1 ಸಾವಿರ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲು ಕರ್ನಾಟಕ ಸರ್ಕಾರ ಮುಂದು!

ರಾಜ್ಯದಲ್ಲಿ ಕೆಟ್ಟ ಸ್ಥಿತಿಯಲ್ಲಿರುವ ಕಲ್ಯಾಣಿಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಲ ಶಕ್ತಿ ಅಭಿಯಾನ ಮತ್ತು ಮನ್ರೇಗಾ ಅಡಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೆಟ್ಟ ಸ್ಥಿತಿಯಲ್ಲಿರುವ ಕಲ್ಯಾಣಿಗಳ ಪುನರುಜ್ಜೀವನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಲ ಶಕ್ತಿ ಅಭಿಯಾನ ಮತ್ತು ಮನ್ರೇಗಾ ಅಡಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಲವು ಕಲ್ಯಾಣಿಗಳ ಪುನರುಜ್ಜೀವನ ಕೈಗೊಳ್ಳಲು ನಿರ್ಧರಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಜಲ ಶಕ್ತಿ ಅಭಿಯಾನದ ಒಂದು ಭಾಗವಾದ ಈ ಯೋಜನೆಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಲಾಯಿತು. 

ಇದು ಸ್ಥಳೀಯ ಕೆರೆ ಮತ್ತು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವುದು, ಮಳೆನೀರು ಕೊಯ್ಲು ನಿರ್ಮಿಸುವುದು, ನೆನೆಸುವ ಹೊಂಡಗಳನ್ನು ಅಗೆಯುವುದು ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಲಿದೆ.

ಏಪ್ರಿಲ್ ನಿಂದ ನವೆಂಬರ್ ವರೆಗೆ 4,500 ಕೆರೆಗಳು ಮತ್ತು ಟ್ಯಾಂಕ್‌ಗಳು, 1,000 ಕಲ್ಯಾಣಿಗಳು, 40,000 ಕೃಷಿ ಹೊಂಡಗಳು, 90,000 ಬಂಡ್ ಗಳು, ಒಂದು ಲಕ್ಷ ನೆನೆಸುವ ಹೊಂಡಗಳು, 8,000 ಚೆಕ್ ಡ್ಯಾಮ್‌ಗಳು ಮತ್ತು 4,000 ಮಳೆನೀರು ಕೊಯ್ಲು ರಚನೆಗಳನ್ನು ಪುನರುಜ್ಜೀವನಗೊಳಿಸಲು ಇಲಾಖೆ ಯೋಜಿಸುತ್ತಿದೆ.

ಈ ಹಿಂದೆ ಇತರ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ, ಇದೇ ಮೊದಲ ಬಾರಿಗೆ ಒಂದು ಸಾವಿರ ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯಡಿ ತರಲಾಗಿದೆ. ಈ ಕಲ್ಯಾಣಿಗಳಲ್ಲಿ ಬಹುಪಾಲು ದೇವಾಲಯಗಳ ಬಳಿಯಿದ್ದು, ಈ ಕಲ್ಯಾಣಿಗಳನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಾಲಾನಂತರದಲ್ಲಿ, ನೀರಿನ ಮೂಲಗಳು ಒಣಗುವುದರಿಂದ ಅದರೊಳಗೆ ಆವರಿಸುವ ಕಳೆಗಳಿಂದ ಅವು ನಿಷ್ಪ್ರಯೋಜಕವಾಗುತ್ತಿವೆ.

ಮುಂದಿನ ನೂರು ದಿನಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ  ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.  ಇದಕ್ಕಾಗಿ ಜಲಶಕ್ತಿ ಯೋಜನೆಯಡಿ 4,310 ಕೋಟಿರು ಖರ್ಚು ಮಾಡಲಾಗುತ್ತಿದೆ.

ಈ ಕಾರ್ಯಕ್ರಮ ನವೆಂಬರ್ 30ರವರೆಗೆ ನಡೆಯಲಿದ್ದು, ಕೇಂದ್ರ ಸರ್ಕಾರ ಈ ಕಾರ್ಯಕ್ರಮಕ್ಕಾಗಿ 3.6 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದ್ದು,  2024 ರ ವೇಳೆಗೆ 18.5 ಕೋಟಿ ಮನೆಗಳಿಗೆ ಕೊಳವೆ ನೀರು ಒದಗಿಸುವ ಕೇಂದ್ರವನ್ನು ಕೇಂದ್ರ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹಳ್ಳಿಗಳಲ್ಲಿ ಮತ್ತು ದೇವಾಲಯಗಳ ಬಳಿ ಕಲ್ಯಾಣಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ನಾವು 161 ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದ್ದೇವೆ ಮತ್ತು ಈ ವರ್ಷ ನಾವು ಸಾವಿರವನ್ನು ಗುರಿಯಾಗಿಸಿಕೊಂಡಿದ್ದೇವೆ," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಕತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಲತೀಕ್ ಹೇಳಿದ್ದಾರೆ.

ಕರ್ನಾಟಕದ ಅನೇಕ ಕೆರೆಗಳು ಮತ್ತು ಕಲ್ಯಾಣಿಗಳು 15 ನೇ ಶತಮಾನಕ್ಕೆ ಸೇರಿದವು. ಇವುಗಳನ್ನು ನಿರ್ಮಾಣ ಮಾಡುವಾಗ ಯಾವುದೇ ಸಿಮೆಂಟ್ ಅಥವಾ ಉಕ್ಕನ್ನು ಬಳಸಲಾಗಿಲ್ಲ, ಮತ್ತು ಅವುಗಳನ್ನು ಜಿಯೋಮೆಂಬ್ರೇನ್ ತಂತ್ರಜ್ಞಾನವನ್ನು ಬಳಸಿ ಜೇಡಿಮಣ್ಣು ಮತ್ತು ಹೂಳು ಬಳಸಿ ನಿರ್ಮಿಸಲಾಗಿದೆ. ಇನ್ನೂ  ಅನೇಕ ವರ್ಷಗಳ ಕಾಲ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ  ಈ ಜಲಮೂಲಗಳನ್ನು ಅತಿಕ್ರಮಿಸುತ್ತಿಸಲಾಗಿದೆ ಎಂದು ಪರಿಸರವಾದಿ ವೈ ಎನ್ ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ. ಕೇವಲ ಕಲ್ಯಾಣಿ ಪುನರುಜ್ಜೀವನಗೊಳಿಸಿದರೇ ಸಾಲದು ಅದರೊಳಗಿನ ಹೂಳನ್ನು ತೆಗೆಸಬೇಕು ಎಂದು ಸಲಹ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com