ಶಾಲೆಗಳ ಆವರಣದ ಮೂಲಕ ಹಾದುಹೋಗುವ ಎಲ್ಲಾ ಹೈ-ಟೆನ್ಶನ್ ಲೈನ್‌ಗಳನ್ನು ತೆರವುಗೊಳಿಸಿ: ಇಂಧನ ಇಲಾಖೆಗೆ ಶಿಕ್ಷಣ ಸಚಿವ ಪತ್ರ

ಶಾಲಾ ಆವರಣದ ಪಕ್ಕದಲ್ಲಿ ಹಾದುಹೋಗುವ ಎಲ್ಲಾ ಹೈ ಟೆನ್ಷನ್ ಲೈನ್ ಗಳನ್ನು ತೆರವುಗೊಳಿಸುವಂತೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್

ತುಮಕೂರು: ಶಾಲಾ ಆವರಣದ ಪಕ್ಕದಲ್ಲಿ ಹಾದುಹೋಗುವ ಎಲ್ಲಾ ಹೈ ಟೆನ್ಷನ್ ಲೈನ್ ಗಳನ್ನು ತೆರವುಗೊಳಿಸುವಂತೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ತುಮಕೂರಿನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ದಿನ ಬೆಳಗ್ಗೆ ಧ್ವಜ ಕಂಬ ನೆಡುವ ಸಂದರ್ಭದಲ್ಲಿ 10ನೇ ತರಗತಿ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟು ಮತ್ತಿಬ್ಬರು ಬಾಲಕರು ಗಾಯಗೊಂಡ ಘಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಶಾಲೆಯ ಆವರಣದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೈ ಟೆನ್ಷನ್ ಲೈನ್ ನ್ನು ತೆರವುಗೊಳಿಸುವಂತೆ ಸೂಚಿಸಲಾಗಿದ್ದು ತೀರಾ ಅನಿವಾರ್ಯವಿದ್ದರೆ ಕೇಬಲ್ ಅಳವಡಿಸಬೇಕೆಂದು ವಿದ್ಯುತ್ ಇಲಾಖೆಗೆ ಸೂಚಿಸಲಾಗಿದೆ ಮೊನ್ನೆ ತುಮಕೂರಿನ ಶಾಲೆಯೊಂದರಲ್ಲಿ ಬಾಲಕ ವಿದ್ಯುತ್ ಪ್ರವಹಿಸಿ ಆದ ಘಟನೆ ನಿಜಕ್ಕೂ ದುರದೃಷ್ಟಕರ. ವರ್ಷದ ಹಿಂದೆ ಇಲ್ಲಿನ ಗ್ರಾಮಸ್ಥರು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೆಲಸ ಮಾಡಿರಲಿಲ್ಲ ಎನ್ನುವುದು ಮತ್ತೊಂದು ದುಃಖದ ಸಂಗತಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com