ಚೆಕ್ ಬೌನ್ಸ್ ಪ್ರಕರಣ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಖುಲಾಸೆ 

ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಸಚಿವ ಬಾಬು ರಾವ್ ಚಿಂಚನ್ಸೂರ್ ಅವರನ್ನು ನಗರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಬಾಬುರಾವ್ ಚಿಂಚನಸೂರ್
ಬಾಬುರಾವ್ ಚಿಂಚನಸೂರ್
Updated on

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಸಚಿವ ಬಾಬು ರಾವ್ ಚಿಂಚನ್ಸೂರ್ ಅವರನ್ನು ನಗರ ನ್ಯಾಯಾಲಯ ಖುಲಾಸೆಗೊಳಿಸಿದೆ.

ಮಹಿಳೆಯೊಬ್ಬರಿಂದ ಬಾಬುರಾವ್ ಚಿಂಚನಸೂರು 11.88 ಕೋಟಿ ಸಾಲವಾಗಿ ಹಣ ಪಡೆದಿದ್ದರು, 2015ರ ಜುಲೈ ನಲ್ಲಿ ಅಂಜನಾ ಶಾಂತವೀರ್ ಎಂಬುವರು ಚಿಂಚನಸೂರ್ ವಿರುದ್ಧ
ಪ್ರಕರಣ ದಾಖಲಿಸಿದ್ದರು.

ನನ್ನಿಂದ ಹಣ ಪಡೆದಿರುವ ಚಿಂಚನಸೂರು ವಾರ್ಷಕವಾಗಿ ಶೇ.12 ರ ಬಡ್ಡಿ ದರದಲ್ಲಿ 12 ಕಂತುಗಳಲ್ಲಿ ಹಣ ನೀಡುವುದಾಗಿ ಹೇಳಿ ಹಣ ಪಡೆದಿದ್ದರು.,

ಪೂರ್ಣ ಸಾಲದ ಹಣಕ್ಕೆ 2015ರ ಏಪ್ರಿಲ್‌ 30ರ ದಿನಾಂಕ ನಮೂದಿಸಿ ಚೆಕ್‌ ನೀಡಿದ್ದರು. ಈ ಚೆಕ್‌ ಬೌನ್ಸ್‌ ಆಗಿತ್ತು. ಆನಂತರ, ಮಹಿಳೆ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ಅದಾದ ನಂತರ ಚಿಂಚನಸೂರು ಅವರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ತಮ್ಮ ಚೆಕ್ ಬುಕ್ ಕದ್ದಿರುವ ಮಹಿಳೆ ತಮ್ಮ ಸಹಿಯನ್ನು ನಕಲಿ ಮಾಡಿ ಬ್ಯಾಂಕ್ ಗೆ ಸಲ್ಲಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. 

ಚುನಾಯಿತ ಸಂಸದರು / ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಗುರುವಾರ ಚಿಂಚನಸೂರ್ ಅವರನ್ನು ಖುಲಾಸೆಗೊಳಿಸಿದೆ.

ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಗಮನಿಸಿದರೇ ದೂರುದಾರರ ಮೇಲೆ ಅನುಮಾನ ಬರುತ್ತದೆ, ಆರೋಪಿ ವಿರುದ್ಧ ದೂರುದಾರರು ಯಾವುದೇ ಸಮಂಜಸ ಆಧಾರ ಸಾಬೀತು ಪಡಿಸಲು ವಿಫಲವಾಗಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com