ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಷಯಾವಾರು ಅಂಕಗಳು: ಪಿಯು ಮಂಡಳಿ
ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷೆಯಿಲ್ಲ, ಹೀಗಿರುವಾಗ ವಿಷಯಾವಾರು ತಮಗೆ ಹೇಗೆ ಅಂಕಗಳನ್ನು ನೀಡುತ್ತಾರೆ ಎಂಬ ಆತಂಕ ಸಹಜವಾಗಿ ವಿದ್ಯಾರ್ಥಿಗಳಿಗಿರುತ್ತದೆ.
ವಿದ್ಯಾರ್ಥಿಗಳಿಗೆ ವಿಷಯಾವಾರು ಅಂಕಗಳನ್ನು ನೀಡಲಾಗುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂಕ ಯೋಜನೆಗೆ ಇಲಾಖೆ ಒಪ್ಪಿಗೆ ಸೂಚಿಸಿದೆ. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಮತ್ತು ಮನಃಶಾಸ್ತ್ರಗಳನ್ನು ಪಿಯುಸಿಯಲ್ಲಿ ಓದಿದ್ದರೆ ಪ್ರತಿ ವಿಷಯಕ್ಕೆ ಸಹ ಅಂಕಗಳನ್ನು ನೀಡಲಾಗುತ್ತದೆ ಎಂದರು.
ಈ ವಿಷಯಗಳನ್ನು 10ನೇ ತರಗತಿಯಲ್ಲಿ ಹೇಳಿಕೊಟ್ಟಿರದಿದ್ದರೂ ಕೂಡ ಪಿಯುಸಿಯಲ್ಲಿ ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡ ಸರಾಸರಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಹತ್ತನೇ ತರಗತಿಯ ಸರಾಸರಿ ಅಂಕ ಮತ್ತು ಮೊದಲ ವರ್ಷದ ಪಿಯುಸಿ ಅಂಕಗಳನ್ನು 45 ಮಾರ್ಕ್ ಗಳಿಗೆ ನೀಡಲಾಗುತ್ತದೆ. ದ್ವಿತೀಯ ಪಿಯುಸಿಯ ಇಂಟರ್ನಲ್ ಮಾರ್ಕ್ಸ್ ನ್ನು ಕೂಡ ಪರಿಗಣಿಸಲಾಗುತ್ತದೆ. ಹೀಗೆ ಎಲ್ಲಾ ತರಗತಿಗಳ ಅಂಕಗಳನ್ನು ಪರಿಗಣಿಸಿ ಸರಾಸರಿ ತೆಗೆದುಕೊಂಡು ಅಂತಿಮ ಅಂಕಗಳನ್ನು ನೀಡಲಾಗುತ್ತದೆ ಎಂದು ಪಿಯುಸಿ ಬೋರ್ಡ್ ನ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದ್ದು ಸುರಕ್ಷಿತ ವಾತಾವರಣ ಕಲ್ಪಿಸಲು ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಶೇಕಡಾ 90ರಷ್ಟು ಸಿಬ್ಬಂದಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