ಅಂತರ ಜಿಲ್ಲಾ ಪ್ರವಾಸಿಗರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ಆದೇಶ ಹಿಂಪಡೆದ ಕೊಡಗು ಜಿಲ್ಲಾಧಿಕಾರಿ

ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ  ಬರುವ ಪ್ರವಾಸಿಗರಿಗೆ ಆರ್ ಟಿ ಪಿಸಿಆರ್ ವರದಿ ಕಡ್ಡಾಯ ಎಂಬ ಆದೇಶವನ್ನು ಕೊಡಗು ಜಿಲ್ಲಾಧಿಕಾರಿ ವಾಪಸ್ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ  ಬರುವ ಪ್ರವಾಸಿಗರಿಗೆ ಆರ್ ಟಿ ಪಿಸಿಆರ್ ವರದಿ ಕಡ್ಡಾಯ ಎಂಬ ಆದೇಶವನ್ನು ಕೊಡಗು ಜಿಲ್ಲಾಧಿಕಾರಿ ವಾಪಸ್ ಪಡೆದಿದ್ದಾರೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಗುರುವಾರ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಆಗಸ್ಟ್ 4 ರಿಂದ ಅಂತರರಾಜ್ಯ ಪ್ರವಾಸಿಗರಿಗೆ ಮಾತ್ರ ಆರ್ ಟಿ ಪಿಸಿಆರ್ ವರದಿ ಕಡ್ಡಾಯ ಎಂದು ತಿಳಿಸಿದ್ದಾರೆ.

ಆಗಸ್ಟ್ 4 ರಿಂದ ಕೊಡಗಿಗೆ ಭೇಟಿ ನೀಡುವ ಎಲ್ಲಾ ಪ್ರವಾಸಿಗರಿಗೆ ಆರ್ ಟಿಪಿಸಿಆರ್ ವರದಿ ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದರು. ಹೋಮ್  ಸ್ಟೇ ಮತ್ತು ಲಾಡ್ಜ್ ಗಳಲ್ಲಿ ತಂಗುವ ಪ್ರವಾಸಿಗರ ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಈ ನಿರ್ಧಾರದಿಂದ ಅನೇಕ ಗೊಂದಲ ಏರ್ಪಟ್ಟಿತ್ತು.  ಜಿಲ್ಲಾಡಳಿತದ ನಿರ್ಧಾರದಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿತ್ತು. ಈಗ ಆದೇಶವನ್ನು ವಾಪಸ್ ಪಡೆದಿರುವುದು ಸಂತಸ ತಂದಿದೆ ಎಂದು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ. 

ಅನೇಕ ರೆಸಾರ್ಟ್ ಮಾಲೀಕರು ಕಂಗಾಲಾಗಿದ್ದರು ಏಕೆಂದರೆ ಹಲವರು ಬುಕಿಂಗ್ ರದ್ದತಿಯನ್ನು ವರದಿ ಮಾಡಿದರೂ. ಆದೇಶ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮದ ಭಯವಿತ್ತು.

ಆದರೆ ಜಿಲ್ಲಾಡಳಿತ ಸದ್ಯ ತನ್ನ ನಿರ್ಧಾರವನ್ನು ವಾಪಸ್ ಪಡೆದಿರುವ ಕಾರಣ ರೆಸಾರ್ಟ್ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಿಗಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com