ತುರ್ತಾಗಿ ಸೆರೋಸರ್ವೆ ನಡೆಸಿ: ರಾಜ್ಯ ಸರ್ಕಾರಕ್ಕೆ ಟಿಎಸಿ ಸಲಹೆ

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯನ್ನು ತಗ್ಗಿಸಲು ತುರ್ತಾಗಿ ಮಕ್ಕಳನ್ನು ಒಳಗೊಂಡಂತೆ ಮೂರನೇ ಸೆರೋಸರ್ವೇ ನಡೆಸುವಂತೆ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ(ಟಿಎಸಿ) ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಬಾಲಕನ ಚಿತ್ರ
ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಬಾಲಕನ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯನ್ನು ತಗ್ಗಿಸಲು ತುರ್ತಾಗಿ ಮಕ್ಕಳನ್ನು ಒಳಗೊಂಡಂತೆ ಮೂರನೇ ಸೆರೋಸರ್ವೇ ನಡೆಸುವಂತೆ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ(ಟಿಎಸಿ) ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

"ಕೇಂದ್ರ ಸಚಿವಾಲಯವು ಈ ಸಮೀಕ್ಷೆಯ ವರದಿಯನ್ನು ಕೇಳಿದೆ. ಇದು ರಾಜ್ಯದ ಮುಂದಿನ ಕ್ರಮಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಟಿಎಸಿ ವರದಿ ಹೇಳಿದೆ.

"ಎರಡನೇ ಅಲೆಯ ನಂತರ ವೈರಸ್‌ನ ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಅದು ಮಕ್ಕಳನ್ನು ಒಳಗೊಂಡಿರಬೇಕು. ಇದು ಎರಡನೇ ಅಲೆಯನ್ನು ಕೊನೆಗೊಳಿಸಲು ಮತ್ತು ಮೂರನೆಯ ಅಲೆಯನ್ನು ತಗ್ಗಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಟಿಎಸಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು ಹೇಳಿದ್ದಾರೆ.

ಪ್ರಯೋಗಾಲಯದ ದೃಢೀಕರಣವಿಲ್ಲದ ಪ್ರಕರಣಗಳು ಮತ್ತು ಲಕ್ಷಣರಹಿತ ಹಾಗೂ ಸೌಮ್ಯ ಪ್ರಕರಣಗಳು ಸ್ಥಳೀಯ ಕಣ್ಗಾವಲು ವ್ಯವಸ್ಥೆಯಿಂದ ತಪ್ಪಿಹೋಗುತ್ತವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ.

ಜನಸಂಖ್ಯೆ ಆಧಾರಿತ ಸಿರೋಪ್ರೆವಲೆನ್ಸ್ ಅಧ್ಯಯನಗಳು ತಪ್ಪಿದ ಸೋಂಕನ್ನು ಗಣನೆಗೆ ತೆಗೆದುಕೊಂಡು ಉತ್ತಮ ಅಂದಾಜುಗಳನ್ನು ನೀಡಬಹುದು. ಹೊಸ ರೂಪಾಂತರಗಳ ಹೊರಹೊಮ್ಮುವಿಕೆ ಮತ್ತು ಕಳಪೆ ಸಾಮಾಜಿಕ ಅಂತರವು ಮೂರನೆಯ ಅಲೆಗೆ ಕಾರಣಗಳಾಗಿರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಈ ಬಗ್ಗೆ ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದ ಟಿಎಸಿ ಸದಸ್ಯ ಡಾ. ಮಂಜುನಾಥ್ ಸಿಎನ್, ಜನಸಂಖ್ಯೆ ಆಧಾರಿತ ಸೆರೋಪ್ರೆವೆಲೆನ್ಸ್ ಅಧ್ಯಯನಗಳು ಉತ್ತಮ ಅಂದಾಜುಗಳನ್ನು ನೀಡಬಹುದು ಎಂದು ಹೇಳಿದರು.

"ಮೂರನೇ ಅಲೆ ಮಕ್ಕಳ ಮೇಲೆ(ವಯಸ್ಸು 0 -17 ವರ್ಷಗಳು) ಎರಡನೇ ಅಲೆಗಿಂತ 13 ಪಟ್ಟು ಹೆಚ್ಚು ಪ್ರಭಾವ ಬೀರಬಹುದು” ವರದಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com