ಬಳ್ಳಾರಿ: ಕೇಂದ್ರದ 'ಪ್ರಬುದ್ಧ ಯೋಜನೆ'ಗೆ ಸಂಡೂರಿನ ಗ್ರಾಮ ಆಯ್ಕೆ!

ಬಳ್ಳಾರಿಯ ಸಂಡೂರು ತಾಲೂಕಿನ ಯಶವಂತನಗರ ಇದೀಗ ದೊಡ್ಡ ಹೆಸರಾಗಿದೆ. ಇದು ಕೇಂದ್ರ ಸರ್ಕಾರದ ಪ್ರಬುದ್ಧ ಗ್ರಾಮ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆಯಾದ ಭಾರತದ ಏಳು ಹಳ್ಳಿಗಳಲ್ಲಿ ಒಂದಾಗಿದೆ, ಇಡೀ ದಕ್ಷಿಣ ಭಾರತದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಗ್ರಾಮವಾಗಿದೆ.
ಪ್ರಬುದ್ಧ ಯೋಜನೆಗೆ ಆಯ್ಕೆಯಾದ ಯಶವಂತನಗರ (ಚಿತ್ರ ಕೃಪೆ: ಫೇಸ್ ಬುಕ್)
ಪ್ರಬುದ್ಧ ಯೋಜನೆಗೆ ಆಯ್ಕೆಯಾದ ಯಶವಂತನಗರ (ಚಿತ್ರ ಕೃಪೆ: ಫೇಸ್ ಬುಕ್)
Updated on

ಬಳ್ಳಾರಿ: ಬಳ್ಳಾರಿಯ ಸಂಡೂರು ತಾಲೂಕಿನ ಯಶವಂತನಗರ ಇದೀಗ ದೊಡ್ಡ ಹೆಸರಾಗಿದೆ. ಇದು ಕೇಂದ್ರ ಸರ್ಕಾರದ ಪ್ರಬುದ್ಧ ಗ್ರಾಮ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆಯಾದ ಭಾರತದ ಏಳು ಹಳ್ಳಿಗಳಲ್ಲಿ ಒಂದಾಗಿದೆ, ಇಡೀ ದಕ್ಷಿಣ ಭಾರತದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಗ್ರಾಮವಾಗಿದೆ.

ಯಶವಂತನಗರ ಗ್ರಾಮವು ಸಂಡೂರಿನಿಂದ 13 ಕಿ.ಮೀ ದೂರದಲ್ಲಿದೆ ಮತ್ತು ಗಣಿಗಾರಿಕೆ ಪ್ರದೇಶವನ್ನೊಳಗೊಂಡಿದೆ.ಈ ಗ್ರಾಮದಲ್ಲಿ 9,000 ಜನಸಂಖ್ಯೆ ಇದೆ, ಮತ್ತು 75% ಸಾಕ್ಷರತಾ ಪ್ರಮಾಣವಿದೆ. ಯೋಜನೆಯಡಿ, ಮೂಲಭೂತ ಸೌಕರ್ಯಗಳು, ಸ್ವಚ್ಚತೆ ಮತ್ತು ಡಿಜಿಟಲೀಕರಣವನ್ನು ಕೇಂದ್ರೀಕರಿಸಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗುವುದು. ರಾಜ್ಯದಲ್ಲೇ ಸಂಡೂರು ತಾಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದ ಗಣಿಗಾರಿಕೆ ಘಟಕಗಳಿದೆ.

ಕೇಂದ್ರೀಯ ವೈಜ್ಞಾನಿಕ ಮತ್ತು ಸಲಕರಣೆಗಳ ಸಂಸ್ಥೆ ಭಾರತದ ಏಳು ಪ್ರಬುದ್ಧ ಗ್ರಾಮಗಳಲ್ಲಿ ಯಶವಂತನಗರವನ್ನು ಒಂದು ಎಂದು ಘೋಷಿಸಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. “ಈ ಯೋಜನೆಯು ಗ್ರಾಮವನ್ನು ಎಲ್ಲಾ ಆಯಾಮಗಳಲ್ಲಿಯೂ ಸುಧಾರಿಸುತ್ತದೆ. ಯೋಜನೆಯನ್ನು ಪ್ರಾಯೋಗಿಕ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ವಿವಿಧ ಪ್ರದೇಶಗಳಿಂದ ಹೆಚ್ಚಿನ ಗ್ರಾಮಗಳನ್ನು ಯೋಜನೆಯಡಿ ಸೇರಿಸಲಾಗುವುದು ”ಎಂದು ಅವರು ಹೇಳಿದರು.

ಕೆಲವು ತಿಂಗಳ ಹಿಂದೆ, ಕೇಂದ್ರ ತಂಡವು ಗ್ರಾಮಕ್ಕೆ ಭೇಟಿ ನೀಡಿ ದಾಖಲಾತಿಗಾಗಿ ಅಗತ್ಯ ವಿವರಗಳನ್ನು ತೆಗೆದುಕೊಂಡಿತು. “ಡಿಪಿಆರ್ ತಯಾರಿಸಲಾಗುವುದು, ಮತ್ತು ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಉತ್ತಮ ರಸ್ತೆಗಳು, ಆಸ್ಪತ್ರೆ, ವಿದ್ಯುತ್, ಕುಡಿಯುವ ನೀರು ಮತ್ತು ಒಳಚರಂಡಿ ಸೌಲಭ್ಯಗಳನ್ನು ಸುಧಾರಿಸಲಾಗುವುದು ”ಎಂದು ಅಧಿಕಾರಿ ಹೇಳಿದರು.

ಇಲ್ಲಿನ ಸ್ಥಳೀಯರು ತಮ್ಮ ಗ್ರಾಮವನ್ನು ಕೇಂದ್ರ ಸರ್ಕಾರದ ಯೋಜನೆಗೆ ಆಯ್ಕೆ ಮಾಡಿದ್ದಕ್ಕಾಗಿ ಹೆಮ್ಮೆಪಡುತ್ತಿದ್ದಾರೆ.ಸ್ಥಳೀಯ ಪಂಚಾಯತ್ ಸದಸ್ಯರೊಬ್ಬರು ಈ ಯೋಜನೆಯ ಬಗ್ಗೆ ಕೇಂದ್ರದಿಂದ ಇನ್ನೂ ಯಾವುದೇ ಲಿಖಿತ ಸಂವಹನ ಬಂದಿಲ್ಲ ಎಂದು ಹೇಳಿದ್ದಾರೆ.“ಆದರೆ ಪ್ರಬುದ್ಧ ಯೋಜನೆಯಡಿ ಯಶವಂತನಗರ ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದು ಆಡಳಿತವು ನಮಗೆ ತಿಳಿಸಿದೆ. ನಾವು ಪಡೆಯುವ ಯಾವುದೇ ಹಣದಿಂದ ಗ್ರಾಮ್ದ ಅಭಿವೃದ್ಧಿಗಾಗಿ ಪಂಚಾಯತ್ ಶ್ರಮಿಸುತ್ತದೆ ಆದರೆ ಈ ಕೇಂದ್ರ ಸರ್ಕಾರದ ಯೋಜನೆ ವರದಾನವಾಗಲಿದೆ ”ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com