೇವೆ. ” ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಹೆಚ್ಚಿನ ರೈಲುಗಳು ಈಗ ಕಾರ್ಯನಿರ್ವಹಿಸದ ಕಾರಣ ದೈನಂದಿನ ಕಾರ್ಯಾಚರಣೆಗಳ ಮೇಲೆ ಪ್ರಾಯೋಗಿಕವಾಗಿ ಪರಿಣಾಮ ಬೀರುವುದಿಲ್ಲ" ಎಂದು ಇನ್ನೊಬ್ಬ ಅಧಿಕಾರಿ ಅಭಿಪ್ರಾಯಪಟ್ಟರು.

192.59 ಕೋಟಿ ರೂ.ಗಳ ವೆಚ್ಚದಲ್ಲಿ ತಯಾರಾಗುತ್ತಿರುವ ಟರ್ಮಿನಲ್ ಏಳು ಪ್ಲಾಟ್‌ಫಾರ್ಮ್‌ಗಳು, ಮೂರು ಪಿಟ್ ಲೈನ್‌ಗಳು ಮತ್ತು ಏಳು ಸ್ಟೇಬಲಿಂಗ್ ಲೈನ್‌ಗಳನ್ನು ಹೊಂದಿರುತ್ತದೆ. ಇದು ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಗಡುವು ಮುಂದೂಡಿಕೆ ಕಂಡಿದೆ. ಅದರಲ್ಲಿ ಡಿಸೆಂಬರ್ ಅಂತ್ಯಕ್ಕೆ ಮುಗಿಯಲಿದೆ ಎಂಬ ಗಡುವು ಇತ್ತೀಚಿನದ್ದಾಗಿತ್ತು. ಈ ಟರ್ಮಿನಲ್ ಬೆಂಗಳೂರು ಕೆ.ಎಸ್.ಆರ್. (ಮೆಜೆಸ್ಟಿಕ್) ಹಾಗೂ ಯಶವಂತಪುರ ರಲಿಲು ನಿಲ್ದಾಣಗಳನ್ನು ಈ ಭಾಗಕ್ಕೆ ಇನ್ನಷ್ಟು ಸಮೀಪವಾಗಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com