ಆನ್‌ಲೈನ್ ಪಾಠದ ಸಮಯ ಅಶ್ಲೀಲ ಸಂದೇಶ, ಟೀಕೆ: ಶಿಕ್ಷಕರು ಅಸಹಾಯಕ!

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಶಾಲೆಗಳು ಮುಚ್ಚಿದ ಕಾರಣ ತರಗತಿಗಳು ಆನ್ ಲೈನ್ ಆಗಿರುವುದು ಶಿಕ್ಷಕರಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಅನೇಕರು ಈ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ.
ಆನ್‌ಲೈನ್ ಪಾಠದ ಸಮಯ ಅಶ್ಲೀಲ ಸಂದೇಶ, ಟೀಕೆ: ಶಿಕ್ಷಕರು ಅಸಹಾಯಕ!

ಮೈಸೂರು: ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಶಾಲೆಗಳು ಮುಚ್ಚಿದ ಕಾರಣ ತರಗತಿಗಳು ಆನ್ ಲೈನ್ ಆಗಿರುವುದು ಶಿಕ್ಷಕರಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದು, ಅನೇಕರು ಈ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ. ಆನ್‌ಲೈನ್  ಬೆದರಿಕೆ, ಕೆಟ್ಟ ಹಾಗೂ ಅಶ್ಲೀಲ ಚಾಟ್‌ಗಳು, ಕಿರುಕುಳ ಮತ್ತು ವಿದ್ಯಾರ್ಥಿಗಳಿಂದ ಶಿಕ್ಷಕರ ಮೇಲೆ ವೈಯಕ್ತಿಕ ನಿಂದನೆ ವಿಶೇಷವಾಗಿ ಪಿಯು ಮತ್ತು ಪದವಿ ಕೋರ್ಸ್‌ಆನ್‌ಲೈನ್ ತರಗತಿಗಳ ಸಮಯದಲ್ಲಿ ಹೆಚ್ಚಾಗಿದ್ದು, ಅನೇಕ ಶಿಕ್ಷಕರನ್ನು ಖಿನ್ನತೆಗೆ ತಳ್ಳಿದೆ.

'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌'ನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಹಳೆ ಮೈಸೂರು  ಪ್ರದೇಶ ಮತ್ತು ಬೆಂಗಳೂರಿನ ಶಿಕ್ಷಕರು ಸಾಮಾನ್ಯ ತರಗತಿಯಿಂದ ಆನ್‌ಲೈನ್‌ಗೆ ಸ್ಥಳಾಂತರಗೊಂಡಿರುವುದು ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆಗೆ ಕಾರಣವಾಗಿದೆ ಎಂದು ದೂರಿದರು. "ಮಹಿಳಾ ಶಿಕ್ಷಕಿಯರು ಆನ್‌ಲೈನ್ ತರಗತಿಗಳ ಸಮಯದಲ್ಲಿ ಕಿರುಕುಳಕ್ಕೆ ಹೆಚ್ಚಾಗಿ ಒಳಗಾಗುತ್ತೇವೆ. ವಿದ್ಯಾರ್ಥಿಗಳು ಅನಾಮಧೇಯ ಐಡಿಗಳನ್ನು ಬಳಸಿ ನಮ್ಮ ವಿರುದ್ಧ ವೈಯುಕ್ತಿಕ ನಿಂದನೆ ಮಾಡುವರು, ಕಿರುಕುಳ ನೀಡುತ್ತಾರೆ.

"ಇದಲ್ಲದೆ, ಅವರು ವೀಡಿಯೊ ಸೆಷನ್‌ಗಳ ಲಿಂಕ್‌ಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಅವರೂ ತರಗತಿಗೆ ಸೇರಲು ಅನುವು ಮಾಡಿಕೊಡುತ್ತಾರೆ, ಅವರು ಕಾಮೆಂಟ್ ಮಾಡುತ್ತಾರೆ.  ಅಥವಾ ಅಶ್ಲೀಲ ಚಾಟ್‌ಗಳನ್ನು ಕಳುಹಿಸುತ್ತಾರೆ. ಡಿಜಿಟಲ್ ತರಗತಿಗಳಲ್ಲಿ ಇಂತಹಾ ಕೃತ್ಯವೆಸಗುವವರನ್ನು ಪತ್ತೆ ಮಾಡುವುದುನಿಜವಾಗಿಯೂ ಕಷ್ಟ ಸಾಮಾನ್ಯ ತರಗತಿಗಳು ಶೀಘ್ರದಲ್ಲೇ ಪ್ರಾರಂಭವಾಗುವ ಭರವಸೆ ಇಲ್ಲದೆ  ನಾನು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದೇನೆ ಮತ್ತು ನನ್ನ ಕೆಲಸವನ್ನು ತ್ಯಜಿಸಲು ನಿರ್ಧರಿಸಿದ್ದೇನೆ ”ಎಂದು ಖಾಸಗಿ ಕಾಲೇಜಿನ ಪಿಯು ಉಪನ್ಯಾಸಕಿ ರೂಪಾ ಹೇಳಿದರು.

