ವಿವಾದಗಳಿಂದ ದೂರವಾಗಿ ಜನಸ್ನೇಹಿ ಆಡಳಿತ ನೀಡುವುದು ನನ್ನ ಉದ್ದೇಶ: ಮೈಸೂರು ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್

ರೋಹಿಣಿ ಸಿಂಧೂರಿ-ಶಿಲ್ಪಾ ನಾಗ್ ಐಎಎಸ್ ಅಧಿಕಾರಿಗಳ ಕಿತ್ತಾಟದ ನಂತರ ನಡೆದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಮೈಸೂರು ಜಿಲ್ಲೆಗೆ ನೇಮಿಸಿದ ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಕಾರ ವಹಿಸಿಕೊಂಡರು.
ಡಾ.ಬಗಾದಿ ಗೌತಮ್
ಡಾ.ಬಗಾದಿ ಗೌತಮ್

ಮೈಸೂರು: ರೋಹಿಣಿ ಸಿಂಧೂರಿ-ಶಿಲ್ಪಾ ನಾಗ್ ಐಎಎಸ್ ಅಧಿಕಾರಿಗಳ ಕಿತ್ತಾಟದ ನಂತರ ನಡೆದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಮೈಸೂರು ಜಿಲ್ಲೆಗೆ ನೇಮಿಸಿದ ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮಕ್ಕೆ ನಿಕಟಪೂರ್ವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಸ್ವಾಮಿ ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಡಾ. ಬಗಾದಿ ಗೌತಮ್, ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಸವಾಲಾಗಿದೆ. ಜಿಲ್ಲಾಧಿಕಾರಿಯಾಗಿ ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತೇನೆ. ನನ್ನ ಜೀವನದಲ್ಲಿ ಎಂದಿಗೂ ವಿವಾದಕ್ಕೆ ಒಳಗಾಗಿಲ್ಲ. ಜನಸ್ನೇಹಿ ಆಡಳಿತ ನೀಡುವುದು ನನ್ನ ಉದ್ದೇಶ. ನಾನು ಲೋ ಪ್ರೊಫೈಲ್ ಅಧಿಕಾರಿ, ನನ್ನ 13 ವರ್ಷದ ಸರ್ವಿಸ್ ನಲ್ಲಿ ಬಹುತೇಕರು ನನ್ನ ಹೆಸರು ಸಹ ಕೇಳಿಲ್ಲ, ನಾನು ಕೆಲಸ ಮಾಡಲು ಈ ಸ್ಥಳಕ್ಕೆ, ಹುದ್ದೆಗೆ ಬಂದಿದ್ದೇನೆ, ವಿವಾದಿತ ಹುದ್ದೆಗೆ ಬಂದೆ ಎನಿಸುವುದಿಲ್ಲ, ಉತ್ತಮವಾಗಿ ಕೆಲಸ ಮಾಡಿದರೆ ಎಲ್ಲರ ಜೊತೆ ಉತ್ತಮವಾಗಿರಬಹುದು. ಮೈಸೂರಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು, ಸಾರ್ವಜನಿಕರ ಸಲಹೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಕೋವಿಡ್ ನಿರ್ವಹಣೆ ಜವಾಬ್ದಾರಿ ಇರುವ ಕಾರಣ ಜಿಲ್ಲಾಧಿಕಾರಿ ಕೆಲಸವು ಸವಾಲಾಗಿಯೇ ಇರುತ್ತದೆ. ಸವಾಲಾಗಿ ತೆಗೆದುಕೊಂಡು ಹೋಗುತ್ತೇನೆ ಎಂದರು.

ಡಾ. ಬಗಾದಿಯವರ ಪತ್ನಿ ಪಕ್ಕದ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ, ಈ ಬಗ್ಗೆ ಕೇಳಿದಾಗ, ಪತ್ನಿ ಮನೆ ಮೊದಲೂ ಹತ್ತಿರವೇ ಇತ್ತು, ಈಗ ಮತ್ತಷ್ಟು ಹತ್ತಿರ ಬಂದಿದ್ದೇವೆ, ಬೆಂಗಳೂರಿನಿಂದ ಮಂಡ್ಯ ದೂರವೇನಲ್ಲ ಎಂದು ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com