ಹುಬ್ಬಳ್ಳಿ-ಧಾರವಾಡದಲ್ಲಿ ಅಗತ್ಯ ಪೂರೈಕೆಗಳನ್ನು ತಲುಪಿಸಲಿರುವ ರಿಲೀಫ್ ರೈಡರ್ಸ್

ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ವಿಧಿಸಿರುವ ಸೆಮಿ ಲಾಕ್ ಡೌನ್ ನಲ್ಲಿ ಹಲವರಿಗೆ ಅಗತ್ಯ ಪೂರೈಕೆಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ.
ರಿಲೀಫ್ ರೈಡರ್ಸ್
ರಿಲೀಫ್ ರೈಡರ್ಸ್
Updated on

ಹುಬ್ಬಳ್ಳಿ: ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ವಿಧಿಸಿರುವ ಸೆಮಿ ಲಾಕ್ ಡೌನ್ ನಲ್ಲಿ ಹಲವರಿಗೆ ಅಗತ್ಯ ಪೂರೈಕೆಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿರುವವರಿಗೆ ಹುಬ್ಬಳ್ಳಿ-ಧಾರವಾಡದಲ್ಲಿ ರಿಲೀಫ್ ರೈಡರ್ಸ್ ಎಂಬ ತಂಡ ಸಹಾಯಕ್ಕೆ ನೆರವಾಗುತ್ತಿದೆ. 

ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಸೆಮಿ ಲಾಕ್ ಡೌನ್ ನ್ನು ಘೋಷಿಸಿದೆ. ಅಗತ್ಯ ವಸ್ತುಗಳನ್ನು ಪಡೆಯುವುದಕ್ಕಾಗಿ ಬೆಳಿಗ್ಗೆ 6 ರಿಂದ 10 ವರೆಗೆ ಸಮಯ ನೀಡಲಾಗಿದೆ. ಆದರೆ ಅಗತ್ಯ ವಸ್ತುಗಳನ್ನು ಪಡೆಯಲಾಗದೇ ಇರುವ ಹಿರಿಯ ನಾಗರಿಕರಿಗೆ ಅಥವಾ ಸಮಸ್ಯೆಗಳನ್ನು ಎದುರಿಸುತ್ತಿರುವವರ ನೆರವಿಗೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಹಾಗೂ ಅರ್ಬನ್ ಮಾರ್ಫ್ ಸಹಾಯಕ್ಕೆ ಧಾವಿಸಿದ್ದು, ಅವರಿಗೆ ಕರೆ ಮಾಡುವವರಿಗೆ ರಿಲೀಫ್ ರೈಡರ್ಸ್ ಮೂಲಕ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ. 

"ಉದ್ಯೋಗದ ಹುಡುಕಾಟದಲ್ಲಿ ಹಲವು ಮಂದಿ ವಯಸ್ಸಾದ ಪೋಷಕರನ್ನು ಬಿಟ್ಟು ಬೇರೆ ನಗರಗಳಿಗೆ ಹೋಗಿದ್ದಾರೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹಲವು ರಾಜ್ಯಗಳು ಲಾಕ್ ಡೌನ್ ನ್ನು ಘೋಷಿಸಿವೆ. ಆದ್ದರಿಂದ ಮಕ್ಕಳು ಇದ್ದಲ್ಲೇ ಇದ್ದಾರೆ, ವಯಸ್ಸಾದ ಮಂದಿಗೆ ಔಷಧ ಹಾಗೂ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಯತ್ನಿಸುತ್ತಿದ್ದೇವೆ" ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಈ ತಂಡದಲ್ಲಿ 250 ಮಂದಿ ಇದ್ದು, 10 ಮಂದಿ ರಿಲೀಫ್ ರೈಡರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗತ್ಯವಿರುವವರು ಕರೆ ಮಾಡಿ ಬೆಳಿಗ್ಗೆ 6-10 ರಿಂದ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಶಿವಾನಂದ ದಂಡಾವತಿಮಠ ಹೇಳಿದ್ದಾರೆ. 

ದೂರವಾಣಿ ಸಂಖ್ಯೆಗಳ ವಿವರ
ಹುಬ್ಬಳ್ಳಿ: 9980561546/9845457758/9902350025
ಧಾರವಾಡ - 9886224624/9742424226/9741719926

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com