ಸೆಪ್ಟಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ: ಕಾದು ನೋಡಲು ಶಿಶು ವೈದ್ಯರ ಸಲಹೆ

ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದ ಶಾಲೆಗಳು ಪುನಃ ತೆರೆಯಲು ತಯಾರಿ ನಡೆಸುತ್ತಿದ್ದರೆ ಮತ್ತು ಸೆಪ್ಟೆಂಬರ್ ವೇಳೆಗೆ ಭಾರತವು ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದ ಶಾಲೆಗಳು ಪುನಃ ತೆರೆಯಲು ತಯಾರಿ ನಡೆಸುತ್ತಿದ್ದರೆ ಮತ್ತು ಸೆಪ್ಟೆಂಬರ್ ವೇಳೆಗೆ ಭಾರತವು ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಆದರೆ ಅನೇಕ ಶಿಶುವೈದ್ಯರು ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರು ಆತುರ ಪಡಬಾರದು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಪೋಷಕರು ಸುರಕ್ಷಿತ, ಉತ್ತಮ, ಪರಿಣಾಮಕಾರಿ ಲಸಿಕೆಗಾಗಿ ಕಾಯಬೇಕು ಎಂದು ಮಣಿಪಾಲ್ ಆಸ್ಪತ್ರೆಗಳ ಪೀಡಿಯಾಟ್ರಿಕ್ ಕ್ಲಸ್ಟರ್ ಮುಖ್ಯಸ್ಥ ಡಾ.ಜಗದೀಶ್ ಚಿನಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಗದೀಶ್ ಚಿನ್ನಪ್ಪ ಅವರು ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ನೇತೃತ್ವದ 13 ಸದಸ್ಯರ ಉನ್ನತ ಮಟ್ಟದ ಸಮಿತಿಯ ಭಾಗವಾಗಿದ್ದು ಕೋವಿಡ್ -19 ಸೋಂಕಿನ ಮೂರನೇ ಅಲೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೆ.

ಮಕ್ಕಳಿಗೆ ಲಸಿಕೆ ಹಾಕುವ ಮಟ್ಟಿಗೆ, ವೈದ್ಯಕೀಯ ರಂಗದಲ್ಲಿ ಎರಡು ವಿಭಿನ್ನ ಆಲೋಚನಾ ಮಾರ್ಗಗಳಿವೆ. ಲಸಿಕೆಗಳನ್ನು ತೆಗೆದುಕೊಳ್ಳುವುದು ಮೂರು ಕಾರಣಗಳಿಗಾಗಿ ಮುಖ್ಯವಾಗಿದೆ ಎಂದು ಡಾ.ಜಗದೀಶ್ ಹೇಳುತ್ತಾರೆ, ರೋಗದ ಮಹತ್ವ, ಮಕ್ಕಳು ವಯಸ್ಸಾದವರಿಗೆ ಹರಡಬಹುದು ಮತ್ತು ನೀವು ಹೆಚ್ಚು ಸಮಯ ಕಾಯಬೇಕು ಎಂದು ಹೇಳಿದ್ದಾರೆ.

ಮಕ್ಕಳ ಮೇಲೆ ಅಸಮರ್ಪಕ ಪ್ರಯೋಗ ಒಳ್ಳೆಯದಲ್ಲ, ಸಣ್ಣ ಮಕ್ಕಳಿಗೆ ಯಾವ ಲಸಿಕೆ ಅಪಾಯಕಾರಿಯಲ್ಲ ಎಂಬುದು ಇನ್ನೂ ನಮಗೆ ತಿಳಿದಿಲ್ಲ ಎಂಬುದು ಜಗದೀಶ್ ಅವರ ವಾದ.

ಭಾರತೀಯ ಔಷಧಿ ನಿಯಂತ್ರಣ ಮಂಡಳಿಯೂ ಮಕ್ಕಳಿಗೆ ಯಾವುದೇ ಲಸಿಕೆಯನ್ನು ಅನುಮೋದಿಸಿಲ್ಲ, ಆದರೆ ಗುಲೇರಿಯಾ ಅವರು, ಜೈಡಸ್ ಕ್ಯಾಡಿಲ್ಲಾ ಮತ್ತು ಫೀಜರ್ ಲಸಿಕೆ ನೀಡಬಹುದು ಎಂದು ಸಲಹೆ ನೀಡಿದ್ದಾರೆ, ಆದರೆ ಈ ಲಸಿಕೆಗಳನ್ನು ಭಾರತದಲ್ಲಿ ವಯಸ್ಕರಿಗೆ ನೀಡಲು ಅನುಮೋದನೆ ದೊರೆತಿಲ್ಲ. 

ಸೆಪ್ಟಂಬರ್ ವೇಳೆಗೆ ಲಸಿಕೆಗ ಅನುಮೋದನೆ ದೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ, ಆದರೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಸಾರ್ವಜನಿಕ ನೀತಿ ಮತ್ತು ಆರೋಗ್ಯ ವ್ಯವಸ್ಥೆಗಳ ತಜ್ಞ ಮತ್ತು‘ ಟಿಲ್ ವಿ ವಿನ್, ಇಂಡಿಯಾಸ್ ಫೈಟ್ ಎಗೇನ್ಸ್ಟ್ ದಿ ಕೋವಿಡ್ -19 ಸಾಂಕ್ರಾಮಿಕ  ಪುಸ್ತಕದ ಸಹ-ಲೇಖಕ ಡಾ. ಚಂದ್ರಕಾಂತ್ ಲಹರಿಯಾ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

ಶಾಲೆಗಳು ಪ್ರಾರಂಭವಾದರೂ ಸಹ, ಆನ್‌ಲೈನ್ ಮೋಡ್ ಅನ್ನು ಮುಂದುವರಿಸಬೇಕೆ ಅಥವಾ ಕೆಲವು ಆಫ್‌ಲೈನ್ ತರಗತಿಗಳಿಗೆ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಕೆ ಎಂಬುದು ಪೋಷಕರ ಆಯ್ಕೆಯಾಗಿದೆ ಎಂದು ಅವರು ವಿವರಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com