ವಂಚನೆ ಪ್ರಕರಣ: ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಬಂಧನ

ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂ ಹಣ ಬರುತ್ತದೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆರೋಪದಡಿ ಕಂಪನಿ‌ ನಿರ್ದೇಶಕ ಓರ್ವನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ
ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ

ಬೆಂಗಳೂರು: ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂ ಹಣ ಬರುತ್ತದೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆರೋಪದಡಿ ಕಂಪನಿ‌ ನಿರ್ದೇಶಕ ಓರ್ವನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ ಬಂಧಿತ ಆರೋಪಿ.

ಬಂಧಿತ ಆರೋಪಿ, ಬಸವೇಶ್ವರನಗರದಲ್ಲಿ ಕಚೇರಿ ಹೊಂದಿದ್ದು, ಸಾರ್ವಜನಿಕರಿಗೆ ಸದಸ್ಯತ್ವ ನೀಡಿ, ಬೇರೆಯವರನ್ನೂ ಚೈನ್ ಲಿಂಕ್ ರೀತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಕಮಿಷನ್ ನೀಡುವುದಾಗಿಯೂ ಹೇಳುತ್ತಿದ್ದನು. ಜೆಎಎ ಲೈಫ್ ಸ್ಟೈಲ್ ಹೆಸರಿನ ಜಾಲತಾಣದ ಮೂಲಕ ಆರೋಪಿ‌ ವಹಿವಾಟು ನಡೆಸುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಮೊದಲು ಕಂಪನಿ ಸದಸ್ಯತ್ವಕ್ಕೆಂದು 1,109 ರೂ ಪಡೆಯುತ್ತಿದ್ದ. ಕೇವಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ 240 ರೂ ಸಿಗುತ್ತದೆ. ಇದೇ ರೀತಿ ದಿನಾಲೂ ತಾವು ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು 7,20 0ರಿಂದ 86,400ರವರೆಗೂ ಹಣ ಸಂಪಾದಿಸಹುದು. ಅದೇ ರೀತಿ ಒಬ್ಬ ಸದಸ್ಯ 10 ಜನರನ್ನು ಸದ್ಯಸ್ಯರನ್ನಾಗಿ ಸೇರಿಸಬೇಕು ಎಂದು ಮೋಸ ಮಾಡುತ್ತಿದ್ದ. ಇನ್ನು ಒಬ್ಬರನ್ನು ಸದ್ಯಸರನ್ನಾಗಿ ಮಾಡಿಸಿದರೆ 4400 ರೂ. ಲಾಭ ಸಿಗುತ್ತದೆ. 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ಹಣ ಗಳಿಸಬಹುದು ಎಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮುಖಾಂತರ ವಂಚಿಸುತ್ತಿದ್ದ. ಹಣವೂ ಆನ್‌ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದಾಗಿ ಹೇಳುತ್ತಿದ್ದ. ಆತನ ಮಾತು ನಂಬಿ ಸುಮಾರು 4 ಲಕ್ಷ ಮಂದಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಆರೋಪಿ ಸದಸ್ಯರಿಗೆ ಯಾವುದೇ ಹಣ ನೀಡರಲಿಲ್ಲ. ಅಲ್ಲದೇ, ಈ ಕುರಿತು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ನೊಂದ ಸದಸ್ಯರು ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com