ಕೊಡಗು ಜಿಲ್ಲೆಯಲ್ಲಿ ಶೂನ್ಯ ಲಸಿಕೆ ವ್ಯರ್ಥ: ಒಂದು ಡ್ರಾಪ್ ಕೂಡ ವೇಸ್ಟ್ ಮಾಡದೆ ಬಳಕೆ!

ಕೊಡಗು ಜಿಲ್ಲೆಯಲ್ಲಿ ಒಂದು ಡ್ರಾಪ್ ಲಸಿಕೆ ಕೂಡ ವ್ಯರ್ಥ ಮಾಡಿಲ್ಲ. ಲಸಿಕೆ ಸರಬರಾಜು ಆಗದ ಕಾರಣ, ಜಿಲ್ಲೆಯು ಗುರುವಾರ ಯಾವುದೇ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಚುಚ್ಚುಮದ್ದು ನೀಡಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ರಾಜ್ಯಾದ್ಯಂತ ಸುಮಾರು 1 ಲಕ್ಷ ಲಸಿಕೆಗಳು ವ್ಯರ್ಥವಾಗಿರುವ ಸುದ್ದಿಗಳ ಬೆನ್ನಲ್ಲೇ ಕೊಡಗು ಜಿಲ್ಲೆ ಅದಕ್ಕೆ ವಿರುದ್ಧವಾಗಿ ಮಾದರಿಯಾಗಿದೆ.

ಜಿಲ್ಲೆಯಲ್ಲಿ ಒಂದು ಡ್ರಾಪ್ ಲಸಿಕೆ ಕೂಡ ವ್ಯರ್ಥ ಮಾಡಿಲ್ಲ. ಲಸಿಕೆ ಸರಬರಾಜು ಆಗದ ಕಾರಣ, ಜಿಲ್ಲೆಯು ಗುರುವಾರ ಯಾವುದೇ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಚುಚ್ಚುಮದ್ದು ನೀಡಿಲ್ಲ.

ಜಿಲ್ಲಾ ಆರೋಗ್ಯ ಇಲಾಖೆಯು 9,441 ಹೆಚ್ಚುವರಿ ಡೋಸ್ ಕೋವಿಶೀಲ್ಡ್ ಅನ್ನು (ಬುಧವಾರದವರೆಗೆ) ನೀಡಿದೆ. ಕೋವಿ ಶೀಲ್ಡ್ ನ ಹೆಚ್ಚುವರಿ ಪ್ರಮಾಣಗಳಲ್ಲಿ ಶೇಕಡಾ 4.5 ರಷ್ಟು ದಾಖಲಿಸಿದೆ. ಆದಾಗ್ಯೂ, ಇದು ಕೋವಾಕ್ಸಿನ್ ಲಸಿಕೆಯನ್ನು  0.9 ಶೇಕಡಾ ವ್ಯರ್ಥವನ್ನು ದಾಖಲಿಸಿದೆ.

ಲಸಿಕಾ ಕೇಂದ್ರದಲ್ಲಿ ವಯಲ್‌ನಲ್ಲಿರುವ 10 ಡೋಸ್‌ ಪಡೆಯಲು 10 ಮಂದಿ ಫಲಾನುಭವಿಗಳು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡೇ ವಯಲ್‌ ತೆರೆದು ಲಸಿಕೆ ನೀಡಲಾಗಿದೆ. ವಯಲ್‌ ತೆರೆದ 4 ಗಂಟೆ ಒಳಗೆ ಖಾಲಿ ಮಾಡಬೇಕು. ಇಲ್ಲದಿದ್ದರೆ ಉಳಿದ ಡೋಸ್‌ಗಳು ವ್ಯರ್ಥವಾಗುತ್ತದೆ. ಆ ರೀತಿ ಆಗದಂತೆ ಲಸಿಕಾ ಸಿಬ್ಬಂದಿ ಎಚ್ಚರಿಕೆ ವಹಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ನೆಗೆಟಿವ್‌ ವೇಸ್ಟೇಜ್‌ ದಾಖಲಾಗಿದೆ.

ಅಂಕಿಅಂಶಗಳ ಪ್ರಕಾರ, ಕೊಡಗಿನಲ್ಲಿ ಒಟ್ಟು 2,08,901 ನಿವಾಸಿಗಳಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಆದಾಗ್ಯೂ, ಈ ಜನರಿಗೆ 19,946 ಬಾಟಲುಗಳನ್ನು ಬಳಸಿ ಲಸಿಕೆ ನೀಡಲಾಗಿದೆ, ಅದು 1,99,460 ಪ್ರಮಾಣ ಹೊಂದಿರುತ್ತದೆ.ಕಂಪನಿಯು ಹೆಚ್ಚುವರಿ 2 ಎಂಎಲ್ ಲಸಿಕೆಯೊಂದಿಗೆ ಕೆಲವು ಬಾಟಲುಗಳನ್ನು ತುಂಬುತ್ತದೆ ಮತ್ತು ನಾವು ಈ ಹೆಚ್ಚುವರಿ ಪ್ರಮಾಣವನ್ನು ಬಳಸಿದ್ದೇವೆ” ಎಂದು ಸಿಬ್ಬಂದಿ ಹೇಳಿದ್ದಾರೆ.

ಕೋವಾಕ್ಸಿನ್ ಬಾಟಲುಗಳ ವ್ಯರ್ಥವು ಶೇಕಡಾ 0.9 ರಷ್ಟಿದೆ, ಕೋವಾಕ್ಸಿನ್‌ನ ಅನೇಕ 20 ಎಂಎಲ್ ಬಾಟಲುಗಳು 20 ಕ್ಕಿಂತ ಕಡಿಮೆ ಪ್ರಮಾಣವನ್ನು ಹೊಂದಿವೆ ಎಂದು ಆರೋಗ್ಯ ಸಿಬ್ಬಂದಿ ದೃಢಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com