ವಿಜಯಪುರ ಪಾಲಿಕೆ ಆಯುಕ್ತರ ಮೇಲೆ ಹಲ್ಲೆ: ಜೆಡಿಎಸ್ ಕಾರ್ಯಕರ್ತೆಯ ಪುತ್ರ ಸೇರಿ ಇಬ್ಬರ ಬಂಧನ

ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ಮಕ್ಕಳಕಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜೆಡಿಎಸ್ ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ಮಕ್ಕಳಕಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜೆಡಿಎಸ್ ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ನಗರದ ರಿಂಗ್‌ರೋಡ್ ಹತ್ತಿರದ ಬಳಮಕರ್ ರಸ್ತೆಯಲ್ಲಿ  ಸೋಮವಾರ ಈ  ಘಟನೆ ನಡೆದಿದ್ದು, ಆದರ್ಶ ನಗರ ಠಾಣೆಯಲ್ಲಿ ವಿಜಯ್ ಮಕ್ಕಳಕಿ ದೂರು ದಾಖಲಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರಾದ  ಸ್ನೇಹಲತಾ ಶೆಟ್ಟಿ ಪುತ್ರ ಸಮರ್ಥ್ ಸಿಂದಗಿ  ಮತ್ತು ಸೂರಿ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಉಳಿದ ನಾಲ್ಕು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ತಾವು ಬಳಕಮರ್ ಕನ್ವೆನ್ಸನ್ ಹಾಲ್  ಬಳಿ ಪರಿಶೀಲನೆ ನಡೆಸುತ್ತಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತಮ್ಮ ಹಿಸುಕಲು ಪ್ರಯತ್ನಿಸಿದರು. ಬೈಕ್ ನಲ್ಲಿ ಬಂದ ಅಪರಿಚಿತ ಯುವಕರು ತಮ್ಮ ವಾಹನವನ್ನು ನನ್ನ ಕಾರಿಗೆ ಡಿಕ್ಕಿ ಹೊಡೆದು ಮಾತಿನ ಚಕಮಕಿ ನಡೆಸಿದರು. ನನ್ನ ಸಿಬ್ಬಂದಿಯನ್ನು ನಿಂದಿಸಿದರು. ಕಾರಿನಲ್ಲಿದ್ದ ಇನ್ನಿಬ್ಬರು ನನ್ನ ಜೊತಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು.

ನಾನು ನಗರ ಪಾಲಿಕೆ ಆಯುಕ್ತನಾಗಿದ್ದು, ರಸ್ತೆಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಅವರಿಗೆ ಹೇಳಿದೆ, ಈ ವೇಳೆ ಕಾರಿನಲ್ಲಿದ್ದ ಸಮರ್ಥ್ ಸಿಂದಗಿಯ ಇಬ್ಬರು ಸ್ನೇಹಿತರು ನನ್ನ ಮೇಲೆ ಹಲ್ಲೆ ನಡೆಸಿದರು. ಆಗ ದಾರಿ ಹೋಕರೊಬ್ಬರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು, ನಾನು ಕರ್ತವ್ಯದಲ್ಲಿದ್ದಾಗ ಅವರು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನ ಮತ್ತು ನನ್ನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವಾಗ ಜೆಡಿಎಸ್ ಶಾಸಕ ದೇವಾನಂದ್ ಸಿಂಗ್ ಚೌಹಾಣ್ ಅವರ ಹೆಸರು ಕೇಳಿ ಬಂತು. ಹಲ್ಲೆಯ ನಂತರ ಕರೆ ಮಾಡಿದ ಆರೋಪಿಗಳ ಪೋಷಕರು ದೂರು ದಾಖಲಿಸಿದಂತೆ ನನ್ನ ಮೇಲೆ ಒತ್ತಡ ಹೇರಿದರು, ಆದರೂ ನಾನು ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com