ಹಾವೇರಿ: ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು, ಮುಂದುವರೆದ ಶೋಧ ಕಾರ್ಯ
ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.
Published: 21st September 2020 01:16 PM | Last Updated: 21st September 2020 01:30 PM | A+A A-

ಸಾಂದರ್ಭಿಕ ಚಿತ್ರ
ಹಾವೇರಿ:ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.
ಆರೆಮಲ್ಲಾಪುರ ಗ್ರಾಮದ ಬೆಟ್ಟಪ್ಪ ಮೋಹನ್ ಮುಳ್ಳಿನ(25), ಮತ್ತು ಜಗದೀಶ ವೆಂಕಪ್ಪ (23) ನದಿ ಪಾಲಾದವರು.
ಕೋಣನತಂಬಿಗಿ - ನಿಟ್ಟೂರು ಕ್ರಾಸ್ ತುಂಗಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಎರಡು ಎತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಬಂದಿದೆ.
ಸಧ್ಯ ಯುವಕರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು ರಾಣಿಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.