ಬೆಂಗಳೂರು: ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾ ಎರಡನೇ ಅಲೆ ಹಬ್ಬುತ್ತಿದ್ದರೂ ಎಂಟು ಜಿಲ್ಲೆಗಳ 10 ಸ್ಥಳೀಯ ಸಂಸ್ಥೆಗಳ 266 ವಾರ್ಡ್‌ಗಳಿಗೆ ನಿಗದಿಯಂತೆ ಚುನಾವಣೆ ನಡೆಯುವುದಾಗಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ, ಎಂಟು ಜಿಲ್ಲೆಗಳಲ್ಲಿ 266 ವಾರ್ಡ್‌ಗಳನ್ನು ಹೊಂದಿರುವ 10 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ - ಬಳ್ಳಾರಿಯ ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮೀಣ ವಿಜಯಪುರ ಮಹಾನಗರ ಪಾಲಿಕೆ, ರಾಮನಗರ ನಗರ ಪಾಲಿಕೆ ರಾಮನಾಗರ ಜಿಲ್ಲೆಯ ಚನ್ನಪಟ್ಟಣ ನಗರ ಪಾಲಿಕೆ, ಗುಡಿಬಂಡೆ ಪಟ್ಟಣ ಪಂಚಾಯತ್. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್, ಭದ್ರಾವತಿ ನಗರ ಪಾಲಿಕೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಹಾಸನ ಜಿಲ್ಲೆಯ ಬೇಲೂರು ನಗರ ಪಾಲಿಕೆ, ಕೊಡಗು ಜಿಲ್ಲೆಯ ಮಡಿಕೇರಿ ನಗರ ಪಾಲಿಕೆ, ಬೀದರ್‌ನ ಬೀದರ್ ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.
ಈ ಎಂಟು ಜಿಲ್ಲೆಗಳಲ್ಲಿ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳು ತಮ್ಮ ಗಡಿಯನ್ನು ಬೆಂಗಳೂರು ನಗರದೊಂದಿಗೆ ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ಒಂದೇ ದಿನ 20,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ.
“ಈ 10 ಸ್ಥಳೀಯ ಸಂಸ್ಥೆಗಳ ಜೊತೆಗೆ, ಬೀದರ್ ಮತ್ತು ಹಾವೇರಿಯಲ್ಲಿ ತಲಾ ಒಂದು ವಾರ್ಡ್ ಉಪಚುನಾವಣೆಗಳನ್ನು ಎದುರಿಸುತ್ತಿದೆ. ಈ ಮತದಾನ ಮಂಗಳವಾರ ನಡೆಯಲಿದೆ” ಎಂದು ಸುತ್ತೋಲೆ ತಿಳಿಸಿದೆ. ಚುನಾವಣೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದ ನಂತರ ಈ ಸಂಸ್ಥೆಗಳು ಮತದಾನಕ್ಕೆ ಸಿದ್ದವಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ ಮತ್ತು ಕೋವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿರಲಿದೆ ಎಂದೂ ಹೇಳಿದೆ.
Advertisement