
ರಾಯಚೂರು: ಏಪ್ರಿಲ್ 13ರಂದು ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರ ಮಾಡಲು ಗಾಯಕಿ ಮಂಗ್ಲಿ ಆಗಮಿಸುತ್ತಿದ್ದಾರೆ. ಈಗಾಗಲೇ ಹಲವು ಸಚಿವರು, ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಮಸ್ಕಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಮಸ್ಕಿಯಲ್ಲಿ ಕಾಂಗ್ರೆಸ್‌ನಿಂದ ಆರ್. ಬಸನಗೌಡ ತುರ್ವಿಹಾಳ, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅಭ್ಯರ್ಥಿಗಳು. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ.
ಮಧ್ಯಾಹ್ನ 3 ಗಂಟೆಗೆ ಅಡವಿಭಾವಿ ತಾಂಡಾ, 4.30ಕ್ಕೆ ಹಡಗಲಿ ತಾಂಡಾ ಹಾಗೂ ಸಂಜೆ 5.30ಕ್ಕೆ ಮಸ್ಕಿ ಪಟ್ಟಣದಲ್ಲಿ ಮತಯಾಚನೆ ಮಾಡಲಿದ್ದಾರೆ. ತೆಲುಗು ಭಾಷೆಯಲ್ಲಿ ಬಿಡಿಗಡೆಯಾದ ಕನ್ನಡದ 'ರಾಬರ್ಟ್' ಸಿನಿಮಾದಲ್ಲಿ 'ಕಣ್ಣೇ ಅದಿರಿಂದಿ..' ತೆಲುಗು ಹಾಡಿರುವುದು ಎರಡೂ ರಾಜ್ಯಗಳಲ್ಲೂ ವೈರಲ್ ಆಗಿದೆ.
Advertisement