ಅಫ್ಘಾನ್ ಯುವಕನನ್ನು ವಿವಾಹವಾಗಿದ್ದ ಬಳ್ಳಾರಿ ಯುವತಿ ಸುರಕ್ಷಿತವಾಗಿ ದಹಲಿಗೆ ವಾಪಸ್!

ನಗರದ ಕುಟುಂಬಕ್ಕೆ ನಿನ್ನೆ ಭಾನುವಾರ ಖುಷಿಯ ದಿನವಾಗಿತ್ತು. ತಮ್ಮ ಪುತ್ರಿ ಮತ್ತು ಆಕೆಯ ಪತಿ ಅಫ್ಘಾನಿಸ್ತಾನದಿಂದ ದೆಹಲಿಗೆ ಬಂದಿಳಿದಿದ್ದರು.
ಬಳ್ಳಾರಿ ಮೂಲದ ತನ್ವೀರ್ ಮತ್ತು ಆಕೆಯ ಅಫ್ಘನ್ ಪತಿ
ಬಳ್ಳಾರಿ ಮೂಲದ ತನ್ವೀರ್ ಮತ್ತು ಆಕೆಯ ಅಫ್ಘನ್ ಪತಿ
Updated on: 

ಬಳ್ಳಾರಿ: ನಗರದ ಕುಟುಂಬಕ್ಕೆ ನಿನ್ನೆ ಭಾನುವಾರ ಖುಷಿಯ ದಿನವಾಗಿತ್ತು. ತಮ್ಮ ಪುತ್ರಿ ಮತ್ತು ಆಕೆಯ ಪತಿ ಅಫ್ಘಾನಿಸ್ತಾನದಿಂದ ದೆಹಲಿಗೆ ಬಂದಿಳಿದಿದ್ದರು.

ತನ್ವೀರ್ ಬಳ್ಳಾರಿ ಅಫ್ಘಾನಿಸ್ತಾನ ಪ್ರಜೆ ಸೈಯದ್ ಜಲಾಲ್ ನನ್ನು 2018ರಲ್ಲಿ ವಿವಾಹವಾಗಿ ಕಳೆದ ಮೂರು ವರ್ಷಗಳಿಂದ ಕಾಬುಲ್ ನಲ್ಲಿ ನೆಲೆಸಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಜಲಾಲ್ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅಫ್ಘಾನಿಸ್ತಾನವನ್ನು ತಾಲಿಬಾನಿಯರು ವಶಪಡಿಸಿಕೊಳ್ಳುತ್ತಿದ್ದಂತೆ ಪರಿಸ್ಥಿತಿ ಹದಗೆಟ್ಟು ಬಳ್ಳಾರಿಯ ಸಂಡೂರಿನಲ್ಲಿರುವ ತನ್ವೀರ್ ಪೋಷಕರಿಗೆ ಆಘಾತವಾಗಿತ್ತು. ತಮ್ಮ ಅಳಿಯನ ಪರವಾಗಿ ಜಿಲ್ಲಾಡಳಿತದ ಮೊರೆ ಹೋದರು. ಮಗಳು-ಅಳಿಯನ ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಅವರ ದುಃಖ, ಭಯ ಇನ್ನಷ್ಟು ಹೆಚ್ಚಾಗತೊಡಗಿತು. ಕೊನೆಗೆ ಭಾರತೀಯ ವಾಯುಪಡೆ ವಿಮಾನದಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ.

ಭಾರತಕ್ಕೆ ವಾಪಸ್ಸಾಗಿ ಎಂದು ನಾವು ಹಲವು ಸಮಯಗಳಿಂದ ದಂಪತಿಗೆ ಹೇಳುತ್ತಿದ್ದೆವು. ಅಲ್ಲಿ ಅವರಿಗೆ ಉದ್ಯೋಗವಿದ್ದ ಕಾರಣ ಉಳಿದುಕೊಳ್ಳಬೇಕಾಗಿತ್ತು. ಆದರೆ ಅಲ್ಲಿ ಇತ್ತೀಚೆಗೆ ಪರಿಸ್ಥಿತಿ ಚಿಂತಾಜನಕವಾದ ಮೇಲೆ ದಂಪತಿಗೆ ಅಲ್ಲಿ ಉಳಿಯಲು ಮನಸ್ಸಾಗದೆ ವಾಪಸ್ಸಾಗಿದ್ದಾರೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಬೇಗ ಅವರ ಜೊತೆ ಮಾತನಾಡಲು, ಸಂಪರ್ಕಿಸಲು ವ್ಯವಸ್ಥೆ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಯೊಬ್ಬರು, ದಂಪತಿ ಎಲ್ಲಿದ್ದಾರೆ ಎಂದು ದೆಹಲಿಯಿಂದ ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಅವರನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತೇವೆ. ಕೂಡಲೇ ಮಾಹಿತಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com