ವಿದ್ಯುತ್ ದರ ಏರಿಸಲು ಬೆಸ್ಕಾಮ್ ಚಿಂತನೆ

ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿರುವ ಬೆಸ್ಕಾಮ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಗೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 
ಸ್ಮಾರ್ಟ್ ವಿದ್ಯುತ್ ಮೀಟರ್
ಸ್ಮಾರ್ಟ್ ವಿದ್ಯುತ್ ಮೀಟರ್

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿರುವ ಬೆಸ್ಕಾಮ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಗೆ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಪ್ರತಿ ಯುನಿಟ್ ಗೆ 1.23 ರಿಂದ 1.50 ರೂಪಾಯಿವರೆಗೆ ಏರಿಕೆ ಮಾಡುವುದಕ್ಕೆ ಬೆಸ್ಕಾಮ್ ಪ್ರಸ್ತಾವನೆ ಹೊಂದಿದ್ದು ಕಳೆದ ವರ್ಷದ ಪ್ರಸ್ತಾವನೆಯೂ ಇದೆ ಮಾದರಿಯಲ್ಲಿತ್ತು ಎಂದು ಹೇಳಿದೆ. 

ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸುವುದು ವಾರ್ಷಿಕ ಚಟುವಟಿಕೆಯಾಗಿದೆ, ಪ್ರಸ್ತಾವನೆಯ ಬಳಿಕ ಕೆಇಆರ್ ಸಿ ಪ್ರಸ್ತಾವನೆಯನ್ನು ಪರಿಶೀಲಿಸಿ ಅಂತಿಮವಾಗಿ ಬೆಲೆ ಏರಿಕೆಯ ಬಗ್ಗೆ ಘೋಷಣೆ ಮಾಡಲಿದೆ. 

"ಪ್ರಸ್ತಾವನೆಯನ್ನು ಸಾಮಾನ್ಯವಾಗಿ ಕೆಇಆರ್ ಸಿ ಅನುಮೋದಿಸುವುದಿಲ್ಲ. ಆದರೆ ವಾರ್ಷಿಕ ಪರಿಷ್ಕರಣೆಯನ್ನು ಘೋಷಣೆ ಮಾಡಲಿದೆ" ಎಂದು ಬೆಸ್ಕಾಮ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಅಧಿಕಾರಿಗಳ ಪ್ರಕಾರ ಮೂರು ದಿನಗಳ ಹಿಂದೆ ಕೆಇಆಋ ಸಿಗೆ ಪ್ರಸ್ತಾವನೆ ಕಳಿಸಲಾಗಿದ್ದು, ಇದನ್ನು ಅನುಮೋದಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂಬ ಬಗ್ಗೆ ನಂತರದ ಹಂತಗಳಲ್ಲಿ ನಿರ್ಧಾರ ಮಾಡಲಾಗುತ್ತದೆ ಎಂಬ ಪ್ರತಿಕ್ರಿಯೆ ಕೆಇಆರ್ ಸಿ ಅಧಿಕಾರಿಗಳಿಂದ ಬಂದಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com