ಉಡುಪಿ: ಭಾರೀ ಗಾಳಿ-ಮಳೆ, ಹಲವು ಪ್ರದೇಶಗಳು ಜಲಾವೃತ

ಸೆಪ್ಟೆಂಬರ್ 19 ರ ಶನಿವಾರ ರಾತ್ರಿ ಮತ್ತು ಸೆಪ್ಟೆಂಬರ್ 20 ರ ಭಾನುವಾರ ಬೆಳಗಿನ ಸಮಯ ಉಡುಪಿ ಜಿಲ್ಲೆಯಾದ್ಯಂತ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗಿದೆ.
ಉಡುಪಿಯಲ್ಲಿ ಭಾರೀ ಮಳೆ
ಉಡುಪಿಯಲ್ಲಿ ಭಾರೀ ಮಳೆ

ಉಡುಪಿ: ಸೆಪ್ಟೆಂಬರ್ 19 ರ ಶನಿವಾರ ರಾತ್ರಿ ಮತ್ತು ಸೆಪ್ಟೆಂಬರ್ 20 ರ ಭಾನುವಾರ ಬೆಳಗಿನ ಸಮಯ ಉಡುಪಿ ಜಿಲ್ಲೆಯಾದ್ಯಂತ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗಿದೆ.

ಗಾಳಿ, ಮಳೆಯ ಕಾರಣ ಉಡುಪಿ ನಗರ ಮತ್ತು ಮಣಿಪಾಲ್‌ನ ಹಲವಾರು ಪ್ರದೇಶಗಳು ಮುಳುಗಿದೆ. ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ.  ಅಲೆವೂರ್ ಪೆರುಪಾಡೆಯಲ್ಲಿ ನೆಲೆಲ್ಸಿದ ಕುಟುಂಬಗಳು ಸಹಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದೆ.

ನಗರದ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಜಿಲ್ಲೆಯ ಇತಿಹಾಸದಲ್ಲಿ ನಗರವು ಇಂತಹ ಮಳೆಯನ್ನು ಕಂಡಿಲ್ಲ ಎಂದು ಹೇಳಲಾಗಿದೆ. ನೀರಿನ ಅಪಾರ ಹರಿವಿನ ಕಾರಣ ನಗರದ ಪ್ರಮುಖ ಬೀದಿಗಳಲ್ಲಿನ ಸಂಚಾರ ಅಸ್ತ್ಯವ್ಯಸ್ಥವಾಗಿದೆ.

ಪುತ್ತಿಗೆ ಮಠ ಗುಂಡಿಬೈಲ್-ಕಲ್ಸಂಕ ರಸ್ತೆ, ಬೈಲ್ಕೆರೆ ಮಠದಬೆಟ್ಟು , ಉಡುಪಿ-ಮಣಿಪಾಲ್ ಮುಖ್ಯ ರಸ್ತೆಗಳು ನೀರಿನಿಂದ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ.

ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಬೈಲುಕೆರೆ , ಕುಂಜಿಬೆಟ್ಟು ಮತ್ತು ಆದಿಯುಡುಪಿ ಪ್ರದೇಶವೂ ಜಲಾವೃತವಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಸಂದರ್ಶಕರ ಪಾರ್ಕಿಂಗ್ ಪ್ರದೇಶವು ನೀರಿನಲ್ಲಿ ಮುಳುಗಿದೆ.ಕಲ್ಸಂಕ ಬಳಿಯ ಇಂದ್ರಾಣಿ ನದಿಯ ದಡದಲ್ಲಿರುವ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.

ಬೈಲಕೆರೆ ಪ್ರದೇಶದ ನೀರಿನ ಮಟ್ಟ ಗಣನೀಯವಾಗಿ ಏರಿದೆ ಮತ್ತು ಅನೇಕ ಮನೆಗಳಿಗೆ ನಿರು ನುಗ್ಗಿದೆ. ಮನೆಗಳ ಕಾಂಪೌಂಡ್‌ನಲ್ಲಿ ನಿಲ್ಲಿಸಲಾಗಿರುವ ವಾಹನಗಳು ನೀರಿನಿಂದ ಮುಳುಗಿ ಹಾನಿಗೊಳಲಾಗಿದೆ. 

ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಮೇಲೆ  ನೀರು ಹರಿಯುತ್ತಿದ್ದು ವಾಹನ ಸಂಚಾರ ಅಸ್ತ್ಯವ್ಯಸ್ಥವಾಗಿದೆ.  ಸ್ವರ್ಣ ನದಿ ಉಕ್ಕಿ ಹರಿಯುತ್ತಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ  ಕರಾವಳಿಯಲ್ಲಿ ಮಳೆ ಅಬ್ಬರ ಜೋರ್‍ಆಗಿದೆ. ಮುಂದಿನ ನಾಲ್ಕು ದಿನ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಕೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com