ರಾಸಲೀಲೆ ಪ್ರಕರಣ: ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದೇ ನರೇಶ್ ಮತ್ತು ಶ್ರವಣ್, ಸಿಡಿ ಯುವತಿ ಸ್ಫೋಟಕ ಹೇಳಿಕೆ?

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದ್ದು ನನ್ನನ್ನು ಹನಿಟ್ರ್ಯಾಪ್ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಸಿಡಿ ಯುವತಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸಿಡಿ ಯುವತಿ-ರಮೇಶ್ ಜಾರಕಿಹೊಳಿ
ಸಿಡಿ ಯುವತಿ-ರಮೇಶ್ ಜಾರಕಿಹೊಳಿ

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದ್ದು ನನ್ನನ್ನು ಹನಿಟ್ರ್ಯಾಪ್ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಸಿಡಿ ಯುವತಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. 

ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನರೇಶ್ ಮತ್ತು ಶ್ರವಣ್ ನನ್ನನ್ನು ಬಳಸಿಕೊಂಡು ಹನಿಟ್ರ್ಯಾಪ್ ಕೃತ್ಯ ಎಸಗಿದ್ದಾರೆ ಎಂದು ಎಸ್ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ನರೇಶ್ ಮತ್ತು ಶ್ರವಣ್ ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಂಡರು. ಆ ಕಾರಣಕ್ಕಾಗಿಯೇ ಅವರು ಹೇಳಿದಂತೆ ನಾನು ಕೇಳಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವಾಗಿ ನನ್ನ ಹೇಳಿಕೆ ಪೂರ್ಣ ಪ್ರಮಾಣದ ಸತ್ಯ ಅಲ್ಲ. ಇವರಿಬ್ಬರ ಒತ್ತಡದಿಂದಾಗಿ ನಾನು ಈ ಹಿಂದೆ ಹೇಳಿಕೆಗಳನ್ನು ಕೊಟ್ಟಿದ್ದೆ ಎಂದು ತನಿಖಾಧಿಕಾರಿ ಮುಂದೆ ಸಿಡಿ ಯುವತಿ ಹೇಳಿದ್ದು ಇದನ್ನು ತನಿಖಾಧಿಕಾರಿಗಳು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. 

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಡಿ ಯುವತಿ ಪರ ವಕೀಲರು, ಯುವತಿ ಉಲ್ಟಾ ಹೇಳಿಕೆ ನೀಡಿಲ್ಲ. ಮಾಧ್ಯಮಗಳಲ್ಲಿ ವರದಿ ನೋಡಿ ಶಾಕ್ ಆಯಿತು. ಯುವತಿ ಯಾವುದೇ ತನ್ನ ನಿಲುವಿಗೆ ವಿರುದ್ಧವಾಗಿರುವ ಹೇಳಿಕೆಯನ್ನು ನೀಡಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com