
ಮಡಿಕೇರಿ: ಅರಣ್ಯ ಇಲಾಖೆ ಸೆರೆ ಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ 'ಕುಶ'ನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಆದೇಶಿಸಿದ್ದಾರೆ.
ಬುಧವಾರ ಈ ಸಂಬಂಧ ಸಚಿವರು ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಳೆದ ಒಂದು ವರ್ಷದಿಂದ ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ 'ಕುಶ'ನನ್ನು ಸೆರೆ ಹಿಡಿದು ತರಲಾಗಿತ್ತು. ಅಂತಿಮವಾಗಿ ಸಚಿವರು 'ಕುಶ' ಆನೆಗೆ ರೋಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡುಬಿಡುಗಡೆ ಮಾಡಲು ಆದೇಶಿಸಿದರು.
29 ವರ್ಷದ ಕುಶ ಆನೆ ಸುಮಾರು ಮೂರು ವರ್ಷಗಳ ಹಿಂದೆ ಕೊಡಗಿನ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಬೆಳೆಗಳು ಮತ್ತು ಆಸ್ತಿಪಾಸ್ತಿಗೆ ಹಾನಿಯಾದ ನಂತರ ಸೆರೆಹಿಡಿಯಲಾಗಿತ್ತು. ಆದಾಗ್ಯೂ, ಮಾರ್ಚ್ 2020 ರಲ್ಲಿ ಕುಶ ಸೆರೆಯಿಂದ ತಪ್ಪಿಸಿಕೊಂಡಿತ್ತು. ಅಂತಿಮವಾಗಿ ಈ ವರ್ಷದ ಮಾರ್ಚ್ ನಲ್ಲಿ ಆನೆಯನ್ನು ಸೆರೆ ಹಿಡಿಯಲಾಗಿತ್ತು.
ವನ್ಯ ಜೀವಿ ಕಾರ್ಯಕರ್ತೆ ಮತ್ತು ಸಂಸದ ಮೇನಕಾ ಗಾಂಧಿ ಕುಶ ಆನೆಯ ಕಥೆಯ ಬಗ್ಗೆ ತಿಳಿದುಕೊಂಡರು ಮತ್ತು ಆನೆ ಯಾವುದೇ ಮಾನವನಿಗೆ ಹಾನಿ ಮಾಡದ ಕಾರಣ ಅವರನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿದರು. ದುಬಾರೆ ಕ್ಯಾಂಪ್‌ನಲ್ಲಿರುವ ಅರಣ್ಯ ಅಧಿಕಾರಿಗಳು ಕುಶ ಆನೆ ಜೊತೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಅದನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 'ಕುಶ' ಆನೆಗೆ ರೋಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲು ತೀರ್ಮಾನಿಸಲಾಯಿತು.
Advertisement