ಕಳಚಿದ 'ಕಾವೇರಿ' ಹೋರಾಟದ ಕೊಂಡಿ: ಸಾವಿರಾರು ಜನರಿಂದ ಅಶ್ರುತರ್ಪಣ; ಸರ್ಕಾರಿ ಗೌರವದೊಂದಿಗೆ ಜಿ.ಮಾದೇಗೌಡ ಅಂತಿಮ ವಿಧಿ-ವಿಧಾನ

ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದ ಹಿರಿಯ ರೈತ ಹೋರಾಟಗಾರ ಜಿ.ಮಾದೇಗೌಡ ಅವರ ಅಂತಿಮ ವಿಧಿ-ವಿಧಾನ ಸಕಲ ಸರ್ಕಾರಿ ಗೌರವಗಳೊಂದಿಗೆ ಕೆಎಂ ದೊಡ್ಡಿಯಲ್ಲಿ ನೆರವೇರಿತು.
ಮಾದೇಗೌಡರ ಅಂತಿಮ ದರ್ಶನ
ಮಾದೇಗೌಡರ ಅಂತಿಮ ದರ್ಶನ
Updated on

ಮೈಸೂರು: ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದ ಹಿರಿಯ ರೈತ ಹೋರಾಟಗಾರ ಜಿ.ಮಾದೇಗೌಡ ಅವರ ಅಂತಿಮ ವಿಧಿ-ವಿಧಾನ ಸಕಲ ಸರ್ಕಾರಿ ಗೌರವಗಳೊಂದಿಗೆ ಕೆಎಂ ದೊಡ್ಡಿಯಲ್ಲಿ ನೆರವೇರಿತು.

ಮಂಡ್ಯದ ಬಂಡೇಗೌಡ ಲೇಔಟ್ ನಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಳೆಯನ್ನು ಲೆಕ್ಕಿಸದೇ ರೈತರು ಸೇರಿದಂತೆ ಸಾವಿರಾರು ಮಂದಿ ಹಿರಿ ಮುತ್ಸದ್ದಿಯ ಅಂತಿಮ ದರ್ಶನ ಪಡೆದರು. 

ತಮಿಳುನಾಡಿನ ಜೊತೆ ನಡೆದ ಕಾವೇರಿ ಹೋರಾಟದಲ್ಲಿ ಮಾದೇಗೌಡರು ರೈತರ ಪರವಾಗಿ ನಿಂತಿದ್ದರು.  ಗೌಡರ ಆಪ್ತರು ಸೇರಿದಂತೆ ಎಲ್ಲಾ ವರ್ಗದ ಜನರು  ಮಂಡ್ಯದ ಗಾಂಧಿ ಭವನದಲ್ಲಿ ಮಾದೇಗೌಡ ಅವರಿಕಗೆ ಹಲವು ಗಣ್ಯರು  ಗೌರವ ಸಲ್ಲಿಸಿದರು. ಮಂಡ್ಯ ಸಂಸದ ಸುಮಲತಾ ಮತ್ತು ಹಲವಾರು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. 

ಕೆಎಂ ದೊಡ್ಡಿಯ ಹನುಮಂತನಗರದಿಂದ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಿ ಮಂಡ್ಯ ಮತ್ತು ಮದ್ದೂರಿನ ಹೆದ್ದಾರಿಯಲ್ಲಿ ಸಾಗಿತು. ಹಲವು ರೈತರು ತಮ್ಮ ನೆಚ್ಚಿನ ನಾಯಕರಿಗೆ ಅಶ್ರುತರ್ಪಣ ಸಲ್ಲಿಸಿದರು.  

ಭಾರತಿ ಎಜುಕೇಷನ್ ಸೊಸೈಟಿ ಸೇರಿದಂತೆ 27 ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳನ್ನು ಗೌಡರು ಸ್ಥಾಪಿಸಿದ್ದರು. ಮದ್ದೂರು ತಾಲ್ಲೂಕಿನ ಯುವಕರಿಗೆ ಉದ್ಯೋಗ ಒದಗಿಸುವ ಸಲುವಾಗಿ ಭಾರತಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದರ. ಮಂಡ್ಯದಲ್ಲಿ ಗಾಂಧಿ ಭವನವನ್ನು ನಿರ್ಮಿಸಿದರು ಮತ್ತು ಉಚಿತ ಗ್ರಂಥಾಲಯವನ್ನು ತೆರೆದರು ಮತ್ತು ಗ್ರಾಮೀಣ ಪ್ರತಿಭೆಗಳನ್ನು ಉತ್ತೇಜಿಸುವ ಚಟುವಟಿಕೆ ಕೈಗೊಂಡಿದ್ದರು.

ಮಾದೇಗೌಡರ ಶವವನ್ನು ತಮ್ಮ ಗ್ರಾಮಕ್ಕೆ ತರುವಂತೆ ಒತ್ತಾಯಿಸಿ ಅವರ ಸ್ಥಳೀಯ ಗ್ರಾಮವಾದ ಗುರುದೇವನಹಳ್ಳಿ ಗ್ರಾಮಸ್ಥರು ರಸ್ತೆಯನ್ನು ನಿರ್ಬಂಧಿಸಿದರು. ನಂತರ ಕುಟುಂಬಸ್ಥರು ಗೌಡರ ದೇಹವನ್ನು ಹಳ್ಳಿಗೆ ತೆಗೆದುಕೊಂಡು ಹೋಗಿ ದರ್ಶನಕ್ಕೆ ಇರಿಸಿದರು. ನಂತರ ಕೆಎಂ ದೊಡ್ಡಿಗೆ ಶವ ತರಲಾಯಿತು.

ರಾಜ್ಯ ಸರ್ಕಾರದ ಪರವಾಗಿ ಡಿಸಿಎಂ ಡಾ.ಎನ್.ಎನ್.ಅಶ್ವತ್ ನಾರಾಯಣ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಉಪಸ್ಥಿತರಿದ್ದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಕಾರಿ ಕಾರ್ಯಾಧ್ಯಕ್ಷ  ಆರ್ .ಧ್ರುವ ನಾರಾಯಣ, ಎಚ್.ಡಿ ರೇವಣ್ಣ,ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ಎಚ್.ಡಿ.ಚೌಡಯ್ಯ ಮತ್ತು ವಾಸು ಮತ್ತು ಇತರರು ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com