ಕೊರೋನಾ ಉಲ್ಬಣ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮುಂದೂಡಲು ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಮನವಿ?

ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದರಿಂದ, 2020 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಿದಂತೆಯೇ ಮುಂಬರುವ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಮಾತುಗಳು ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಶಿವಮೊಗ್ಗ: ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳು ಹಠಾತ್ತನೆ ಏರಿಕೆಯಾಗಿರುವುದರಿಂದ, 2020ರಲ್ಲಿಗ್ರಾಮ ಪಂಚಾಯತ್ ಚುನಾವಣೆಯನ್ನು ಆರರಿಂದ ಏಳು ತಿಂಗಳವರೆಗೆ ಮುಂದೂಡಿದಂತೆಯೇಮುಂಬರುವ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಮಾತುಗಳು ಕೇಳಿಬಂದಿದೆ.

ಈ ಹಿಂದೆ, ಮೇ-ಅಂತ್ಯಕ್ಕೆ ನಡೆಯಲಿರುವ ತಾಲೂಕು ಪಂಚಾಯತ್  ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಿಯತಿಯಂತೆ ನಡೆಯುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು, ಆದರೆ ಕೇವಲ 10-15 ದಿನಗಳ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ, ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಕೊವಿಡ್ ಪ್ರಕರಣಗಳು ಏರಿಕೆಯಾಗಿದೆ. ಆರ್‌ಡಿಪಿಆರ್ ಸಚಿವಾಲಯವು ಚುನಾವಣೆಯನ್ನು ಮುಂದೂಡುವಂತೆ ರಾಜ್ಯ ಚುನಾವಣಾ ಆಯೋಗವನ್ನು ಕೋರಲು ಯೋಜಿಸುತ್ತಿದೆ ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.

2020ರ ಬೇಸಿಗೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಲಾಕ್‌ಡೌನ್ ಹೇರಲಾಯಿತು ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯೊಂದಿಗೆ ಚುನಾವಣೆಗಳನ್ನು ಮುಂದೂಡಲಾಯಿತು. ನಂತರ ಸರ್ಕಾರವು ಆಡಳಿತಾಧಿಕಾರಿಗಳನ್ನು ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಿಯೋಜಿಸಿತು. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ನಿಗದಿತ ಸಮಯದಲ್ಲಿ ನಡೆಯುತ್ತದೆಯೇ ಎಂದು ತಿಳಿಯಲು ಆಕಾಂಕ್ಷಿಗಳು ಉತ್ಸುಕರಾಗಿದ್ದಾರೆ. "ಹೆಚ್ಚಿನ ಆಕಾಂಕ್ಷಿಗಳು ನನ್ನಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿರುವುದರಿಂದ, ಈ ವಿಷಯದ ಬಗ್ಗೆ ನಮಗೆ ಸ್ಪಷ್ಟತೆ ಬೇಕು" ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ್ ನಾಯಕ್ ಹೇಳಿದ್ದಾರೆ.

ಪಕ್ಷದ ಟಿಕೆಟ್ ಪಡೆಯುವುದು ಮತ್ತು ತಮ್ಮ ಪ್ರಚಾರ ಕಾರ್ಯತಂತ್ರವನ್ನು ಜಾರಿಗೆ ತರುವುದು ಮುಂತಾದ ಕೆಲಸಗಳೊಡನೆ ಮುಂದುವರಿಯುವ ಕುರಿತು ಅವರು ಗೊಂದಲಕ್ಕೊಳಗಾಗಿದ್ದಾರೆ.

ಡಿಲಿಮಿಟೇಶನ್ ಮುಗಿದಿದೆ

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಡಿಲಿಮಿಟೇಶನ್ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗ ಪೂರ್ಣಗೊಳಿಸಿದೆ. ಅದರಂತೆ, ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಸ್ಥಾನಗಳ ಸಂಖ್ಯೆ ಸುಮಾರು 100 ರಷ್ಟು ಹೆಚ್ಚಾಗಿದ್ದು, ಒಟ್ಟು 1,190 ಕ್ಕೆ ತಲುಪಿದ್ದರೆ, ತಾಲೂಕು ಪಂಚಾಯತ್ ಪಿ ಸೀಟುಗಳನ್ನು ಸುಮಾರು 600 ರಷ್ಟು ಇಳಿಸಿ 3,273 ಕ್ಕೆ ಇಳಿಸಲಾಗಿದೆ. ಜಿಲ್ಲಾ ಚುನಾವಣಾ ಕಚೇರಿಗಳು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿವೆ. ಮುಂದಿನ ಎರಡು ವಾರಗಳಲ್ಲಿ, ಚುನಾವಣೆಗಳ ಬಗ್ಗೆ ಅಧಿಕೃತ ಅಧಿಸೂಚನೆಗೆ ಮುಂಚಿತವಾಗಿ ಕ್ಷೇತ್ರಗಳ ಪ್ರದೇಶವಾರು ಮೀಸಲಾತಿಯನ್ನು ನಿಗದಿಪಡಿಸಲಾಗುತ್ತದೆ.

ಎಲ್ಲವೂ ರಾಜ್ಯ ಚುನಾವಣಾ ಆಯೋಗದ ಯೋಜನೆಯಂತೆ ನಡೆದರೆ, ಮೇ ಅಂತ್ಯದ ವೇಳೆಗೆ ಚುನಾವಣೆಗಳು ಪೂರ್ಣಗೊಳ್ಳುತ್ತವೆ ಮತ್ತು ಜೂನ್‌ನಿಂದ ಹೊಸ ಪಂಚಾಯತಿಗಳು ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಆರ್‌ಡಿಪಿಆರ್ ಸಚಿವ ಕೆ ಎಸ್ ಈಶ್ವರಪ್ಪ ಅವರು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳ ಚುನಾವಣೆಗಳನ್ನು ನಿಗದಿತ ಅವಧಿಯಲ್ಲಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಚುನಾವಣೆಯನ್ನು ಮುಂದೂಡುವ ಬಗ್ಗೆ ಸರ್ಕಾರ ಯೋಚಿಸುತ್ತಿದ್ದರೆ, ಅದು ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಸಬೇಕಾಗಿದೆ, ಆದರೆ ಇದು ಇನ್ನೂ ತೀರ್ಮಾನವಾಗಿಲ್ಲ. ಚುನಾವಣೆ ಮುಂದೂಡಲ್ಪಟ್ಟರೆ, ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳಿಗೆ ಆಡಳಿತಾಧಿಕಾರಿಗಳನ್ನು ಸರ್ಕಾರ ನೇಮಿಸಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com