
ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾರ್ಯಾಲಯ ನಗರದ ವಿವಿದೆಡೆ ಕೋಟ್ಯಾಂತರ ರೂ ಮೌಲ್ಯದ ಭೂಮಿಯನ್ನು ವಶ ಪಡಿಸಿಕೊಡಿದೆ.
ಆಗಸ್ಟ್ 7 ರಂದು 5 ವಿವಿಧ ತಾಲೂಕುಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಕೆರೆ ಒತ್ತುವರಿಮಾಡಿದ್ದ 67,74,75,000 ಮೌಲ್ಯದ 42.29 ಎಕರೆ ಜಾಗ ವಶ ಪಡಿಸಿಕೊಂಡಿದ್ದಾರೆ.
ಅಲ್ಲದೆ, ಯಲಹಂಕ ತಾಲೂಕಿನಲ್ಲಿ, 16 ಗುಂಟಾ ಭೂಮಿಯಲ್ಲಿ 2,40,00,000 ಆಸ್ತಿಗಳು ಮತ್ತು ಆನೇಕಲ್ ತಾಲ್ಲೂಕಿನಲ್ಲಿ 1,20,00,000 ಮೌಲ್ಯದ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ಉತ್ತರದಲ್ಲಿ 2.12 ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ.
ಆಗಸ್ಟ್ 6 ರಂದು ಅಧಿಕಾರಿಗಳ ತಂಡಗಳು ಬನ್ನೇರುಘಟ್ಟ ರಸ್ತೆಯಲ್ಲಿ ಇಸ್ಲಾಮಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಳಿ ಇರುವ ಸರ್ಕಾರಿ ಭೂಮಿಯನ್ನು ಮರಳಿ ಪಡೆದುಕೊಂಡಿದ್ದವು. ಎಲ್ಲಾ ಕಾನೂನು ಹೋರಾಟಗಳನ್ನು ಗೆದ್ದ ನಂತರ ಕಾಲೇಜಿನ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮರುಪಡೆಯಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.
Advertisement