ಹುಬ್ಬಳ್ಳಿ-ಧಾರವಾಡದಲ್ಲಿ ವಾಯು ಮಾಲಿನ್ಯ ತಡೆಗೆ ಮಿಯಾವಾಕಿ ಮಾದರಿಯ 5 ಅರಣ್ಯ ಅಭಿವೃದ್ಧಿ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದಕ್ಕಾಗಿ ಮಿಯಾವಾಕಿ ಅರಣ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 
ಹುಬ್ಬಳ್ಳಿಯಲ್ಲಿರುವ ತೋಳನಕೆರೆ (ಸಂಗ್ರಹ ಚಿತ್ರ)
ಹುಬ್ಬಳ್ಳಿಯಲ್ಲಿರುವ ತೋಳನಕೆರೆ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದಕ್ಕಾಗಿ ಮಿಯಾವಾಕಿ ಅರಣ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಿಯಾವಾಕಿ ಅರಣ್ಯದ ಮಾದರಿಯಲ್ಲೇ ನಗರ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಅರಣ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇತರ ಅರಣ್ಯಗಳಿಗೆ ಹೋಲಿಸಿದಲ್ಲಿ ಇಲ್ಲಿ ಶೇ.30 ರಷ್ಟು ಹೆಚ್ಚು ಮರಗಳಿರುತ್ತವೆ. 

ಇತರ ಅರಣ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಈ ಅರಣ್ಯದಿಂದ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಶೇ.30 ರಷ್ಟು ಕಡಿಮೆಯಾಗಲಿದೆ. ಕಡಿಮೆ ಜಾಗದಲ್ಲಿ ಗಿಡಗಳನ್ನು ಒತ್ತು ಒತ್ತಾಗಿ ಬೆಳೆಸಿ ದಟ್ಟ ಅರಣ್ಯ ಮಾಡುವ ವಿಧಾನವನ್ನು ಜಪಾನಿನ ಮಿಯಾವಾಕಿ ಎನ್ನುತ್ತಾರೆ. ದಶಕಗಳ ಹಿಂದೆ ಪ್ರಾರಂಭಿಸಿದ ಈ ಮಾದರಿಯ ವನಗಳು ಹೆಚ್ಚು ಖಾಲಿ ಜಾಗ ಸಿಗದಿರುವ ನಗರ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.

ಅರ್ಧ ಎಕರೆ ಪ್ರದೇಶದಲ್ಲಿ ದಟ್ಟ ಅರಣ್ಯವನ್ನು 25,000 ಸಸಿಗಳೊಂದಿಗೆ ಮಿಯಾವಾಕಿ ವಿಧಾನದಲ್ಲಿ ಬೆಳೆಸಬಹುದಾಗಿದೆ.  ಇತರ ಅರಣ್ಯಗಳಿಗಿಂತಲೂ ಈ ಮಾದರಿಯ ಅರಣ್ಯಗಳು ಎರಡುವರೆ ಪಟ್ಟು ಹೆಚ್ಚಿನ ಆಮ್ಲಜನಕವನ್ನು ಉತ್ಪಾದಿಸುತ್ತದೆ. 

ಹುಬ್ಬಳ್ಳಿ-ಧಾರವಾಡ ಪುರಸಭೆ ಕಾರ್ಪೊರೇಷನ್ (ಹೆಚ್ ಡಿಎಂಸಿ) ಧಾರವಾಡದಲ್ಲಿ ಮೂರು ನಗರಪ್ರದೇಶಗಳಲ್ಲಿ ಅರಣ್ಯವನ್ನು ಅಭಿವೃದ್ಧಿಪಡಿಸಲಿದ್ದು, ಎರಡು ಅರಣ್ಯಗಳನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿಪಡಿಸಲಿದೆ. 

ಧಾರವಾಡದಲ್ಲಿ ಗಾಂಧಿ ನಗರದ ಶಾಂಭವಿ ಕಾಲೋನಿಯಲ್ಲಿ ಹಾಗೂ ರಾಘವೇಂದ್ರ ಕಾಲೋನಿ, ಹಾಗೂ ದೊಡ್ಡನಾಯಕನಕೊಪ್ಪ ಪ್ರದೇಶಗಳಲ್ಲಿ ಈ ಅರಣ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿ ತೋಳನಕೆರೆ ಹಾಗೂ ಮತ್ತೊಂದು ಪ್ರದೇಶದಲ್ಲಿ ಅರಣ್ಯ ಪ್ರದೇಶಕ್ಕೆ ಜಾಗವನ್ನು ಗುರುತಿಸಲಾಗಿದೆ. 

ಈ ಉದ್ದೇಶಕ್ಕಾಗಿ ಒಂದು ಎಕರೆ ಪ್ರದೇಶಕ್ಕಿಂತಲೂ ಹೆಚ್ಚಿನ ಜಾಗವನ್ನು ಗುರುತಿಸಲಾಗಿದೆ. ಈಗಿರುವ ಅರಣ್ಯದ ಜೊತೆಗೆ 20 ಗುಂಟೆಗಳ ಪ್ರದೇಶದಲ್ಲಿ ಹೊಸ ಅರಣ್ಯ ಅಭಿವೃದ್ಧಿಯಾಗಲಿದೆ. ಉಳಿದ ಪ್ರದೇಶದಲ್ಲಿ ಮಕ್ಕಳ ವಾಕಿಂಗ್ ಹಾಗೂ ಆಟದ ಪ್ರದೇಶಕ್ಕಾಗಿ ಅರಣ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. 

ಹುಬ್ಬಳ್ಳಿಯ ತೋಳನಕೆರೆಯಲ್ಲಿ ಮಿಯಾವಾಕಿ ಅರಣ್ಯವನ್ನು ಎರಡು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಹಾಗೂ 1.5 ಎಕ ಪ್ರದೇಶದಲ್ಲಿ ಗಿಡಮೂಲಿಕೆ ಸಸ್ಯಗಳ ಉದ್ಯಾನವನ 2.3 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಹೆಚ್ ಡಿಎಂ ಸಿ ಆಯುಕ್ತ ಸುರೇಶ್ ಇಟ್ನಾಳ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com