ಭಾರತದ ಮೊದಲ ಸುರಂಗ ಅಕ್ವೇರಿಯಂ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭ

ಇಂದಿನಿಂದ, ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಅಥವಾ ಯಾರಾದರೂ ಸಂಬಂಧಿ, ಸ್ನೇಹಿತರ ಆಗಮನಕ್ಕೆ ಕಾಯುತ್ತಿರುವವರು ಅತ್ಯಾಕರ್ಷಕ ಮತ್ತು ವಿಶ್ರಾಂತಿ ಚಟುವಟಿಕೆ ನಡೆಸಬಹುದು. ಏಕೆಂದರೆ, ಭಾರತದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗದ ಜಲಚರಗಳ ಸಾಮ್ರಾಜ್ಯವನ್ನು ರೈಲ್ವೆ ನಿಲ್ದಾಣದ ಪ್ರವೇಶದ್ವಾರದ ಸಮೀಪ ಸ್ಥಾಪಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಇಂದಿನಿಂದ, ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಅಥವಾ ಯಾರಾದರೂ ಸಂಬಂಧಿ, ಸ್ನೇಹಿತರ ಆಗಮನಕ್ಕೆ ಕಾಯುತ್ತಿರುವವರು ಅತ್ಯಾಕರ್ಷಕ ಮತ್ತು ವಿಶ್ರಾಂತಿ ಚಟುವಟಿಕೆ ನಡೆಸಬಹುದು. ಏಕೆಂದರೆ, ಭಾರತದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗದ ಜಲಚರಗಳ ಸಾಮ್ರಾಜ್ಯವನ್ನು ರೈಲ್ವೆ ನಿಲ್ದಾಣದ ಪ್ರವೇಶದ್ವಾರದ ಸಮೀಪ ಸ್ಥಾಪಿಸಲಾಗಿದೆ.

ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮ (ಐಆರ್‌ಎಸ್‌ಡಿಸಿ) ಮತ್ತು ಎಚ್‌ಎನ್‌ಐ ಎಂಟರ್‌ಪ್ರೈಸಸ್ ಜಂಟಿಯಾಗಿ ಇದನ್ನು ಏಪ್ರಿಲ್ ನಲ್ಲಿ ಪ್ರಾರಂಭಿಸಲು ಯೋಜಿಸಲಾಗಿತ್ತು, ಆದರೆ ಕೋವಿಡ್ ಎರಡನೇ ಅಲೆ ಅದನ್ನು ವಿಳಂಬಗೊಳಿಸಿತು.

ಐಆರ್‌ಎಸ್‌ಡಿಸಿ ಸೌಲಭ್ಯ ನಿರ್ವಹಣಾ ವಿಭಾಗದ ಸಲಹೆಗಾರ ಎನ್ ರಘುರಾಮನ್ ಮಾತನಾಡಿ, "ಸುರಂಗ ಅಕ್ವೇರಿಯಂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಇದು ರೈಲ್ವೆ ನಿಲ್ದಾಣದಲ್ಲಿ ಶಾಶ್ವತವಾಗಿ ಸ್ಥಾಪನೆಯಾಗುತ್ತಿದ್ದು ಭಾರತದಲ್ಲೇ ಇದು ಮೊದಲನೆಯದಾಗಿದೆ. ಈ ಪರಿಕಲ್ಪನೆಯು ಸಾಮಾನ್ಯವಾಗಿ ವಿದೇಶದಲ್ಲಿ ಜನಪ್ರಿಯವಾಗಿದೆ ಮತ್ತು ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ”.

