ಎಸ್‌ಸಿ ಉದ್ಯಮಿಗಳು ಮುಖ್ಯವಾಹಿನಿಗೆ ಬರುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಗುರಿ: ನೂತನ ಸಚಿವ ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ, ಬಾರಾಯಣಸ್ವಾಮಿ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಎಸ್‌ಸಿ ಮತ್ತು ಒಬಿಸಿ ಪಂಗಡಗಳಿಂದ ಯುವ ಉದ್ಯಮಿಗಳು ಮೂಡಿಬರುವುದನ್ನು  ನೋಡುವುದು ಅವರ ಸಚಿವಾಲಯದ ಗುರಿ ಎಂದಿದ್ದಾರೆ.
ನಾರಾಯಣಸ್ವಾಮಿ
ನಾರಾಯಣಸ್ವಾಮಿ
Updated on

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ, ಬಾರಾಯಣಸ್ವಾಮಿ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಎಸ್‌ಸಿ ಮತ್ತು ಒಬಿಸಿ ಪಂಗಡಗಳಿಂದ ಯುವ ಉದ್ಯಮಿಗಳು ಮೂಡಿಬರುವುದನ್ನು  ನೋಡುವುದು ಅವರ ಸಚಿವಾಲಯದ ಗುರಿ ಎಂದಿದ್ದಾರೆ.

ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿದೆ-

ದೇಶದಲ್ಲಿ ಚರ್ಚಿಸಲಾಗುತ್ತಿರುವ ಎಸ್‌ಸಿ ಉದ್ಯಮಶೀಲತೆಯನ್ನು ನೀವು ಹೇಗೆ ವಿವರಿಸುತ್ತೀರಿ?

ಎಸ್‌ಸಿ ಉದ್ಯಮಶೀಲತೆಆರಂಭಿಕ ಕಾರ್ಯಕ್ರಮಕ್ಕೆ ನಮ್ಮ ಸಚಿವಾಲಯವು ಧನಸಹಾಯ ನೀಡುತ್ತದೆ. ಈ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ನಾವು ನಮ್ಮ ಸಚಿವಾಲಯ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಂಪನ್ಮೂಲಗಳನ್ನು ಒಗ್ಗೂಡಿಸಬೇಕು. ಎಸ್‌ಸಿ ಉದ್ಯಮಿಗಳೂ ಮುಖ್ಯವಾಹಿನಿಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ.

ಎಸ್‌ಸಿ ಮತ್ತು ಒಬಿಸಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತಂದ ವಿಧಾನ ನಿಮಗೆ ತೃಪ್ತಿ ತಂದಿದೆಯೆ?

ಈ ಕಾರ್ಯಕ್ರಮವನ್ನು ನಮ್ಮ ಸಚಿವಾಲಯವು ಕಾಲೇಜು,  ವಿವಿಧ ಸರ್ಕಾರಿ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸುತ್ತಿದೆ ಮತ್ತು ಇದು ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆ. ಇದು ಇಡೀ ದೇಶಕ್ಕೆ ವಿಸ್ತರಿಸಬೇಕಾಗಿದೆ.ಇದು ಯುವಕರಿಗೆ ಕೈಗೆಟುಕುವ ತರಬೇತಿಯನ್ನು ನೀಡುತ್ತದೆ. ಅದರ ಪರಿಣಾಮಕಾರಿ ಅನುಷ್ಠಾನದ ಮೂಲಕ, ಅನೇಕ ಯುವಕರು ಹೊಸ ಯುಗದ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ.

ಕರ್ನಾಟಕದ ನೀರಾವರಿ ಮತ್ತು ನೀರಿನ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಬೇಕು, ನೀವು ಇದನ್ನು ಹೇಗೆ ನಿಭಾಯಿಸಿತ್ತೀಇರಿ?

ರಾಜ್ಯದ ಹಿತಾಸಕ್ತಿ ಕಾಪಾಡಲಾಗಿ ಮಧ್ಯ ಕರ್ನಾಟಕ ಪ್ರದೇಶವನ್ನು ಹಸಿರಾಗಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಭದ್ರಾ ಮೇಲ್ದಂಡೆ  ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಎತ್ತಿನಹೊಳೆ, ಮೇಕೆದಾಟು ಮತ್ತು ಮಹಾದಾಯಿ ಇತರ ನೀರಿನ ಯೋಜನೆಗಳೊಂದಿಗೆ ಸಹ, ರಾಜ್ಯದ ಹಿತಾಸಕ್ತಿಗಳನ್ನು ನೋಡಲಾಗುವುದು. ಕರ್ನಾಟಕವು ನೀರಿನ ಕೊರತೆಯನ್ನು ಎದುರಿಸುವುದಿಲ್ಲ ಮತ್ತು ಅಂತರ್ಜಲ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇನೆ.

ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀವು ಯೋಜಿಸಿರುವ ಯೋಜನೆಗಳು ಯಾವುವು?

ನನ್ನ ಕ್ಷೇತ್ರಕ್ಕೆ ನನ್ನ ಆದ್ಯತೆಯೆಂದರೆ ಸರ್ಕಾರಿ ವೈದ್ಯಕೀಯ ಕಾಲೇಜು, ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗವನ್ನು ವೇಗಗೊಳಿಸುವುದು, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ, ಪ್ರಾದೇಶಿಕ ಕೈಗಾರಿಕೀಕರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com