'ಅಂಶಿ ಘಾಟ್' ಪುನಃ ತೆರೆಯಲು ಬೆಂಗಳೂರಿನ ಐಐಎಸ್ ಸಿ ಸಹಾಯ ಕೋರಿದ ಉತ್ತರ ಕನ್ನಡ ಜಿಲ್ಲಾಡಳಿತ

ಭಾರೀ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿರುವ ಅಂಶಿ ಘಾಟ್ ತೆರೆಯಲು ಮಾರ್ಗಗಳನ್ನು ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತವು ಭಾರತೀಯ  ವಿಜ್ಞಾನ ಸಂಸ್ಥೆಯ ತಜ್ಞರ ಸಹಾಯ ಪಡೆಯುತ್ತಿದೆ.
ಐಐಎಸ್ ಸಿ
ಐಐಎಸ್ ಸಿ

ಕಾರವಾರ: ಭಾರೀ ಭೂಕುಸಿತದಿಂದಾಗಿ ನಿರ್ಬಂಧಿಸಲಾಗಿರುವ ಅಂಶಿ ಘಾಟ್ ತೆರೆಯಲು ಮಾರ್ಗಗಳನ್ನು ಕಂಡುಕೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತವು ಭಾರತೀಯ  ವಿಜ್ಞಾನ ಸಂಸ್ಥೆಯ ತಜ್ಞರ ಸಹಾಯ ಪಡೆಯುತ್ತಿದೆ.

ಉತ್ತರ ಕನ್ನಡವು ಧಾರವಾಡ ಮತ್ತು ಬೆಳಗಾವಿಯೊಂದಿಗೆ ನೇರ ಸಂಪರ್ಕವನ್ನು ಕಳೆದುಕೊಂಡಿದೆ, ಹೀಗಾಗಿ ಜಿಲ್ಲಾಡಳಿತವು ಘಾಟ್ ಅನ್ನು ಮತ್ತೆ ತೆರೆಯಲು ತಜ್ಞರ ಸಹಾಯವನ್ನು ಅವಲಂಬಿಸಿದೆ.

ಪ್ರಾಕೃತಿಕ ವಿಕೋಪವು ಜಿಲ್ಲೆಗೆ ತೀವ್ರ ಹೊಡೆತ ನೀಡಿದೆ. ಬಹುತೇಕ ಎಲ್ಲಾ ಸೇತುವೆಗಳು, ರಸ್ತೆಗಳು ಮತ್ತು ಘಾಟ್‌ಗಳ ಮೇಲೆ ಪರಿಣಾಮ ಬೀರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

"ಅರ್ಬೈಲ್ ಘಾಟ್ ಹೊರತುಪಡಿಸಿ, ಬೇರೆ ಯಾವುದೇ ಘಾಟ್‌ಗಳನ್ನು ಈ ಸಮಯದಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗಿಲ್ಲ. ಜೋಯಿಡಾವನ್ನು ಕಾರವಾರದೊಂದಿಗೆ ಸಂಪರ್ಕಿಸುವ ಅಂಶಿ ಘಾಟ್ ಅನ್ನು ನಿರ್ಬಂಧಿಸಲಾಗಿದೆ. ಅದು ಯಾವಾಗ ಮತ್ತೆ ತೆರೆಯುತ್ತದೆ ಎಂದು ನಮಗೆ ಖಚಿತವಿಲ್ಲ" ಎಂದು ಸಚಿವರು ಹೇಳಿದರು.

ಐಐಎಸ್ ಸಿಯಿಂದ ತಜ್ಞರ ತಂಡ ಉತ್ತರ ಕನ್ನಡಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದೆ. ಅವರು ಬಂದ ನಂತರ, ನಾವು ಎಸ್ಟಿಮೇಟ್ ಕಳುಹಿಸುತ್ತೇವೆ ಮತ್ತು ಯೋಜನೆಗೆ ಅನುಮೋದಿಸುತ್ತೇವೆ ಎಂದು ಅವರು ಹೇಳಿದರು. 

ಹಾನಿಗೊಳಗಾದ ಪ್ರದೇಶಗಳು ಮತ್ತು ಕದ್ರಾ ಮತ್ತು ಇತರ ಸ್ಥಳಗಳಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಪ್ರಸ್ತಾಪಿಸಿದ ಹೆಬ್ಬಾರ್, ಇಂಧನ ಸಚಿವ ಕೆ. ಸುನೀಲ್ ಕುಮಾರ್ ಜಿಲ್ಲೆಗೆ ಭೇಟಿ ನೀಡಲಿದ್ದು, ಪ್ರವಾಹದಿಂದ ಉಂಟಾದ ಹಾನಿಯ ಮೌಲ್ಯಮಾಪನ ಮಾಡಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com