ಎಚ್‌ಎನ್‌ಐನ ವ್ಯವಸ್ಥಾಪಕ ಪಾಲುದಾರ ಸೈಯದ್ ಹಮೀದ್ ಹಸನ್, ಮೂರು ವರ್ಷಗಳಿಂದ ಮೀನುಗಾರಿಕೆ ಇಲಾಖೆಯ ಮತ್ಸ್ಯ ಮೇಳದಲ್ಲಿ ಭಾಗಿಯಾಗಿದ್ದಾರೆ ಮತ್ತು ಮೈಸೂರು ದಸರಾ ಸಮಯದಲ್ಲಿ ಇದೇ ರೀತಿಯ ಪ್ರದರ್ಶನ ನೀಡಿದ್ದರು, "ಇದು ಒಂದು ದೊಡ್ಡ ಪ್ರವಾಸಿ ಆಕರ್ಷಣೆಯಾಗಿದೆ ಮತ್ತು ಮೂರು ದಿನಗಳಲ್ಲಿ 2 ಲಕ್ಷ ಸಂದರ್ಶಕರನ್ನು ಕಂಡಿದೆ" ಎಂದರು.

ಬ್ಲ್ಯಾಕ್ ಡೈಮಂಡ್, ಸ್ಟಿಂಗ್ ರೇ ಮತ್ತು ಹೈ ಫಿನ್ ಶಾರ್ಕ್ಸ್ ಪ್ರಸ್ತುತ ಸುರಂಗ ಅಕ್ವೇರಿಯಂನಲ್ಲಿದ್ದರೆ, ಇಂಡೋನೇಷ್ಯಾ, ಬ್ಯಾಂಕಾಕ್, ತೈವಾನ್ ಮತ್ತು ಸಿಂಗಾಪುರದ ವಿಶೇಶ್ಗ ಮೀನುಗಳು ಶೀಘ್ರದಲ್ಲೇ ಬರಲಿವೆ. 12 ಅಡಿ ಉದ್ದದ ಪಲುಡೇರಿಯಂ, ಅಕ್ವೇರಿಯಂ, ಇದು ಭೂ ಸಸ್ಯಗಳು ಮತ್ತು ಜಲಸಸ್ಯಗಳು ಮತ್ತು ಜೀವಗಳನ್ನು ಹೊಂದಿದೆ ಮತ್ತು ಅಮೆಜಾನ್ ಮಳೆಕಾಡಿನ ಮಾದರಿಯಲ್ಲಿದೆ. "ನಮ್ಮಲ್ಲಿ ಐದು ಅಲಿಗೇಟರ್ ಗಾರ್ಸ್ (ಒಂದು ಮೀನು) ಇದೆ ಮತ್ತು ಮೇಲಿರುವ ಹಸಿರಿನ ಮೇಲಾವರಣವು ಸ್ಪಿಂಕ್ಲರ್ ಜತೆಗೆ ಮಂಜಿನ ವಾತಾವರಣವನ್ನು ಸೃಷ್ಟಿಸುತ್ತದೆ" ಎಂದು ಎಚ್‌ಎನ್‌ಐನಿಂದ ನಿಯಾಜ್ ಅಹ್ಮದ್ ಖುರೇಷಿ ಹೇಳಿದರು.

ಸಮುದ್ರ ಆಮೆ, ಏಡಿ , ಸ್ಟಾರ್ ಫಿಶ್, ಸೀಶೆಲ್, ಜೆಲ್ಲಿ ಫಿಶ್ ಮುಂತಾದ ಕಠಿಣಚರ್ಮಿಗಳ ಭಿತ್ತಿಚಿತ್ರಗಳು ಸೆಲ್ಫಿ ಪಾಯಿಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಸೀ ಹಾರ್ಸ್ ಸೆಲ್ಫಿ ಪಾಯಿಂಟ್ ಅನ್ನು ಮಕ್ಕಳಿಗಾಗಿ ಪ್ರತ್ಯೇಕವಾಗಿ ರಚಿಸಲಾಗಿದೆ.

ಅಕ್ವೇರಿಯಂಗೆ ಪ್ರವೇಶ ಶುಲ್ಕ 25 ರೂ. ಇದ್ದು ಸಮಯ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com