ಹಾಸನ: ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ತರಗತಿ ನಡೆಸಿ ಮೆಚ್ಚುಗೆ ಗಳಿಸಿದ ಸರ್ಕಾರಿ ಶಿಕ್ಷಕಿ

ವಿದ್ಯಾರ್ಥಿಗಳನ್ನು ಆಯಾ ಪಠ್ಯಕ್ರಮವನ್ನು ಮರೆಯದಂತಿಡಲು ನೆರವಾಗುವ ಪ್ರಯತ್ನದಲ್ಲಿ, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸಲು ಯೂಟ್ಯೂಬ್ ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸೆಷನ್‌ಗಳನ್ನು ಆಸಕ್ತಿದಾಯಕವಾಗಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹಾಸನ: ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಾರಂಭವಾಗದ ಕಾರಣ ವಿದ್ಯಾರ್ಥಿಗಳನ್ನು ಆಯಾ ಪಠ್ಯಕ್ರಮವನ್ನು ಮರೆಯದಂತಿಡಲು ನೆರವಾಗುವ ಪ್ರಯತ್ನದಲ್ಲಿ, ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್ ಕಲಿಕೆಯನ್ನು ಹೆಚ್ಚಿಸಲು ಯೂಟ್ಯೂಬ್ ಅನ್ನು ಬಳಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸೆಷನ್‌ಗಳನ್ನು ಆಸಕ್ತಿದಾಯಕವಾಗಿಸುತ್ತಿದ್ದಾರೆ.

ಚೆನ್ನರಾಯಪಟ್ಟಣದ ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡುವ ಲಕ್ಷ್ಮಿ, ಯೂಟ್ಯೂಬ್‌ನಲ್ಲಿ 4 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಪೋಷಕರು ಅವರ  ವೀಡಿಯೊ ಸೆಷನ್‌ಗಳನ್ನು ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಕಾರಣ ಮೆಚ್ಚಿದ್ದಾರೆ.

ಕ್ಷೇತ್ರ ಶಿಕ್ಷಣ ಅಧಿಕಾರಿ ಎನ್ ಜೆ ಸೋಮನಾಥ್ ಅವರು ಲಕ್ಷ್ಮಿಯ ಬದ್ಧತೆ ಮತ್ತು ನವೀನ ವಿಧಾನವನ್ನು ಶ್ಲಾಘಿಸಿದ್ದಾರೆ. "ವಿದ್ಯಾರ್ಥಿಗಳು ತರಗತಿಗಳಿಂದ ದೂರವಿದ್ದರೆ ಆಸಕ್ತಿ ಕಳೆದುಕೊಳ್ಳಬಹುದು ತರಗತಿ ಮುಗಿದ ಬಳಿಕ ಸಹ ಅವರು ಸಂದೇಹಗಳನ್ನು ಕೇಳುತ್ತಿದ್ದಾರೆ ಎಂದರೆ ಅವರು ಪಾಠದತ್ತ ಗಮನ ಹರಿಸುತ್ತಿದ್ದಾರೆ” ಎಂದು ಲಕ್ಷ್ಮಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com