ಕೆಂಪೇಗೌಡ ವಿಮಾನ ನಿಲ್ದಾಣ: ಕಳೆದ 8 ತಿಂಗಳಲ್ಲಿ ಪ್ರಯಾಣಿಕರು ಮರೆತು ಹೋದ 32,169 ವಸ್ತು ವಶಕ್ಕೆ, ಗ್ಯಾಡ್ಜೆಟ್ ಗಳೇ ಹೆಚ್ಚು!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 8 ತಿಂಗಳಲ್ಲಿ 32,169 ವಸ್ತುಗಳನ್ನು ಮರೆತುಹೋಗಿದ್ದಾರೆ. ಈ ಪೈಕಿ ಪ್ರಮುಖವಾಗಿ ಗ್ಯಾಡ್ಜೆಟ್, ಎಲೆಕ್ಟ್ರಾನಿಕ್ ವಸ್ತುಗಳಿವೆ ಎಂದು ಬಿಐಎಎಲ್ ತಿಳಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Updated on

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು 8 ತಿಂಗಳಲ್ಲಿ 32,169 ವಸ್ತುಗಳನ್ನು ಮರೆತುಹೋಗಿದ್ದಾರೆ. ಈ ಪೈಕಿ ಪ್ರಮುಖವಾಗಿ ಗ್ಯಾಡ್ಜೆಟ್, ಎಲೆಕ್ಟ್ರಾನಿಕ್ ವಸ್ತುಗಳಿವೆ ಎಂದು ಬಿಐಎಎಲ್ ತಿಳಿಸಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಬಿಐಎಎಲ್ ನ ವಕ್ತಾರರು ಈ ವರ್ಷದ ಏಪ್ರಿಲ್ 1 ರಿಂದ ನವೆಂಬರ್ 30 ವರೆಗೆ 9,962 ವಸ್ತುಗಳನ್ನು ಕಳೆದುಹೋಗಿ ಪತ್ತೆಯಾದ ವಿಭಾಗದಲ್ಲಿರಿಸಲಾಗಿದೆ. ವೈಯಕ್ತಿಕ ಗ್ಯಾಡ್ಜೆಟ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಮರೆತುಹೋಗಿದ್ದಾರೆ. ಮರೆತುಹೋಗಿರುವ ವಸ್ತುಗಳ ಪೈಕಿ ಶೇ.30 ರಷ್ಟು ಎಲೆಕ್ಟ್ರಾನಿಕ್ ವಸ್ತುಗಳಿವೆ.

ಹೆಚ್ಚು ವಸ್ತುಗಳು ಪ್ರೀ-ಎಂಬಾರ್ಕೇಶನ್ ಸೆಕ್ಯುರಿಟಿ ಚೆಕ್ (PSEC) ಪ್ರದೇಶದಿಂದ ಬಂದಿದೆ. 1,089 ಚಿನ್ನಾಭರಣಗಳು, 2,083 ಪ್ರಕರಣಗಳಲ್ಲಿ ನಗದು ಮರೆತುಹೋಗಿರುವುದೂ ಪತ್ತೆಯಾಗಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಕೇವಲ 21,273 ವಸ್ತುಗಳು ಪತ್ತೆಯಾಗಿತ್ತು, ಇದಕ್ಕೂ ಮುನ್ನ 2019-2020 ರಲ್ಲಿ 42,339 ವಸ್ತುಗಳು ಪತ್ತೆಯಾಗಿತ್ತು ಎಂದು ಬಿಐಎಎಲ್ ತಿಳಿಸಿದೆ. 

ನಿಯಮದ ಪ್ರಕಾರ, ವಸ್ತುಗಳು ಪತ್ತೆಯಾದ ಬಳಿಕ ಒಂದು ತಿಂಗಳ ಕಾಲ ಹಾಗೆಯೇ ಇಟ್ಟಿರಲಾಗುತ್ತದೆ ಈ ಅವಧಿಯ ಬಳಿಕವೂ ಅದನ್ನು ಪಡೆಯುವುದಕ್ಕೆ ಯಾರೂ ಬಾರದೇ ಇದ್ದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಬ್ಯಾಂಕ್ ಕಾರ್ಡ್, ಚೆಕ್ ಪುಸ್ತಕಗಳು, ಪಾಸ್ ಬುಕ್ ಗಳನ್ನು 48 ಗಂಟೆಗಳ ಒಳಗಾಗಿ ಕಳೆದುಕೊಂಡವರಿಗೆ ತಲುಪಿಸಲಾಗುತ್ತದೆ. ಆಹಾರ ಪದಾರ್ಥಗಳನ್ನು 23 ಗಂಟೆಗಳ ಒಳಗಾಗಿ ವಿಲೇವಾರಿ ಮಾಡಲಾಗುತ್ತದೆ. ಪತ್ತೆಯಾದ ವಸ್ತುಗಳ ಬಗ್ಗೆ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ (https://www.bengaluruairport.com/travellers/passenger-services/lost-found.html) ಅಪ್ಲೋಡ್ ಮಾಡಲಾಗುತ್ತದೆ. 

ಮರೆತುಹೋದ ವಸ್ತುಗಳನ್ನು 24x7 ಸಹಾಯವಾಣಿ 080-66782257  ವಿದೇಶದವರಿಗೆ (918066782257) ಕ್ಕೆ ಕರೆ ಮಾಡಿ ಮರಳಿ ಪಡೆಯುವ ಪ್ರಕ್ರಿಯೆಯನ್ನು ಚಾಲೂಗೊಳಿಸಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com