ಉಡುಪಿ ಶಿರೂರು ಮಠದ 31ನೇ ಯತಿಯಾಗಿ 16 ವರ್ಷದ ಅನಿರುದ್ದ ಸರಳತ್ತಾಯ ನೇಮಕ

16 ವರ್ಷದ ಅನಿರುದ್ದ ಸರಳತ್ತಾಯನನ್ನು ಶಿರೂರು ಮಠದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ.
ಅನಿರುದ್ದ ಸರಳತ್ತಾಯ
ಅನಿರುದ್ದ ಸರಳತ್ತಾಯ
Updated on

ಉಡುಪಿ: 16 ವರ್ಷದ ಅನಿರುದ್ದ ಸರಳತ್ತಾಯನನ್ನು ಶಿರೂರು ಮಠದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ.

ನೂತನ ಯತಿಗಳಿಗೆ ಮೇ 13ರಕ್ಕೆ ಸನ್ಯಾಸ ಸ್ವೀಕಾರ ಹಾಗೂ ಮೇ 14ಕ್ಕೆ ಪಟ್ಟಾಭಿಷೇಕ ನೆರವೇರಲಿದೆ.

ಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ 31ನೇ ಯತಿಗಳಾಗಿ ಅನಿರುದ್ದ ಆಗಮಿಸುತ್ತಿದ್ದಾರೆ. ಇದಕ್ಕೆ ಮುಂಚಿನ ಶ್ರೀಗಳಾಗಿದ್ದ ಶ್ರೀಲಕ್ಶ್ಮೀವರ ತೀರ್ಥರು 2018ರ ಜುಲೈ 31ರಂದು ಅನಾರೋಗ್ಯದ ಕಾರಣ ನಿಧನವಾಗಿದ್ದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ, ಅವರು, "ಶಿರೂರು  ಮಠದ ಉತ್ತರಾಧಿಕಾರಿಯಾದ ಅನಿರುದ್ಧ ಅವರ ಪೋಷಕರು ಸ್ವತಃ ವೇದಗಳು, ತತ್ಪಾರ್ಯ ನಿರ್ಣಯ ಮತ್ತು ಯುಕ್ತಿಮಲ್ಲಕ್ಕಡಿ ವೇದಾಂತ ಪಠ್ಯಗಳನ್ನು ಕಲಿಸಿದ್ದಾರೆ. ಪ್ರಸ್ತುತ ಅನಿರುದ್ಧ ಸಾಮಾನ್ಯ ಶೈಕ್ಷಣಿಕ ವ್ಯವಸ್ಥೆಯಡಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದಾರೆ.

"ಅನಿರುದ್ದ ತನ್ನ ಬಾಲ್ಯದಿಂದಲೇ ದೇವರು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ  ಹೊಂದಿದ್ದರು. ವೇದಗಳನ್ನು ಆಳವಾಗಿ ತಿಳಿದುಕೊಳ್ಳಲು ಸಹ ಅವರು ಆಸಕ್ತಿ ಹೊಂದಿದ್ದಾರೆ. ಅದರ ಪ್ರಕಾರ ಅವರು ತಮ್ಮ ತಂದೆಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತನ್ನ ಮಗನ ಆಶಯಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ಜಾತಕ ಪರಿಶೀಲನೆ ಮಾಡಿದಾಗ ತಮ್ಮ ಪುತ್ರ ಅನಿರುದ್ದ ಸನ್ಯಾಸಿಯಾಗಲು ವಿಧಿಸಿರುವುದು ಸ್ಪಷ್ಟವಾಗಿದೆ..

"ನಾನು ಅನಿರುದ್ಧನ ಹಿನ್ನೆಲೆ, ಜ್ಞಾನ, ಆಧ್ಯಾತ್ಮಿಕತೆ ಮತ್ತು ಜಾತಕದಲ್ಲಿನ ಗುಣಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಪರಿಶೀಲಿಸಿದಾಗ, ಶಿರೂರು ಮಠದ ಮಠಾಧೀಶರ ಸ್ಥಾನಕ್ಕೆ ಎಲ್ಲಾ ಬಗೆಯಲ್ಲಿಯೂ ಅನಿರುದ್ಧನು ಸೂಕ್ತನೆಂದು ನನಗೆ ತಿಳಿದುಬಂದಿತು. ಶಿರೂರು ಮಠದ ಭಗವಾನ್ ಶ್ರೀ ವಿಠ್ಠಲ ಬಯಸಿದ್ದು, ಭಗವಾನ್ ಶ್ರೀ ಕೃಷ್ಣನ ದೈನಂದಿನ ಪೂಜೆಗೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಳ್ಳುವಂತೆ ಅನಿರುದ್ಧನನ್ನು ಕೇಳಿಕೊಂಡಿದ್ದಾನೆ” ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com