ಸಾಂಕ್ರಾಮಿಕ ರೋಗದಿಂದಾಗಿ ಸರಿಯಾದ ತರಗತಿ ಕೆಲಸಗಳು ಅಥವಾ ಆದಾಯವಿಲ್ಲ ಎಂದು ಹೇಳುವ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಅರ್ಧ ಅಥವಾ ಭಾಗಶಃ ಸಂಬಳವನ್ನು ನೀಡುತ್ತಿರುವುದರಿಂದ, ಶಿಕ್ಷಕರು ದಲ್ಲಾಳಿ, ಟೈಲರಿಂಗ್ ಮತ್ತಿತರೆ ಉಪಕಸುಬಿನತ್ತ ವಾಲುತ್ತಿದ್ದಾರೆ.  ಆದರೆ ಹಾಗೊಮ್ಮೆ ಶಿಕ್ಷಕರು ಉಪ ಕಸುಬು ಮಾಡುವುದು ವಿದ್ಯಾರ್ಥಿಗಳ ಗಮನಕ್ಕೆ ಬಂದರೆ ಅವರು ತರಗತಿಯ ಸಮಯದಲ್ಲಿ ವೈಯಕ್ತಿಕ ಕಾಮೆಂಟ್‌ಗಳನ್ನು  ಮಾಡುತ್ತಾರೆ. “ಒಂದು ತರಗತಿಯ ಮಧ್ಯದಲ್ಲಿ, ಒಬ್ಬ ವಿದ್ಯಾರ್ಥಿಯುತರಗತಿಗೆ ಲಾಗ್ ಇನ್ ಮಾಡಿ ಮತ್ತು ತನ್ನ ಗೆಳತಿಗಾಗಿ ನಾನು ಡಿಸೈನರ್ ಕುಪ್ಪಸವನ್ನು ಹೊಲಿದು ಕೊಡಬಹುದೆ?ಎಂದು ಕೇಳುವ ಸಂದೇಶವನ್ನು ಕಳುಹಿಸಿದನು. ಈ ರೀತಿಯ ಕಿರುಕುಳವನ್ನು ವಿಶೇಷವಾಗಿ ವಿದ್ಯಾರ್ಥಿಗಳಿಂದ ತಡೆದುಕೊಳ್ಳುವುದು ನಿಜವಾಗಿಯೂ ಕಷ್ಟ. ಅಲ್ಲದೆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಶಿಕ್ಷಕರು ಎಲ್ಲಾ ಸಮಯದಲ್ಲೂ ಹೆಚ್ಚಿನ ಜಾಗರೂಕರಾಗಿರಬೇಕೆಂದು ಹೇಳಲಾಗುತ್ತದೆ. ಹಾಗಾಗಿ ನಾನು ಈ ಕೆಲಸವನ್ನೇ ತ್ಯಜಿಸಲು ನಿರ್ಧರಿಸಿದ್ದೇನೆ ” ಎಂದು ಪದವಿ ಕಾಲೇಜು ಉಪನ್ಯಾಸಕಿಯೊಬ್ಬರು ಹೇಳಿದ್ದಾರೆ.

ಈ ಸಮಸ್ಯೆಯ ಎಷ್ಟರ ಮಟ್ಟಿಗಿದೆ ಎಂದರೆ ಬೆಂಗಳೂರಿನ ಟಾಪ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರೊಬ್ಬರು ತಮ್ಮ ತರಗತಿಯ ಹಲವಾರು ವಿದ್ಯಾರ್ಥಿಗಳು ಪಿಜ್ಜಾವನ್ನು ತಲುಪಿಸುವಂತೆ ಕೇಳಿಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡರು. ಸಾಂಕ್ರಾಮಿಕ ರೋಗದ ನಡುವೆ ಹೆಚ್ಚುವರಿ ಆದಾಯವನ್ನು ಗಳಿಸಲು ಆ ಶಿಕ್ಷಕ ರಾತ್ರಿ ವೇಳೆ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದರು.

"ಅವರು ವಿದ್ಯಾರ್ಥಿಗಳ ಕಾಮೆಂಟ್ ಗಳಿಂದ  ತೀವ್ರ ಖಿನ್ನತೆಗೆ ಒಳಗಾಗಿದ್ದರು ಮತ್ತು ಆತ್ಮಹತ್ಯೆಗೆ ಮುಂದಾಗಿದ್ದಾರೆ  ಎಂದು ಹೇಳಲಾಗುತ್ತದೆ. ನಾವು, ಶಿಕ್ಷಕರು, ಸಾಕಷ್ಟು ಕಿರುಕುಳ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ಈ ಮೊದಲು, ಯಾರಾದರೂ ಕಾಮೆಂಟ್ ಮಾಡಿದಾಗ ಗ ನಾವು ಭಾವನಾತ್ಮಕ ಅಥವಾ ಸೂಕ್ಷ್ಮವಾಗಿರಬಾರದು ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆವು, ಆದರೆ ದುಃಖದ ಸಂಗತಿ ಎಂದರೆ  ಈಗ ನಾವು ಅದನ್ನು ಕಾರ್ಯಗತಗೊಳಿಸಲು ಮುಂದಾಗಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಕನಿಷ್ಠ 14 ಶಿಕ್ಷಕರು ಕೆಲಸ ಬಿಟ್ಟಿದ್ದಾರೆ. ಅವರು ವಿದ್ಯಾರ್ಥಿಗಳಿಂದ ಈ ರೀತಿಯ ಕಿರುಕುಳವನ್ನು ಎದುರಿಸಲು ಸಿದ್ಧರಿಲ್ಲ ಎಂದು ಉಲ್ಲೇಖಿಸಿದ್ದಾರೆ ”ಎಂದು ಆತ್ಮಹತ್ಯೆಗೀಡಾದ ಉಪನ್ಯಾಸಕರ ಸಹೋದ್ಯೋಗಿ ಸಂತೋಷ್ (ಹೆಸರು ಬದಲಾಯಿಸಲಾಗಿದೆ) ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com