ಸಚಿವರ ಮಹಾ ಎಡವಟ್ಟು: ಮೃತ ಯೋಧನ ಬದಲಿಗೆ ಬದುಕಿರುವ ಯೋಧನ ಮನೆಗೆ ತೆರಳಿ ನಾರಾಯಣಸ್ವಾಮಿ ಸಾಂತ್ವನ!

ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಎಡವಟ್ಟು ಮಾಡಿಕೊಂಡಿಕೊಂಡಿದ್ದಾರೆ.
ಯೋಧನ ಕುಟುಂಬಕ್ಕೆ ನಾರಾಯಣಸ್ವಾಮಿ ಭೇಟಿ
ಯೋಧನ ಕುಟುಂಬಕ್ಕೆ ನಾರಾಯಣಸ್ವಾಮಿ ಭೇಟಿ

ಹುಬ್ಬಳ್ಳಿ: ಜನಾಶೀರ್ವಾದ ಕಾರ್ಯಕ್ರಮದ ವೇಳೆ ಅತ್ಯುತ್ಸಾಹದಲ್ಲಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸೂಕ್ತ ಮಾಹಿತಿ ಪಡೆದುಕೊಳ್ಳದೇ ಭಾರಿ ಎಡವಟ್ಟು ಮಾಡಿಕೊಂಡಿಕೊಂಡಿದ್ದಾರೆ.

ಮೃತಪಟ್ಟ ಯೋಧನ ಕುಟುಂಬದ ನಿವಾಸಕ್ಕೆ ಭೇಟಿ‌ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದುಕಿರುವ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ಸಾಂತ್ವನ ಹೇಳಿದ್ದಾರೆ. ಮೃತ ಯೋಧನ ಪತ್ನಿಗೆ ನೌಕರಿ ಭರವಸೆಯನ್ನು ನೀಡಿದರು. ಈ ಮೂಲಕ ಸಚಿವ ನಾರಾಯಣಸ್ವಾಮಿ ಅವರು ಯೋಧನ ಕುಟುಂಬದವರ ಮನೆಯ ಹಬ್ಬದ ವಾತಾವರಣವನ್ನೇ ಕಸಿದುಕೊಳ್ಳುವ ಜೊತೆಗೆ ಅವರು ಮುಜುಗರ ಅನುಭವಸುವಂತಾಯಿತು.

ಬಿಜೆಪಿಯ ಜನಾರ್ಶೀವಾದ ಯಾತ್ರೆ ಅಂಗವಾಗಿ ಸಚಿವರು ಮುಳಗುಂದದಲ್ಲಿ ಯೋಧರೊಬ್ಬರ ಮನೆ ಭೇಟಿ ನೀಡುವ ಕಾರ್ಯಕ್ರಮ ಇದಾಗಿತ್ತು. ನಿಗದಿತ ಸಮಯಕ್ಕಿಂತ ತಡವಾಗಿ ಅವಸರದಲ್ಲಿ ಬಂದ ಅವರು ತರಾತುರಿಯಲ್ಲಿ ಯೋಧನ ಕುಟುಂಬದವರ ಯೋಗಕ್ಷೇಮ ವಿಚಾರಿಸಿ, ಜಮೀನು ಹಾಗೂ ಯೋಧನ ಪತ್ನಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು. ಆದರೆ ಕುಟುಂಬಸ್ಥರಿಗೆ ಏನು ತಿಳಿಯಲೇ ಇಲ್ಲ.

ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ಈ ಕಾರ್ಯಕ್ರಮ ಆಯೋಜಿಸಿದ್ದರು,  ಕಳೆದ ವರ್ಷ ಮೃತ ಪಟ್ಟ ಯೋಧನ ಮನೆಗೆ ಸಚಿವರು ಭೇಟಿ ನೀಡಬೇಕಿತ್ತು, ಆದರೆ ತರಾತುರಿಯಲ್ಲಿ ಬದುಕಿರುವ ಯೋಧನ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಆ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ನೌಕರಿ ಜಮೀನಿನ ಭರವಸೆ ನೀಡಿದ ಮೇಲೆ ಕುಟುಂಬಸ್ಥರಿಗೆ ಹೃದಯ ಕಿತ್ತು ಬಾಯಿಗೆ ಬಂದಂತಾಯಿತು. ಆ ವೇಳೆ ಕುಟುಂಬಸ್ಥರು ಯೋಧನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಇದರಿಂದ ಸಚಿವರು ಮುಜುಗರ ಅನುಭವಿಸುವಂತಾಗಿದೆ.

ಒಂದೂವರೆ ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಯೋಧ ಬಸವರಾಜ್ ಹಿರೇಮಠ ಮೃತಪಟ್ಟಿದ್ರು. ಅವರ ಕುಟುಂಬಕ್ಕೆ ಸಾಂತ್ವನ ಹೇಳೋದು ಬಿಟ್ಟು, ನಾರಾಯಣಸ್ವಾಮಿ ಹಾಲಿ ಸೇವೆ ಸಲ್ಲಿಸುತ್ತಿರುವ ಜೀವಂತವಾಗಿರುವ ರವಿಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ತಮ್ಮ ನಾರಾಯಣಸ್ವಾಮಿ ಮುಜುಗರಕ್ಕೀಡಾಗಿದ್ದಾರೆ. ಇದೆಲ್ಲಾ ನಡೆದಿರೋದು ಮಾಹಿತಿಯ ಕೊರತೆಯಿಂದ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com