ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿಗೆ ಮೂತ್ರ ಸೇವನೆಗೆ ಒತ್ತಾಯ: ಸಬ್ ಇನ್ಸ್‌ಪೆಕ್ಟರ್‌ಗೆ ಜಾಮೀನು ನಕಾರ

ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಿಗದಿತ ಜಾತಿ ಸಮುದಾಯಕ್ಕೆ ಸೇರಿದ 22 ವರ್ಷದ ಯುವಕನಿಗೆ ಮೂತ್ರವನ್ನು ಸೇವಿಸಲು ಒತ್ತಾಯಿಸಿದ್ದ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ  ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.
ಪೋಲೀಸ್ ಅಧಿಕಾರಿ ಅರ್ಜುನ್ ಹಾಗೂ ಸಂತ್ರಸ್ತ ಯುವಕ
ಪೋಲೀಸ್ ಅಧಿಕಾರಿ ಅರ್ಜುನ್ ಹಾಗೂ ಸಂತ್ರಸ್ತ ಯುವಕ
Updated on

ಚಿಕ್ಕಮಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದಾಗ ನಿಗದಿತ ಜಾತಿ ಸಮುದಾಯಕ್ಕೆ ಸೇರಿದ 22 ವರ್ಷದ ಯುವಕನಿಗೆ ಮೂತ್ರವನ್ನು ಸೇವಿಸಲು ಒತ್ತಾಯಿಸಿದ್ದ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗೆ  ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.

ಗೋಣಿಬೀಡು ಪೊಲೀಸ್ ಠಾಣೆಯ ಕೆ ಅರ್ಜುನ್ ಹೊರಕೇರಿ ಅವರಿಗೆ ನ್ಯಾಯಾಲಯ ನಿರೀಕ್ಷನಾ ಜಾಮೀನು ನಿರಾಕರಿಸಿದೆ. ಈ ವೇಳೆ ಈ ಘಟನೆಯು "ಅತ್ಯಂತ ಘೋರ" ಎಂದು ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

"ಘಟನೆ ಅತ್ಯಂತ ಘೋರವಾಗಿದೆ. ಸಂತ್ರಸ್ತನಿಗೆ ಮೂತ್ರ ಸೇವನೆ ಮಾಡಿಸಲಾಗಿಲ್ಲ ಆದರೆ ಮೂತ್ರವನ್ನು ನೆಲದಿಂದ ನೆಕ್ಕುವಂತೆ ಆದೇಶಿಸಲಾಗಿದೆ.ಇಂತಹ ದೌರ್ಜನ್ಯವು ಯಾವುದೇ ವ್ಯಕ್ತಿಯ ವೈಯಕ್ತಿಕ ಘನತೆಯನ್ನು ಕುಂದಿಸುತ್ತದೆ.ದೆ. ವೈಯಕ್ತಿಕ ಘನತೆ ಒಬ್ಬರ ಆಂತರಿಕ ಭಾವನೆಗಳು ಮತ್ತು ಸ್ವಯಂ ಪ್ರೀತಿ. ಆರೈಕೆ , ಸ್ವಾಭಿಮಾನದ ಪ್ರತೀಕವಾಗಿದೆ."

ದೂರು ದಾಖಲಿಸುವಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ಅರ್ಜುನ್ ಹೊರಕೇರಿ ಸಲ್ಲಿಸಿದ ದಾಖಲೆಗಳನ್ನು ನ್ಯಾಯಾಲಯ ತಿರಸ್ಕರಿಸಿತು. "ಈ ರೀತಿಯ ದೌರ್ಜನ್ಯವನ್ನು ಅನುಭವಿಸಿದ ಆಪಾದಿತವ್ಯಕ್ತಿಯು ಸಂಪೂರ್ಣ ಆಘಾತಕ್ಕೆ ಒಳಗಾಗುತ್ತಾನೆ ಮತ್ತು ಖಂಡಿತವಾಗಿಯೂ ಈ ಘಟನೆಯನ್ನು ಯಾವುದೇ ವ್ಯಕ್ತಿಗೆ ಬಹಿರಂಗವಾಗಿ ಹೇಳುವ ಅಥವಾ ಅದಕ್ಕೆ ಪರಿಹಾರ ಪಡೆಯುವ ಸ್ಥಿತಿಯಲ್ಲಿ ಇರುವುದಿಲ್ಲ" ಎಂದು ಕೋರ್ಟ್ ಹೇಳಿದೆ.

ಘಟನೆಗಳ ಬಗ್ಗೆ ನ್ಯಾಯಾಧೀಶ ಕೆ.ಎಲ್.ಅಶೋಕ್ ಆಘಾತ ವ್ಯಕತಪಡಿಸಿದ್ದಾರೆ. "ಪೊಲೀಸ್ ಅಧಿಕಾರಿಯೊಬ್ಬರು ಈ ರೀತಿ ಕಾರ್ಯನಿರ್ವಹಿಸುವ ನಿರೀಕ್ಷೆಯಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕ ನಂಬಿಕೆಯನ್ನು ಹುಸಿಗೊಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅಂತಹವರು ಅವರು ನಿರಪರಾಧಿಗಳನ್ನು ರಕ್ಷಿಸುವ ಸಾಧ್ಯತೆ ಇದೆ" ಎಂದರು.

ಪ್ರಕರಣದಲ್ಲಿ ಸಂಕಷ್ಟಕ್ಕೊಳಗಾಗಿದ್ದ .ಕೆ.ಎಲ್.ಪುನಿತ್ ಅವರು ಪೋಲೀಸ್ ಅಧಿಕಾರಿ ಅರ್ಜುನ್  ವಿರುದ್ಧ ದೂರು ದಾಖಲಿಸಿದ್ದರು,

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com