ಗ್ರಾಮೀಣ ಪ್ರದೇಶದ ಜನರಿಗೆ ಕೋವಿಡ್ ಲಸಿಕೆ ನೀಡಲು ಮೊಬೈಲ್ ಬಸ್ ಆರಂಭ: ಡಾ. ದೇವಿ ಶೆಟ್ಟಿ

ದೇಶದ ಗ್ರಾಮೀಣ ಪ್ರದೇಶಗಳ ಜನತೆಗೆ ಮುಖ್ಯವಾಗಿ ಕೋವಿಡ್ ಲಸಿಕೆ ನೀಡುವ ಉದ್ದೇಶದಿಂದ ವೊಲ್ವೊ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ಅಭಿವೃದ್ಧಿಪಡಿಸಿರುವ ಮೊಬೈಲ್ ಲಸಿಕೆ ಬಸ್ಸಿಗೆ ಚಾಲನೆ ನೀಡಲಾಗಿದೆ.
ಡಾ ದೇವಿಶೆಟ್ಟಿ
ಡಾ ದೇವಿಶೆಟ್ಟಿ

ಬೆಂಗಳೂರು: ದೇಶದ ಗ್ರಾಮೀಣ ಪ್ರದೇಶಗಳ ಜನತೆಗೆ ಮುಖ್ಯವಾಗಿ ಕೋವಿಡ್ ಲಸಿಕೆ ನೀಡುವ ಉದ್ದೇಶದಿಂದ ವೊಲ್ವೊ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ಅಭಿವೃದ್ಧಿಪಡಿಸಿರುವ ಮೊಬೈಲ್ ಲಸಿಕೆ ಬಸ್ಸಿಗೆ ಚಾಲನೆ ನೀಡಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಾರಾಯಣ ಹೃದಯಾಲಯದ ನಿರ್ದೇಶಕ ಹಾಗೂ ಮುಖ್ಯ ವೈದ್ಯ ಡಾ ದೇವಿ ಶೆಟ್ಟಿ, ಗ್ರಾಮಾಂತರ ಪ್ರದೇಶದಲ್ಲಿರುವವರಿಗೆ ಲಸಿಕೆ ನೀಡುವುದು ಸವಾಲಾಗಿದೆ. ಅಲ್ಲಿನ ಜನರಿಗೆ ನಗರ ಪ್ರದೇಶಗಳಿಗೆ ಬರುವುದಕ್ಕೆ ಸಹ ಕಷ್ಟವಿರುತ್ತದೆ, ಅಂತವರಿಗೆ ಈ ಸೌಲಭ್ಯದಿಂದ ಅನುಕೂಲವಾಗಲಿದೆ ಎಂದರು.

ಗ್ರಾಮೀಣ ಪ್ರದೇಶಗಳ ಜನರ ಮನೆಬಾಗಿಲಿಗೆ ಹೋಗಿ ಲಸಿಕೆ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ವೊಲ್ವೊ ಜೊತೆ ನಾವು ಈ ಮೊಬೈಲ್ ಬಸ್ಸನ್ನು ಆರಂಭಿಸಿದ್ದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಸೌಲಭ್ಯವನ್ನು ಲಸಿಕೆ ನೀಡಿಕೆಗೆ ಹೊಂದಿದೆ. ವೈದ್ಯರು, ನರ್ಸರು ಸಹ ಸೇವೆಗೆ ಲಭ್ಯರಿರುತ್ತಾರೆ ಎಂದರು.

ಗ್ರಾಮೀಣ ಪ್ರದೇಶದ ಸಾವಿರಾರು ಜನತೆಗೆ ಇದರಿಂದ ನೆರವಾಗಲಿದ್ದು ಇದು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com